More

    ಮಧ್ವ ಸಿದ್ಧಾಂತದ ಬೀಜ ಬಿತ್ತಿದ ಗೋವಿಂದ ಆಚಾರ್ಯ, ದೇವಾನಂದ ಉಪಾಧ್ಯಾಯ ಅನಿಸಿಕೆ

    ಉಡುಪಿ: ಮೊದಲಿಗೆ ವಿದೇಶಗಳಿಗೆ ತೆರಳಿ ಮಧ್ವಸಿದ್ಧಾಂತವನ್ನು ಪ್ರಚಾರಗೈದವರು ವಿದ್ವಾಂಸ ಡಾ.ಬನ್ನಂಜೆ ಗೋವಿಂದಾಚಾರ್ಯರು ಎಂದು ಎಸ್.ಎಂ.ಎಸ್.ಪಿ. ಸಭಾ ಕಾರ್ಯದರ್ಶಿ ದೇವಾನಂದ ಉಪಾಧ್ಯಾಯ ಹೇಳಿದರು.

    ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಕಾಲೇಜಿನಲ್ಲಿ ನಡೆದ ಬನ್ನಂಜೆ ಗೋವಿಂದಾಚಾರ್ಯರ ಸಂಸ್ಮರಣಾ ಸಭೆಯಲ್ಲಿ ಮಾತನಾಡಿದರು. ಬನ್ನಂಜೆಯವರಿಗಿದ್ದ ಇಂಗ್ಲೀಷ್ ಜ್ಞಾನದೊಂದಿಗೆ ಅದಮಾರು ಮಠಾಧೀಶ ವಿಬುಧೇಶ ತೀರ್ಥರ ಸಹಾಯವೂ ಇದಕ್ಕೆ ಪೂರಕವಾಗಿತ್ತು ಎಂದರು. ದೇಶದಲ್ಲಿ ಅನೇಕ ವಿದ್ವಾಂಸರಿದ್ದರೂ ಬನ್ನಂಜೆಯವರು ಎಲ್ಲರಿಗಿಂತಲೂ ವಿಭಿನ್ನರಾಗಿದ್ದರು. ಅವರ ಅಸಮಾನವಾದ ವಿದ್ವತ್ ಮತ್ತು ಅಪ್ರತಿಮ ಮಾತುಗಾರಿಕೆಗೆ ತಲೆಬಾಗದ ಜನರಿಲ್ಲ ಎಂದು ಅಭಿಪ್ರಾಯಪಟ್ಟರು.

    ವೇದಾಂತ ಪ್ರಾಧ್ಯಾಪಕ ಡಾ. ಷಣ್ಮುಖ ಹೆಬ್ಬಾರ್ ಮಾತನಾಡಿ, ಬಹುಮುಖ ಸಾಧನೆಯ ವ್ಯಕ್ತಿತ್ವ ಬನ್ನಂಜೆ ಆಚಾರ್ಯರದ್ದು. ಸತ್ಯಶೋಧನೆಯ ನಿತ್ಯದೀಕ್ಷೆ ಧರಿಸಿದ್ದರು. ಅವರ ಸಂಸ್ಕೃತದ ಕೃತಿಗಳೆಲ್ಲವೂ ಸಂಶೋಧನಾತ್ಮಕವಾಗಿದೆ. ಅವರ ಎಲ್ಲ ಉದ್ಗ್ರಂಥಗಳೂ ಡಾಕ್ಟರೇಟ್ ಪದವಿಗಿಂತಲೂ ಹೆಚ್ಚಿನ ಮೌಲ್ಯದ್ದಾಗಿವೆ. ಕನ್ನಡ ಸಂಸ್ಕೃತ ಸಾಹಿತ್ಯ ಮತ್ತು ವೈದಿಕ- ವೇದಾಂತ ಕ್ಷೇತ್ರ ಬನ್ನಂಜೆಯವರ ಋಣ ಕಟ್ಟಿಕೊಂಡಿದೆ ಎಂದು ಹೇಳಿದರು.

    ನ್ಯಾಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಸತ್ಯನಾರಾಯಣ ಆಚಾರ್ಯ, ಪ್ರಭಾರ ಪ್ರಾಚಾರ್ಯ ಪ್ರೊ. ಹರಿದಾಸ ಭಟ್, ಡಾ. ಅಮೃತೇಶ ಆಚಾರ್ಯ, ಡಾ. ಶಿವಪ್ರಸಾದ ತಂತ್ರಿ ಮಾತನಾಡಿದರು. ಎಸ್‌ಎಂಎಸ್‌ಪಿ ಸಭಾ ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts