More

    ಅಜ್ಞಾನದ ವಿರುದ್ಧ ಹರಿದಾಸರು, ವಚನಕಾರರ ಬಂಡಾಯ

    ರಾಯಚೂರು: ಬಂಡಾಯದ ಮನಸ್ಥಿತಿ ವೇದಗಳ ಕಾಲದಿಂದಲೂ ನೋಡುತ್ತಿದ್ದೇವೆ. ಹರಿದಾಸರು ಮತ್ತು ವಚನಕಾರರು ಅಜ್ಞಾನದ ವಿರುದ್ದ ಬಂಡಾಯವನ್ನು ಹೂಡಿದ್ದು, ಕನಕದಾಸರ ಕೀರ್ತನೆಗಳಲ್ಲಿಯೂ ಬಂಡಾಯವನ್ನು ಕಾಣುತ್ತೇವೆ ಎಂದು ಬೆಂಗಳೂರಿನ ವಿದ್ವಾನ್ ಸಿ.ಜಿ.ವಿಜಯಸಿಂಹಾಚಾರ್ ಹೇಳಿದರು.
    ಸ್ಥಳೀಯ ಕರ್ನಾಟಕ ಸಂಘದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಗುರುವಾರ ಸಂಜೆ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಸಾವಿರಾರು ಸಂಸ್ಕೃತ ಕ್ಲಿಷ್ಟ ಪದಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ, ಸಂಕೀರ್ತನೆಗಳನ್ನು ರಚಿಸಿ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ ಎಂದರು.
    ವೇದ, ಉಪನಿಷತ್ತುಗಳ ಸಾರವನ್ನು ಕನಕದಾಸರು ಅಚ್ಚ ಕನ್ನಡದಲ್ಲಿ ಕಾವ್ಯ ರಚಿಸುವ ಮೂಲಕ ದಾಸ ಶ್ರೇಷ್ಠರಾಗಿದ್ದಾರೆ. ಕನಕದಾಸರ ಕೀರ್ತನೆಗಳನ್ನು ತುಂಡು ತುಂಡಾಗಿ ನೋಡುವುದಕ್ಕಿಂತ ಸಂಪೂರ್ಣವಾಗಿ ಅಧ್ಯಯನ ಮಾಡಿದಾಗ ಪರಿಪೂರ್ಣತೆ ಲಭ್ಯವಾಗುತ್ತದೆ ಎಂದು ಹೇಳಿದರು.
    ನರಸಿಂಗರಾವ್ ದೇಶಪಾಂಡೆ ದಿ.ಜಯಚಾರ್ ಕೊಪ್ಪರ ಸ್ಮರಣಾರ್ಥ ದತ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿ, ದಿ.ಜಯಚಾರ್ ಕೊಪ್ಪರ ದಾಸ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆಯನ್ನು ನೀಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿದ್ದಾಗ ನುರಾರು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದು, ದಂಡಾಕಾರಿಯಾಗಿದ್ದಾಗ 150ಕ್ಕೂ ಹೆಚ್ಚು ತೀರ್ಪುಗಳನ್ನು ಕನ್ನಡದಲ್ಲಿ ನೀಡಿದ್ದಾರೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ಪರಿಷತ್ತಿನಲ್ಲಿ ದತ್ತಿ ದಾನಿಗಳು ನೀಡಿದ ಆರ್ಥಿಕ ನೆರವಿನಿಂದ ಅವರ ಹಿರಿಯರನ್ನು ಸ್ಮರಿಸುವ ಕಾರ್ಯವನ್ನು ದತ್ತಿ ಉಪನ್ಯಾಸಗಳ ಮೂಲಕ ಪರಿಷತ್ತು ಮಾಡುತ್ತಿದೆ ಎಂದು ತಿಳಿಸಿದರು.
    ಸಾಹಿತಿ ವೀರಹನುಮಾನ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿಗಳಾದ ಡಾ.ಜಯಲಕ್ಷ್ಮಿ ಮಂಗಳಮೂರ್ತಿ, ಮುಕುಂದಾಚಾರ್ಯ ಜೋಷಿ, ಗಾಯಕ ಡಾ.ಶೇಷಗಿರಿದಾಸ್, ಸಮೀರ ಸಾಂಸ್ಕೃತಿಕ ಸೇವಾ ಸಮಿತಿ ಅಧ್ಯಕ್ಷ ಹನುಮಂತರಾವ್ ಕಲ್ಲೂರ, ಕಾರ್ಯದರ್ಶಿ ಹರೀಶ್ ಅಚಾರ್ಯ, ಕಸಾಪ ಪದಾಕಾರಿಗಳಾದ ರಾವುತರಾವ್ ಬರೂರ, ಶ್ರೀನಿವಾಸ ಗಟ್ಟು , ಮುರಳಿಧರ ಕುಲಕರ್ಣಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts