More

    ದಾಖಲೆ ಮುರಿದು ಚಿನ್ನ ಗೆದ್ದ ನಾರ್ವೇ ಕ್ರೀಡಾಪಟು; ಅಂಗಿ ಹರಿದು ಸಂಭ್ರಮಿಸಿದ!

    ಟೋಕಿಯೋ : ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪುರುಷರ 400 ಮೀಟರ್​ ಹರ್ಡಲ್ಸ್​ ರೇಸ್​ನಲ್ಲಿ ನಾರ್ವೇಯ ಕಾರ್ಸ್​ಟೆನ್ ವಾರ್​​ಹೋಂ, ಹಿಂದಿನ ವಿಶ್ವ ದಾಖಲೆಯನ್ನು ಮುರಿದು ಚಿನ್ನದ ಪದಕ ಗಳಿಸಿದ್ದಾರೆ. ಈ ಸಂಭ್ರಮವನ್ನು ಆತ ತನ್ನ ಅಂಗಿಯನ್ನು ಹರಿದುಹಾಕಿ ಆಚರಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಈ ದೃಶ್ಯಗಳು ವೈರಲ್ ಆಗಿವೆ.

    400 ಮೀ ಹರ್ಡಲ್ಸ್​ ಸ್ಪರ್ಧೆಯಲ್ಲಿ, 29 ವರ್ಷಗಳ ಹಿಂದೆ ಕೆವಿನ್​ ಯಂಗ್​ ಎಂಬ ಆಟಗಾರ 46.70 ಸೆಕೆಂಡುಗಳ ವಿಶ್ವ ದಾಖಲೆಯನ್ನು ರಚಿಸಿದ್ದರು. ಇಂದು ಅದೇ ಸ್ಪರ್ಧೆಯಲ್ಲಿ, 25 ವರ್ಷ ವಯಸ್ಸಿನ ವಾರ್​​ಹೋಂ, 45.94 ಸೆಕೆಂಡುಗಳಿಗೆ ಫಿನಿಶಿಂಗ್​ ಲೈನ್ ತಲುಪಿದ್ದು, ಪ್ರಥಮ ಸ್ಥಾನದೊಂದಿಗೆ ಒಲಿಂಪಿಕ್ಸ್​ ಚಿನ್ನದ ಪದಕ ಗೆದ್ದರು.

    ದಾಖಲೆ ಮುರಿದು ಚಿನ್ನ ಗೆದ್ದ ನಾರ್ವೇ ಕ್ರೀಡಾಪಟು; ಅಂಗಿ ಹರಿದು ಸಂಭ್ರಮಿಸಿದ!

    ಕ್ರೀಡಾ ಇತಿಹಾಸದಲ್ಲಿ ಇದುವರೆಗೆ ಕೇವಲ 4 ಅಥ್ಲೀಟ್​ಗಳು 47 ಸೆಕೆಂಡುಗಳ ಒಳಗೆ ಈ ಹರ್ಡಲ್ಸ್​ ಈವೆಂಟನ್ನು ಮುಗಿಸಿದ್ದಾರೆ. ಇಂದಿನ ಸ್ಪರ್ಧೆಯಲ್ಲಿ ವಾರ್​ಹೋಂನೊಂದಿಗೆ ಅಮೆರಿಕದ ರೈ ಬೆಂಜಮಿನ್​ 46.17 ಸೆಕೆಂಡುಗಳಲ್ಲಿ ಮುಗಿಸಿ ಬೆಳ್ಳಿ ಪದಕ ಗೆದ್ದರೆ, ಬ್ರೆಜಿಲ್​ನ ಅಲಿಸನ್ ಡಾಸ್​ ಸ್ಯಾಂಟೋಸ್​ 46.72 ಸೆಕೆಂಡುಗಳಲ್ಲಿ ಮುಗಿಸಿ ಕಂಚು ಗೆದ್ದರು. ಈ ಇಬ್ಬರೂ ಉತ್ತಮ ವೇಗ ಪ್ರದರ್ಶಿಸಿ, ಪ್ರಾದೇಶಿಕ ದಾಖಲೆಗಳನ್ನು ನಿರ್ಮಿಸಿದ್ದಾರೆ.

    ಇದನ್ನೂ ಓದಿ: ‘ಗೆಲುವು-ಸೋಲು ಜೀವನದ ಭಾಗ’ – ಹಾಕಿ ಸೋಲಿಗೆ ಮೋದಿ ಸಾಂತ್ವನ

    ಈ ಗೆಲುವಿನ ಸಂತಸವನ್ನು ತಮ್ಮ ಸ್ಲೀವ್​ಲೆಸ್​ ಸ್ಪೋರ್ಟ್ಸ್​​​ ಶರ್ಟನ್ನು ಹರಿದು ತೋರ್ಪಡಿಸಿದ ವಾರ್​ಹೋಂ, “ನನ್ನನ್ನು ಬಹಳ ಬಾರಿ ಪರ್ಫೆಕ್ಟ್​ ರೇಸ್​ ಯಾವುದು ಎಂದು ಕೇಳುತ್ತಾರೆ. ಅದು ಇರುವುದಿಲ್ಲ ಎಂದು ನಾನು ಹೇಳುತ್ತಿದ್ದೆ. ಆದರೆ ಇವತ್ತಿನ ರೇಸ್​ನಲ್ಲಿ ನಾನು ಅದಕ್ಕೆ ಬಹಳ ಸನಿಹದಲ್ಲಿದ್ದೇನೆ ಎನಿಸಿತು” ಎಂದಿದ್ದಾರೆ. “ಇದು ನನಗೆಷ್ಟು ಮುಖ್ಯ ಎಂದು ಬಣ್ಣಿಸಲಾರೆ. ನಾನು ಬೆಳಿಗ್ಗೆಯಿಂದ ರಾತ್ರಿವರೆಗೆ ಇದನ್ನೇ ಮಾಡುತ್ತೇನೆ. ಇದು ತುಂಬಾ ಮಹತ್ವದ್ದು” ಎಂದು ಹರ್ಷೋದ್ಗಾರ ಮಾಡಿದ್ದಾರೆ. (ಏಜೆನ್ಸೀಸ್)

    ಮಾಜಿ ಸಿಎಂ ಬಿಎಸ್​ವೈ ಟೀಮ್‌ನ ಹತ್ತು ಜನರು ಹುದ್ದೆಯಿಂದ ಬಿಡುಗಡೆ

    27 ವರ್ಷಗಳ ದಾಂಪತ್ಯ ಮುರಿದ ಬಿಲ್​ ಗೇಟ್ಸ್​ – ಮೆಲಿಂಡ ಫ್ರೆಂಚ್​… ಅಧಿಕೃತ ವಿಚ್ಛೇದನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts