More

    19ರಿಂದ ರಿಕ್ರಿಯೇಶನ್ ಕ್ಲಬ್‌ಗಳು ಆರಂಭ

    ಮಂಗಳೂರು: 2 ವರ್ಷಗಳಿಂದ ಸ್ಥಗಿತಗೊಂಡಿದ್ದ ರಿಕ್ರಿಯೇಶನ್ ಕ್ಲಬ್‌ಗಳು ಅ.19ರಿಂದ ಕಾನೂನು ಚೌಕಟ್ಟಿನೊಳಗೆ ಆರಂಭಗೊಳ್ಳಲಿದೆ ಎಂದು ಕುಡ್ಲ ರಿಕ್ರಿಯೇಶನ್ ಕ್ಲಬ್ ಮೆಂಬರ್ಸ್‌ ಅಸೋಸಿಯೇಶನ್‌ನ ಕಾನೂನು ಸಲಹೆಗಾರ ಮೋಹನ್‌ದಾಸ್ ರೈ ತಿಳಿಸಿದ್ದಾರೆ.

    ಸಂಸ್ಥೆ ಕರ್ನಾಟಕ ಸೊಸೈಟಿ ಕಾಯ್ದೆ 1960ರ ಪ್ರಕಾರ ನೊಂದಣಿಗೊಂಡಿದೆ. ಜೂಜಾಟ ಹೊರತುಪಡಿಸಿ ಕಾನೂನಿನ ಚೌಕಟ್ಟಿನಲ್ಲಿ ಆರಂಭಿಸಲು ಸಹಕಾರ ಸಂಘಗಳ ಉಪನಿಬಂಧಕರು ಅನುಮತಿ ನೀಡಿದ್ದು, ಷರತ್ತುಗಳಿಗೆ ಒಳಪಟ್ಟು ಕ್ಲಬ್‌ಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ ಎಂದವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕರ್ನಾಟಕ ಪೊಲೀಸ್ ಅಧಿನಿಯಮ 1960ರ ಪ್ರಕಟಣೆಯಂತೆ ನೊಂದಾಯಿತ ಕ್ಲಬ್‌ಗಳಿಗೆ ಅನುಮತಿ ಪತ್ರದ ಅಗತ್ಯ ಇರುವುದಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು 2014 ಅ.29ರಂದು ನೋಟಿಫಿಕೇಶನ್‌ನ ಕಲಂ 38ರ ಸಬ್ ಕಲಂಗಳಲ್ಲಿ ನಮೂದಿಸಿದ್ದಾರೆ. ಕ್ಲಬ್ ಸದಸ್ಯರು ಮನೋರಂಜನೆಗಾಗಿ ಒಳಾಂಗಣ ಮತ್ತು ಹೊರಾಂಗಣ ಆಟಗಳನ್ನು ನಡೆಸಿಕೊಂಡು ಬರುತ್ತಿದ್ದು, ವರ್ಷಂಪ್ರತಿ ವಾರ್ಷಿಕ ಮಹಾಸಭೆ, ವಾರ್ಷಿಕ ವರದಿ, ಮುಂದಿನ ವರ್ಷದ ಆಡಳಿತ ಸಮಿತಿ ರಚನೆ ಮತ್ತು ಖರ್ಚು ವೆಚ್ಚಗಳನ್ನು ನುರಿತ ಲೆಕ್ಕ ಪರಿಶೋಧಕರಿಂದ ನವೀಕರಣ ಮಾಡುತ್ತಿದ್ದೇವೆ ಎಂದರು.

    ಸಂಘದ ಅಧ್ಯಕ್ಷ ಪ್ರಕಾಶಚಂದ್ರ ರೈ, ಇನ್ನೋರ್ವ ಕಾನೂನು ಸಲಹೆಗಾರ ರಿತೇಶ್ ಬಂಗೇರ ಸುದ್ದಿಗೋಷ್ಠೀಯಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts