More

    ಗಣರಾಜ್ಯೋತ್ಸವದವರೆಗೂ ಕೋಟೆಗೆ ಬಾಗಿಲು!; ಕಾರಣ…

    ನವದೆಹಲಿ: ಜ. 26.. ಗಣರಾಜ್ಯೋತ್ಸವ ಬಂತೆಂದರೆ ದೆಹಲಿಯಲ್ಲಿನ ಕೆಂಪುಕೋಟೆ ದೇಶ ಮಾತ್ರವಲ್ಲದೆ ದೇಶದಾಚೆಗಿನ ಗಮನವನ್ನೂ ಸೆಳೆಯುತ್ತದೆ. ಮಾತ್ರವಲ್ಲ, ಬಹಳಷ್ಟು ಮಂದಿಯ ಪ್ರವಾಸಿಗರನ್ನು ಸೆಳೆಯುವ ಸ್ಥಳವಾಗಿಯೂ ಗಿಜಿಗುಡಲಾರಂಭಿಸುತ್ತದೆ. ಅಂಥ ಕೆಂಪುಕೋಟೆಗೆ ಈಗ ಬೀಗ ಜಡಿಯಲಾಗಿದ್ದು, ಜ. 26ರ ವರೆಗೂ ಕೋಟೆ ಮುಚ್ಚಿಯೇ ಇರಲಿದೆ.

    ಅಷ್ಟಕ್ಕೂ ಕೆಲದಿನಗಳ ಮಟ್ಟಿಗೆ ಕೆಂಪುಕೋಟೆಯ ಬಾಗಿಲನ್ನು ಹಾಕಿರಲು ಕಾರಣ ಹಕ್ಕಿಜ್ವರ. ಅಂದರೆ ಈ ಪ್ರದೇಶದಿಂದ ಸಂಗ್ರಹಿಸಿರುವ ಮಾದರಿಗಳಲ್ಲಿ ಹಕ್ಕಿಜ್ವರ ಖಚಿತಗೊಂಡಿರುವುದರಿಂದ ಸಂಬಂಧಿತ ಪ್ರಾಧಿಕಾರ ಮುನ್ನೆಚ್ಚರಿಕೆ ಕ್ರಮವಾಗಿ ಇಂಥದ್ದೊಂದು ನಿರ್ಧಾರ ತಳೆದಿದೆ.

    ಇದನ್ನೂ ಓದಿ: ಇದೇನಾದರೂ ಜಾರಿ ಆಯ್ತು ಅಂದ್ರೆ ನೀವು ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡೋಕೂ ಯೋಚ್ನೆ ಮಾಡ್ತೀರಿ!

    ಹಲವಾರು ಹಕ್ಕಿಗಳು ರೆಡ್​ ಫೋರ್ಟ್ ಪ್ರದೇಶದಲ್ಲಿ ಸತ್ತು ಬಿದ್ದಿದ್ದರಿಂದ, ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಜಲಂಧರ್ ಹಾಗೂ ಭೋಪಾಲ್​ನಲ್ಲಿ ನಡೆದ ಪರೀಕ್ಷೆಯ ವರದಿಯಲ್ಲಿ ಆ ಹಕ್ಕಿಗಳಲ್ಲಿ ಹಕ್ಕಿಜ್ವರ ಇದ್ದಿರುವುದು ದೃಢಪಟ್ಟಿದೆ. ಅಲ್ಲದೆ 15 ಮೃತಕಾಗೆಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವುಗಳಲ್ಲೂ ಹಕ್ಕಿಜ್ವರ ದೃಢಪಟ್ಟಿತ್ತು. ಹೀಗಾಗಿ ಜ. 26ರವರೆಗೆ ಕೆಂಪುಕೋಟೆ ಬಂದ್ ಆಗಿಯೇ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಮದ್ವೆ ಆಗು ಎಂದಿದ್ದಕ್ಕೆ ಕೊಂದೇಬಿಟ್ಟ, ಶವ ಬಾತ್​​ರೂಮಲ್ಲಿಟ್ಟು ಕಾಂಕ್ರೀಟ್​ ಕಟ್ದ; ಎರಡೂವರೆ ತಿಂಗಳ ಬಳಿಕ ಸಿಕ್ಕಿಹಾಕಿಕೊಂಡ..

    ವಯಸ್ಸಿದ್ದಾಗ ಮಾಡಬಾರದ್ದೆಲ್ಲಾ ಮಾಡಿದೆ, ಈಗ ಹೆಂಡ್ತಿ ಹತ್ತಿರ ಸೇರಿಸುತ್ತಿಲ್ಲ- ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts