More

    ಉತ್ತರ ಕನ್ನಡದಲ್ಲಿ ದಾಖಲೆ ಮತದಾನ

    ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದೆ. ಕ್ಷೇತ್ರದಲ್ಲಿ 16.41 ಲಕ್ಷ ಮತದಾರರಿದ್ದು, ಅದರಲ್ಲಿ 12.56 ಲಕ್ಷ (ಶೇ.76.53)ವೋಟರ್‌ಗಳು ತಮ್ಮ ಹಕ್ಕು ಚಲಾಯಿಸಿದ್ದಾರೆ.
    ಮಂಗಳವಾರ ಮತದಾನ ನಡೆದಿದ್ದು, ಜಿಲ್ಲಾಽಕಾರಿ ಕಚೇರಿ ಶೇ. 73.52 ರಷ್ಟು ಮತದಾನವಾಗಿದೆ ಎಂದು ಅಂದಾಜು ಪಟ್ಟಿ ನೀಡಿತ್ತು. ಬುಧವಾರ ಬೆಳಗ್ಗೆ ಎಲ್ಲ ಮತಗಟ್ಟೆಗಳ ನಿಖರ ಮತದಾನದ ಪ್ರಮಾಣ ಲಭ್ಯವಾಗಿದೆ. ಅಂತಿಮ ಪಟ್ಟಿಯನ್ನು ಜಿಲ್ಲಾ ಚುನಾವಣಾ ಶಾಖೆ ಬಿಡುಗಡೆ ಮಾಡಿದೆ.
    2019 ರಲ್ಲಿ ಶೇ.74.16 ರಷ್ಟು, 2014 ರಲ್ಲಿ ಶೇ.69.01 ರಷ್ಟು, 2009 ರಲ್ಲಿ ಶೇ.59.09 ರಷ್ಟು ಮತದಾನವಾಗಿತ್ತು. ಉತ್ತರ ಕನ್ನಡ ಲೋಕಸಭಾ ಚುನಾವಣೆಯ ಇತಿಹಾಸದಲ್ಲಿ ಇದು ದಾಖಲೆಯ ಮತದಾನವಾಗಿದೆ. 2019 ಕ್ಕೆ ಹೋಲಿಸಿದರೆ 2.14 ರಷ್ಟು 2014 ಕ್ಕೆ ಹೋಲಿಸಿದರೆ 7.26 ರಷ್ಟು ಹೆಚ್ಚು ಮತದಾನವಾಗಿದೆ.
    8,23,604 ಪುರುಷರು, 8,17,536 ಮಹಿಳೆಯರು ಹಾಗೂ 10 ಮಂದಿ ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 16,41,156 ಮತದಾರರು ಇದ್ದಾರೆ. ಮಂಗಳವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ 6,33,630 ಪುರುಷ, 6,22,392 ಮಹಿಳೆಯರು ಹಾಗೂ 5 ಜನ ತೃತೀಯ ಲಿಂಗಿಗಳು ಮತ ಚಲಾಯಿಸಿದ್ದಾರೆ.

    ಸುಶಿಕ್ಷಿತರೇ ಸೋಮಾರಿಗಳು
    ನಗರ ಪ್ರದೇಶ ಅಥವಾ ಸುಶಿಕ್ಷಿತರು ಹೆಚ್ಚಿರುವ ಪ್ರದೇಶಗಳಲ್ಲೇ ಮತದಾನದ ಪರಮಾಣ ಕಡಿಮೆಯಾಗಿದೆ. ಶಿರಸಿಯ ಶಿರಗುಣಿ ಮತಗಟ್ಟೆಯಲ್ಲಿ ಅತಿ ಹೆಚ್ಚು ಎಂದರೆ 94.38, ಹಳಿಯಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೇ. 93.89, ಶಿರಸಿಯ ಧೋರಣಗಿರಿಯಲ್ಲಿ ಶೇ.93.4, ಕಾರವಾರದ ಶಿರ್ವೆಯಲ್ಲಿ ಹಾಗೂ ಶಿರಸಿಯ ಹುತ್ತಗಾರ ಹಳ್ಳಿಬೈಲ್‌ನಲ್ಲಿ ಶೇ.93.22, ಕಾರವಾರದ ಲಾಂಡೆಯಲ್ಲಿ ಶೇ.92.91 ರಷ್ಟು ಮತದಾನವಾಗಿದ್ದು, ಇವು ಅತಿ ಹೆಚ್ಚು ಮತದಾನವಾದ ಮತಗಟ್ಟೆಯಳಾಗಿವೆ. ಹಳಿಯಾಳ ಹೊರತಾಗಿ ಎಲ್ಲವೂ ಅಪ್ಪಟ ಗ್ರಾಮೀಣ ಪ್ರದೇಶಗಳಾಗಿವೆ.
    ಕೈಗಾ ಅಣು ವಿದ್ಯುತ್ ಕೇಂದ್ರದ ಉದ್ಯೋಗಿಗಳು ವಾಸವಿರುವ ಮಲ್ಲಾಪುರ, ಕುರ್ನಿಪೇಟೆ, ಕೆಪಿಸಿ ಉದ್ಯೋಗಿಗಳು ವಾಸವಿರುವ ಗಣೇಶಗುಡಿ ಮತಗಟ್ಟೆಗಳು ಹಾಗೂ ಕಾರವಾರ ಪಟ್ಟಣದ ಕೆಲ ಮತಗಟ್ಟೆಗಳಲ್ಲಿ ಮತದಾನ ಶೇ. 60 ನ್ನೂ ದಾಟಿಲ್ಲ. ಹಳಿಯಾಳ ಪಟ್ಟಣದ ಎಂಜಿಸಿಎA ವಿದ್ಯಾಲಯದಲ್ಲಿ ಶೇ.47.05 ರಷ್ಟು ಮತದಾನವಾಗಿದ್ದು, ಇದು ಕ್ಷೇತ್ರದಲ್ಲೇ ಅತಿ ಕಡಿಮೆ ಮತದಾನವಾದ ಕೇಂದ್ರವಾಗಿದೆ. ಕಾರವಾರದ ಕುರ್ನಿಪೇಟೆಯ ಕೇಂದ್ರದಲ್ಲಿ ಶೇ.50.26, ಜೊಯಿಡಾ ಗಣೇಶಗುಡಿಯ ಕೆಪಿಸಿ ಸ್ಕೂಲ್‌ನಲ್ಲಿ ಶೇ.50.76, ದಾಂಡೇಲಿ ಜನತಾ ವಿದ್ಯಾಲಯ ಪಿಯು ಕಾಲೇಜ್‌ನಲ್ಲಿ ಶೇ.51.02, ಲೋಂಡಾ ಕೇಂದ್ರದಲ್ಲಿ ಶೇ.51.83, ಹಳಿಯಾಳ ಕಿಪ್ರಾ ಶಾಲೆ-120 ಕೇಂದ್ರದಲ್ಲಿ ಶೇ. 51.97 ಹಾಗೂ ಕೈಗಾ ಟೌನ್‌ಶಿಪ್ ಸ್ಕೂಲ್‌ನಲ್ಲಿ ಶೇ.52.33 ಮತದಾನವಾಗಿದೆ. ಕಾರವಾರದ ಸೇಂಟ್ ಮೈಕಲ್, ಕುಟಿನೋ ರಸ್ತೆಯ ಕೇಂದ್ರದಲ್ಲೂ ಮತದಾನ ಕಡಿಮೆಯಾಗಿದೆ.


    ಕ್ಷೇತ್ರವಾರು ಮತದಾನ
    ಕ್ಷೇತ್ರ ಒಟ್ಟು ಮತದಾರರು ಒಟ್ಟು ಮತದಾನ ಪುರುಷ ಮಹಿಳೆ ಶೇಕಡವಾರು
    ಖಾನಾಪುರ 2,19,442 1,62,065 83,478 78,586 73.85
    ಕಿತ್ತೂರು 2,00,301 1,52,772 78,136 74,634 76.27
    ಹಳಿಯಾಳ 1,85,695 1,40,971 71,131 69,839 75.91
    ಕಾರವಾರ 2,24,894 1,65,599 81,917 83,682 73.63
    ಕುಮಟಾ 1,91,475 1,47,307 73,479 73,827 76.93
    ಭಟ್ಕಳ 2,27,706 1,73,071 85,124 87,947 76.00
    ಶಿರಸಿ 2,04,898 1,64,905 83,781 81,124 80.48
    ಯಲ್ಲಾಪುರ 1,86,745 1,49,337 76,584 72,753 79.96

    https://www.vijayavani.net/election-duty-engineer-suspand



    ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿಯಿಂದ ಕೈಗೊಂಡ ವೈವಿಧ್ಯಮಯವಾದ ವ್ಯಾಪಕ ಮತದಾನ ಜಾಗೃತಿ ಕಾರ್ಯಕ್ರಮಗಳು ಫಲ ಕೊಟ್ಟಿವೆ. ಕಳೆದ ಬಾರಿ ಕಡಿಮೆ ಮತದಾನವಾಗಿದ್ದ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಹೆಚ್ಚಿನ ಗಮನ ಹರಿಸಿ ಜಾಗೃತಿ ಮಾಡಲಾಗಿತ್ತು. ಮತದಾರರಿಗೆ ತೊಂದರೆಯಾಗದAತೆ ಮತಗಟ್ಟೆಗಳಲ್ಲಿ ಸೂಕ್ತ ನೆರಳು ಮತ್ತು ನೀರಿನ ಸೌಲಭ್ಯ ಒದಗಿಸಿರುವುದು,ಹೆಚ್ಚಿನ ಸಂಖ್ಯೆಯ ಯುವ ಮತದಾರರು ಸೇರಿದಂತೆ ಎಲ್ಲ ಮತದಾರರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಲು ಕಾರಣವಾಗಿದೆ.
    ಗಂಗೂಬಾಯಿ ಮಾನಕರ್
    ಚುನಾವಣಾಧಿಕಾರಿ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts