More

    14 ವರ್ಷದ ಬಳಿಕ ರಾಜ್ಯದಲ್ಲಿ ದಾಖಲೆ ಮಳೆ. ಇನ್ನೂ 4 ದಿನ ಇನ್ನಷ್ಟು ಮಳೆ ಬಿರುಸು..

    ಬೆಂಗಳೂರು: ಹದಿನಾಲ್ಕು ವರ್ಷದ ಬಳಿಕ ರಾಜ್ಯದಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿದೆ. 2022ರ ಜೂ.1ರಿಂದ ಸೆ.2ರ ವರೆಗೆ ರಾಜ್ಯಾದ್ಯಂತ ಶೇ.24 ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. 1975ರ ಜೂ.1ರಿಂದ ಸೆ.2ರವರೆಗೆ ವಾಡಿಕೆಗಿಂತ ಶೇ.30 ಅಧಿಕ ಮಳೆ ಸುರಿದಿತ್ತು.

    ಆಮೇಲೆ, 2007ರ ಜೂ.1ರಿಂದ ಸೆ.2ರವರೆಗೆ ಶೇ.25 ಹೆಚ್ಚು ಮಳೆಯಾಗಿತ್ತು. 2008ರಲ್ಲಿ ಶೇ.8, 2009ರಲ್ಲಿ ಶೇ.10, 2013ರಲ್ಲಿ ಶೇ.6, 2019ರಲ್ಲಿ ಶೇ.10, 2020ರಲ್ಲಿ ಶೇ.7 ವಾಡಿಕೆಗಿಂತ ಹೆಚ್ಚು ಮಳೆಯಾದರೆ, 2012, 2015, 2016 ಮತ್ತು 2017ರಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು.

    ರಾಜ್ಯದಲ್ಲಿ 26 ವರ್ಷದ ಬಳಿಕ 2022ರ ಆ.27ರಿಂದ ಸೆ.2ವರೆಗೆ ದಾಖಲೆ ಮಳೆ ಬಿದ್ದಿದೆ. 1995ರ ಇದೇ ಅವಧಿಯಲ್ಲಿ ಶೇ.217 ಮಳೆಯಾಗಿತ್ತು. 2008ರಲ್ಲಿ ಶೇ.138, 2014ರಲ್ಲಿ ಶೇ.124 ಮಳೆ ರಾಜ್ಯದಲ್ಲಿ ಬಿದ್ದಿರುವುದು ವರದಿಯಾಗಿತ್ತು. ಅಲ್ಲದೆ, ದಕ್ಷಿಣ ಒಳನಾಡಿನಲ್ಲಿ ಆ.27ರಿಂದ ಸೆ.2ರವರೆಗೆ ಇದೇ ಮೊದಲ ಬಾರಿ ವಾಡಿಕೆಗಿಂತ ಅತಿ ಹೆಚ್ಚು ಶೇ.423 ಮಳೆಯಾಗಿದೆ. 1971ರಿಂದ 2021ರವರೆಗೆ ಇದೇ ಅವಧಿಯಲ್ಲಿ ಇಷ್ಟೊಂದು ಮಳೆ ಬಿದ್ದಿರಲಿಲ್ಲ. 2008ರಲ್ಲಿ ಮಾತ್ರ ಇದೇ ಅವಧಿಯಲ್ಲಿ ಶೇ.402 ವಾಡಿಕೆಗಿಂತ ಅಧಿಕ ಮಳೆ ಸುರಿದಿತ್ತು. ಉತ್ತರ ಒಳನಾಡಿನಲ್ಲಿ 8 ವರ್ಷದ ಬಳಿಕ ಇದೇ ಅವಧಿಯಲ್ಲಿ ಶೇ.203 ಮತ್ತು ಮಲೆನಾಡಿನಲ್ಲಿ ಶೇ.87 ಹೆಚ್ಚು ಮಳೆಯಾದರೆ, ಕರಾವಳಿಯಲ್ಲಿ ವಾಡಿಕೆಗಿಂತ ಶೇ.7 ಕಡಿಮೆ ಮಳೆ ಬಿದ್ದಿದೆ.

    ಇನ್ನೂ 4 ದಿನ ಮಳೆ ಬಿರುಸು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಇನ್ನಷ್ಟು ಬಿರುಸುಗೊಳ್ಳಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗಿನಲ್ಲಿ ಮುಂದಿನ 48 ಗಂಟೆ ಯೆಲ್ಲೋ ಅಲರ್ಟ್ ಇದ್ದರೆ, ಸೆ.8ರಂದು ಈ ಭಾಗಗಳಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಕೊಟ್ಟಿದೆ. ಚಿತ್ರದುರ್ಗ, ತುಮಕೂರು, ಮೈಸೂರು, ಚಾಮರಾಜನಗರ, ಬೆಂಗಳೂರು, ಬೆಂ.ಗ್ರಾಮಾಂತರ, ವಿಜಯಪುರ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಬಳ್ಳಾರಿಯಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅಲರ್ಟ್ ಇರಲಿದೆ.

    ನಿದ್ರೆ ಬರುತ್ತಿಲ್ಲ ಎಂದು ಬೇಸತ್ತು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts