More

    ತಡ್ಕೊಳ್ಳೋಕೆ ರೆಡಿಯಾಗಿ ಕರೊನಾ ಶಾಕ್​!

    ಜಿನೇವಾ: ಕರೊನಾ ಸೋಂಕು ಈಗ ಕೊಡ್ತಾ ಇರುವ ಏಟಿನ ನೋವು 2008ರ ಜಾಗತಿಕ ಆರ್ಥಿಕ ಹಿಂಜರಿತಕ್ಕಿಂತಲೂ ಹೆಚ್ಚು ಭೀಕರವಾಗಿರಲಿದೆ ಎಂದು ಇಂಟರ್​ನ್ಯಾಷನಲ್​ ಮಾನಿಟರಿ ಫಂಡ್ (ಐಎಂಎಫ್)ನ ಮ್ಯಾನೇಜಿಂಗ್ ಡೈರೆಕ್ಟರ್​​ ಕ್ರಿಸ್ಟಲಿನಾ ಜೋರ್ಜಿವಾ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಈ ಸಂಕಷ್ಟವನ್ನು ನಿವರ್ಹಿಸಲು ನಾವು ಒಂದು ಲಕ್ಷ ಕೋಟಿ ಡಾಲರನ್ನು ಮೀಸಲಿಡುತ್ತಿದ್ದೇವೆ ಎಂದ ಜೋರ್ಜಿವಾ, ಆರ್ಥಿಕತೆಯ ರಕ್ಷಣೆಗೆ ಎಷ್ಟು ಬೇಕೋ ಅಷ್ಟು ಹಣವನ್ನು ಇದರಿಂದ ಬಳಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಕ್ರಿಸ್ಟಲಿನಾ ಅವರು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿ ಜಗತ್ತನ್ನು ಎಚ್ಚರಿಸಿದ್ದಾರೆ. ಅಲ್ಲದೆ, ನಾವು ಈಗಾಗಲೇ ಆರ್ಥಿಕ ಹಿಂಜರಿತದಲ್ಲಿದ್ದೇವೆ. ಇದು ಜಾಗತಿಕ ಹಣಕಾಸು ಬಿಕ್ಕಟ್ಟಿಗಿಂತಲೂ ಭೀಕರವಾಗಿ ಇರಲಿದೆ. ಇದು ಎರಡು ರೀತಿಯ ಬಿಕ್ಕಟ್ಟು ಎಂದು ವ್ಯಾಖ್ಯಾನಿಸಿದ ಅವರು, ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ COVID19 ಸೋಂಕು ಆರೋಗ್ಯ ಮತ್ತು ಆರ್ಥಿಕ (ಆ… ಆ…) ವಿಪತ್ತನ್ನು ತಂದೊಡ್ಡಿದೆ.ಜೀವ ಉಳಿಸುವುದು ಮತ್ತು ಬದುಕನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಾವು ಈಗ ಆದ್ಯತೆ ನೀಡಬೇಕಾಗಿದೆ ಎಂದು ವಿವರಿಸಿದ್ದಾರೆ.

    ಇನ್ನು ಐಎಂಎಫ್ ಈ ಸಂಕಷ್ಟದಿಂದ ಹೊರಬರಲು ಒಂದು ಲಕ್ಷ ಕೋಟಿ ಡಾಲರ್ ಮೀಸಲಿಟ್ಟಿದೆ. ಇನ್ನೊಂದೆಡೆ, ಎಮರ್ಜಿಂಗ್ ಮಾರ್ಕೆಟ್​ನಿಂದ ಈಗಾಗಲೇ ಅಂದಾಜು 90 ಶತಕೋಟಿ ಡಾಲರ್ ಹಣ ಮಂಗಮಾಯವಾಗಿದೆ. ಇದು 2008ರ ಜಾಗತಿಕ ಹಣಕಾಸು ಬಿಕ್ಕಟ್ಟಿಗಿಂತಲೂ ತೀವ್ರವಾದ ಪರಿಣಾಮ ಬೀರಲಿದೆ. ಐಎಂಎಫ್ ಈ ಮಾರ್ಕೆಟ್​ಗಳಿಗೆ ನೆರವು ನೀಡಲು ಮೀಸಲಿಟ್ಟಿರುವ ಹಣವನ್ನು ವ್ಯಯಿಸಲಿದೆ.ಈಗಾಗಲೇ 90 ರಾಷ್ಟ್ರಗಳು ಐಎಂಎಫ್ ಎದುರು ತುರ್ತು ಹಣಕಾಸಿನ ನೆರವು ಕೋರಿ ಅರ್ಜಿ ಸಲ್ಲಿಸಿವೆ. ಆರೋಗ್ಯ ಸೇವೆಗೆ ಸಂಬಂಧಿಸಿದ ತುರ್ತು ಕಾರ್ಯಗಳನ್ನು ಗಮನಿಸಿಕೊಂಡು ಅವುಗಳಿಗೆ ನೆರವು ನೀಡಲಾಗುತ್ತದೆ. ಮತ್ತೊಂದೆಡೆ, ಸುಸ್ಥಿ ಸಾಲ ಮತ್ತು ಉದ್ಯೋಗ ಕಡಿತದ ಪರಿಣಾಮ ಸಾಲಮರುಪಾವತಿ ಕಷ್ಟಕರವಾಗಲಿದೆ ಎಂದು ಐಎಂಎಫ್ ಎಚ್ಚರಿಸಿದೆ.

    ವಿಶ್ವ ಆರೋಗ್ಯ ಸಂಸ್ಥೆಯ ಡೇಟಾ ಪ್ರಕಾರ, 10 ಲಕ್ಷಕ್ಕೂ ಹೆಚ್ಚು COVID19 ಕೇಸ್​ಗಳು ಧೃಡಪಟ್ಟಿದ್ದು, ಇದರಲ್ಲಿ 50,000 ಸಾವು ಸಂಭವಿಸಿದೆ. (ಏಜೆನ್ಸೀಸ್) 

    ಬಾಗಲಕೋಟೆಯಲ್ಲಿ ಕರೊನಾಗೆ ಮೊದಲ ಬಲಿ: 75 ವರ್ಷದ ವೃದ್ದ ಕರೊನಾ ಚಿಕಿತ್ಸೆ ಫಲಿಸದೆ ಸಾವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts