More

    ಬೆಳಗ್ಗೆ ಎದ್ದಾಗ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆಯೇ? ಅದಕ್ಕೆ ಕಾರಣ ಇದೇ ನೋಡಿ…

    ಬೆಳಗ್ಗೆ ನಿದ್ರೆಯಿಂದ ಎದ್ದೇಳುವಾಗ ಕೆಲವರಿಗೆ ದೇಹದ ಕೆಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ನಿಮಗೇನಾದರೂ ಸ್ನಾಯು ನೋವು, ತೀವ್ರ ತಲೆನೋವು ಅಥವಾ ದೇಹದ ನೋವು ಅನುಭವಿಸಿದಾಗ ಯಾವುದೇ ಕೆಲಸವನ್ನು ಮಾಡಬೇಡಿ. ಮೊದಲು ವಿಶ್ರಾಂತಿಯನ್ನು ಪಡೆಯಿರಿ ಮತ್ತು ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ. ಎಚ್ಚರವಾದ ನಂತರ ಕಾಣಿಸಿಕೊಳ್ಳುವ ನೋವಿಗೆ ಹಲವು ಕಾರಣಗಳಿವೆ. ಅವುಗಳಲ್ಲಿ ನಿದ್ರಾಹೀನತೆ ಮತ್ತು ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಸೇರಿವೆ. ಎಚ್ಚರವಾದಾಗ ನೋವು ಏಕೆ ಸಂಭವಿಸುತ್ತದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

    ದೇಹದಲ್ಲಿ ಸಾಕಷ್ಟು ವಿಟಮಿನ್ ಡಿ ಇಲ್ಲದಿರುವಾಗ ಹೈಪೋಕಾಲ್ಸೆಮಿಯಾ ಅಥವಾ ಕಡಿಮೆ ಕ್ಯಾಲ್ಸಿಯಂಗೆ ಕಾರಣವಾಗುತ್ತದೆ. ದೇಹದಲ್ಲಿನ ನಮ್ಮ ಮೂತ್ರಪಿಂಡಗಳು ಮತ್ತು ಸ್ನಾಯುಗಳಂತಹ ಅನೇಕ ಪ್ರಮುಖ ಅಂಗಗಳು ಸರಿಯಾಗಿ ತಮ್ಮ ಕಾರ್ಯಗಳನ್ನು ನಿರ್ವಹಿಸಲು ಈ ಕ್ಯಾಲ್ಸಿಯಂ ತುಂಬಾ ಅಗತ್ಯವಿರುತ್ತದೆ. ನಿಮ್ಮ ಮೂಳೆಗಳನ್ನು ಆರೋಗ್ಯಕರವಾಗಿ ಇಡಲು ಕ್ಯಾಲ್ಸಿಯಂ ಅತೀ ಮುಖ್ಯ. ಕ್ಯಾಲ್ಸಿಯಂ ಹೀರಿಕೊಳ್ಳಲು ನಮಗೆ ಸಾಕಷ್ಟು ವಿಟಮಿನ್ ಡಿ ಅಗತ್ಯವಿದೆ. ಈ ವಿಟಮಿನ್ ಕೊರತೆಯು ದೇಹದ ಅಂಗಗಳಲ್ಲಿ ಮತ್ತು ಮೂಳೆಗಳಲ್ಲಿ ನೋವನ್ನು ಉಂಟು ಮಾಡುತ್ತದೆ.

    ನಮ್ಮ ದೇಹದಲ್ಲಿನ ಕೆಂಪು ರಕ್ತ ಕಣಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ರಕ್ತಹೀನತೆ ಉಂಟಾಗುತ್ತದೆ. ಇದರಿಂದ ನಮ್ಮ ದೇಹದ ಅಂಗಾಂಶಗಳು ಸಾಕಷ್ಟು ಆಮ್ಲಜನಕವನ್ನು ಪಡೆಯುವುದಿಲ್ಲ. ರಕ್ತಹೀನತೆಯು ನಮ್ಮ ದೇಹದ ಅನೇಕ ಭಾಗಗಳನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ನಮ್ಮ ದೇಹ ಆರೋಗ್ಯಕರವಾಗಿರಲು ಅಥವಾ ಸರಿಯಾಗಿ ಕಾರ್ಯನಿರ್ವಹಿಸಲು ಸಾಕಷ್ಟು ಆಮ್ಲಜನಕ ರಕ್ತಹೀನತೆಯಿಂದ ಸಿಗುವುದಿಲ್ಲ. ಈ ರಕ್ತಹೀನತೆಯ ಇತರ ಲಕ್ಷಣಗಳು ಯಾವುವೆಂದರೆ, ಆಯಾಸ, ಅಸಹಜ ಹೃದಯ ಬಡಿತ, ತಲೆತಿರುಗುವಿಕೆ ಅಥವಾ ತಲೆನೋವು ಅಥವಾ ಎದೆ ನೋವು.

    ಅಧಿಕ ತೂಕವು ನಿಮ್ಮ ಬೆನ್ನು ಮತ್ತು ಕತ್ತಿನ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದಲೂ ದೇಹದ ಹಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅಧಿಕ ತೂಕವು ನಿದ್ರೆ ಮತ್ತು ಉಸಿರಾಟದ ತೊಂದರೆಗಳಿಗೆ ಕಾರಣವಾಗಬಹುದು. ಇದು ನಿದ್ರೆಯ ಗುಣಮಟ್ಟದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. ವಿಶೇಷವಾಗಿ ಎಚ್ಚರವಾದ ನಂತರ ನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ, ತೂಕವನ್ನು ಕಳೆದುಕೊಳ್ಳುವುದು ತುಂಬಾ ಮುಖ್ಯ. ಇದರಿಂದ ನಿಮ್ಮ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. (ಏಜೆನ್ಸೀಸ್​)

    ಬಹುಮಾನ ಸಿಗಲಿಲ್ಲ ಅಂತ ಬದುಕು ಅಂತ್ಯಗೊಳಿಸಿದ ಪುತ್ತೂರಿನ ಕಾಲೇಜು ವಿದ್ಯಾರ್ಥಿನಿ

    ಹೃತಿಕ್ ರೋಷನ್, ಟೈಗರ್ ಶ್ರಾಫ್ ಡ್ಯಾನ್ಸ್​ ನೋಡಿದ ನಂತರ ನರ್ತಿಸುವುದನ್ನೇ ನಿಲ್ಲಿಸಿದೆ…ಜೋರಾಮ್​ ಬಗ್ಗೆ ಮನಬಿಚ್ಚಿ ಮಾತನಾಡಿದ ಮನೋಜ್ ಬಾಜಪೇಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts