More

    ಈ ಮಳೆಗಾಲದಲ್ಲಿ ಸವಿಯಲು ವೆಜ್ ಪ್ರಿಯರಿಗಾಗಿ ದಹಿ ಪನೀರ್ ಕಬಾಬ್

    ಬೆಂಗಳೂರು: ದಹಿ ಪನೀರ್ ಕಬಾಬ್ ಬಾಯಿ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಮಾಡುವುದು ಕೂಡ ಬಹಳ ಸುಲಭ. ಹಾಗಾದರೆ ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವನ್ನು ತಿಳಿಯಲು ಮುಂದೆ ಓದಿ…

    ಬೇಕಾಗುವ ಪದಾರ್ಥಗಳು
    3 ಕಪ್ ಪನೀರ್ (ತುರಿದದ್ದು)
    1 ಕಪ್ ಮೊಸರು
    1 ಕತ್ತರಿಸಿದ ಈರುಳ್ಳಿ
    1 ಟೀ ಸ್ಪೂನ್ ಕೆಂಪು ಮೆಣಸಿನ ಪುಡಿ
    1 ಟೀ ಸ್ಪೂನ್ ಗರಂ ಮಸಾಲಾ ಪುಡಿ 3
    ಹಸಿರು ಮೆಣಸಿನಕಾಯಿ (ಕತ್ತರಿಸಿದ್ದು)
    ½ ಟೀಸ್ಪೂನ್ ಸಕ್ಕರೆ
    ತೈಲ
    5 ಚಮಚ ಗೋಡಂಬಿ (ಕತ್ತರಿಸಿದ್ದು)
    ಕೊತ್ತಂಬರಿ ಸೊಪ್ಪು (ಕತ್ತರಿಸಿದ್ದು)
    12 ಟೀಸ್ಪೂನ್ ಬ್ರೆಡ್ ಕ್ರಂಬ್ಸ್
    ರುಚಿಗೆ ತಕ್ಕಂತೆ ಉಪ್ಪು

    ಮಾಡುವ ವಿಧಾನ
    ನೀವು ಒಂದು ದೊಡ್ಡ ಬಟ್ಟಲಿನಲ್ಲಿ ಬ್ರೆಡ್ ಕ್ರಂಬ್ಸ್ ಮತ್ತು ಎಣ್ಣೆಯನ್ನು ಹೊರತುಪಡಿಸಿ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಬೇಕು. ಮಿಶ್ರಣವನ್ನು ಮಧ್ಯಮ ಗಾತ್ರದಲ್ಲಿ ಕಬಾಬ್ ಆಕಾರದಲ್ಲಿ ಮಾಡಿಕೊಳ್ಳಬೇಕು. ಇದನ್ನು ಬ್ರೆಡ್ ಕ್ರಂಬ್ಸ್ ನಲ್ಲಿ ಅದ್ದಿ, ನಂತರ ಬಾಣಲೆಯಲ್ಲಿ ಗೋಲ್ಡನ್ ಬಣ್ಣ ಆಗುವವರೆಗೆ ಹುರಿಯಬೇಕು. ಈಗ ದಹಿ ಕಬಾಬ್ ರೆಡಿ. ಇದನ್ನು ಚಟ್ನಿ ಮತ್ತು ಸಾಸ್ ಜೊತೆ ಸವಿಯಬಹುದು.

    ಆರೋಗ್ಯಕ್ಕೆ ಪ್ರಯೋಜನಕಾರಿಯಾದ ದಾಳಿಂಬೆ ಲಸ್ಸಿ ಮಾಡೋದು ಬಹಳ ಸಿಂಪಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts