More

    ಬಿಬಿಎಂಪಿ ವೈದ್ಯೆ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು

    ಬೆಂಗಳೂರು: ಬಿಬಿಎಂಪಿ ಆರೋಗ್ಯಾಧಿಕಾರಿ ಡಾ. ಸವಿತಾ ವಿರುದ್ಧದ ಕರ್ತವ್ಯಲೋಪ ಪ್ರಕರಣದಲ್ಲಿ ಶಿಸ್ತುಕ್ರಮ ಕೈಗೊಳ್ಳುವಂತೆ ಕೋರಿ ಪಾಲಿಕೆ ಉಪ ಆಯುಕ್ತ (ಆಡಳಿತ) ನಗರಾಭಿವೃಧ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಶಿಾರಸು ಮಾಡಿದ್ದಾರೆ.

    ಪ್ರಸ್ತುತ ಪೂರ್ವ ವಲಯದಲ್ಲಿ ಆರೋಗ್ಯಾಧಿಕಾರಿ ಆಗಿ ಕೆಲಸ ನಿರ್ವಹಿಸುತ್ತಿರುವ ಡಾ. ಸವಿತಾ, 2022ರಲ್ಲಿ ರಾಜರಾಜೇಶ್ವರಿನಗರ ವಲಯದ ಆರೋಗ್ಯಾಧಿಕಾರಿ ಹುದ್ದೆಯಲ್ಲಿದ್ದಾಗ ತನ್ನ ಪುತ್ರನಿಗೆ ನಕಲಿ ಕಂಪನಿ ಮೂಲಕ ಪಾಲಿಕೆಯ ಕೆಲಸವೊಂದರ ಕಾರ್ಯಾದೇಶವನ್ನು ಕೊಡಿಸಿದ್ದರು. ಇದರ ವಿರುದ್ಧ ಇತ್ತೀಚಿಗೆ ಪಾಲಿಕೆ ಮುಖ್ಯ ಆಯುಕ್ತರು ತನಿಖೆಗೆ ಆದೇಶಿಸಿದ್ದರು. ಇದರ ವರದಿ ಇತ್ತೀಚಿಗೆ ಸಲ್ಲಿಕೆಯಾಗಿದ್ದು, ಡಾ.ಸವಿತಾ ವಿರುದ್ಧದ ಆರೋಪ ಸಾಬೀತಾಗಿದೆ. ಜತೆಗೆ ಆರೋಪ ಸಂಬಂಧ ವೈದ್ಯೆಯಿಂದ ವಿವರಣೆ ಕೋರಿ ನೋಟಿಸ್ ನೀಡಿದ್ದರೂ, ಈವರೆಗೂ ಉತ್ತರಿಸಿಲ್ಲ. ಕೊನೆಯ ಎಚ್ಚರಿಕೆಯ ಬಳಿಕವೂ ವೈದ್ಯೆ ಸಮಜಾಯಿಷಿ ನೀಡದ ಕಾರಣ ಪಾಲಿಕೆಯು ಆಕೆಯ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದೆ.

    ಕಳೆದ ವರ್ಷ ಜೂ.24ರಂದು ಪೌರಕಾಮಿಕರ ಅವಲಂಬಿತರ ಒಕ್ಕೂಟವು ಡಾ. ಸವಿತಾ ವಿರುದ್ಧ ಬಿಬಿಎಂಪಿಗೆ ದೂರು ನೀಡಿತ್ತು. ವೈದ್ಯೆಯು ತನ್ನ ಪುತ್ರನ ನಕಲಿ ಕಂಪನಿಗೆ ರಾಜರಾಜೇಶ್ವರಿನಗರ ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ ಗುತ್ತಿಗೆ ನೀಡಿ 41.45 ಲಕ್ಷ ರೂ. ಮೊತ್ತವನ್ನು ದುರುಪಯೋಗಪಡಿಸಿಕೊಂಡಿದ್ದಾರೆಂದು ದೂರಲಾಗಿತ್ತು. ಈ ವಿಷಯ ತಿಳಿದಿದ್ದ ಮೇಲಾಧಿಕಾರಿಗಳು ಕೂಡ ಮೌನಕ್ಕೆ ಶರಣಾಗಿದ್ದರು. ಮತ್ತೆ ತನಿಖೆ ನಡೆಸಿದ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವೈದ್ಯೆ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದ್ದು, ಆರೋಪ ಪಟ್ಟಿ ಸಲ್ಲಿಸುವ ಸಂಬಂಧ ನಗರಾಭಿವೃಧ್ಧಿ ಇಲಾಖೆಗೆ ತನಿಖಾ ವರದಿಯನ್ನು ಶಿಫಾರಸು ಪತ್ರದೊಂದಿಗೆ ರವಾನಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts