More

    ಆರ್‌ಸಿಬಿ ತಂಡಕ್ಕೆ ವರ್ಗಾವಣೆ ಆಗಲಿದ್ದಾರೆ ಈ ಮೂವರು ಕ್ರಿಕೆಟಿಗರು..?

    ಬೆಂಗಳೂರು: ಪ್ರತಿ ವರ್ಷವೂ ಈ ಸಲ ಕಪ್ ನಮ್ದೆ..ಈ ಸಲ ಕಪ್ ನಮ್ದೆ ಅಂತಾನೇ ಎಂಬ ಅಭಿಮಾನಿಗಳ ಅಪಾರ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುವ ಆರ್‌ಸಿಬಿ, ಐಪಿಎಲ್‌ನಲ್ಲಿ ನಿರಾಸೆ ಅನುಭವಿಸುತ್ತಲೇ ಬಂದಿದೆ. 2016ರ ಬಳಿಕ ಈ ಬಾರಿ ಪ್ಲೇಆ್ಗೆ ಎಂಟ್ರಿ ಕೊಟ್ಟಿದ್ದ ಆರ್‌ಸಿಬಿ ಫೈನಲ್ ಪ್ರವೇಶಿಸಲು ಎಡವಿತು. ಮುಂದಿನ ನಾಲ್ಕು ತಿಂಗಳಲ್ಲಿ 14ನೇ ಐಪಿಎಲ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದಕ್ಕೆ ಈಗಲೇ ತಂಡಗಳ ನಡುವೆ ಆಟಗಾರರ ವರ್ಗಾವಣೆ ಪ್ರಕ್ರಿಯೆಗೆ ಶೀಘ್ರವೇ ನಡೆಯಲಿದೆ. ಇತರ ತಂಡಗಳಲ್ಲಿ ಇರುವ ಮೂರು ವಿದೇಶಿ ಆಟಗಾರರ ಮೇಲೆ ಆರ್‌ಸಿಬಿ ಕಣ್ಣೀಟ್ಟಿದೆ. ಆ ಮೂರು ಆಟಗಾರರ ಕುರಿತು ಪರಿಚಯ ಇಲ್ಲಿದೆ..

    ಇದನ್ನೂ ಓದಿ:

    ಕ್ರಿಸ್ ಲ್ಯಾನ್ (ಮುಂಬೈ ಇಂಡಿಯನ್ಸ್):
    ಆರ್‌ಸಿಬಿ ತಂಡಕ್ಕೆ ವರ್ಗಾವಣೆ ಆಗಲಿದ್ದಾರೆ ಈ ಮೂವರು ಕ್ರಿಕೆಟಿಗರು..?13ನೇ ಆವೃತ್ತಿ ಪೂರ್ತಿ ಮುಂಬೈ ಇಂಡಿಯನ್ಸ್ ಪರ ಬೆಂಚು ಕಾಯಿಸಿದ್ದ ಕ್ರಿಸ್ ಲ್ಯಾನ್ ಮೇಲೆ ಆರ್‌ಸಿಬಿ ಕಣ್ಣು ಬಿದ್ದಿದೆ. ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಜೋಡಿ ಬಲಿಷ್ಠವಾಗಿರುವುದರಿಂದ ಮುಂದಿನ ಬಾರಿಯೂ ಲ್ಯಾನ್‌ಗೆ ಅವಕಾಶ ಸಿಗುವುದು ಅನುಮಾನ. ಹೀಗಾಗಿ ಲ್ಯಾನ್ ಮೇಲೆ ಆರ್‌ಸಿಬಿ ಕಣ್ಣಿಟ್ಟಿದೆ. ದೇವದತ್ ಪಡಿಕಲ್ ಉತ್ತಮ ನಿರ್ವಹಣೆ ತೋರಿದ್ದರು. ಆದರೆ, ಆರನ್ ಫಿಂಚ್ ಹಾಗೂ ಪಡಿಕಲ್ ಜೋಡಿ ಆರ್‌ಸಿಬಿಗೆ ನಿರೀಕ್ಷಿತ ಮಟ್ಟದಲ್ಲಿ ಉತ್ತಮ ಆರಂಭ ದಕ್ಕಿರಲಿಲ್ಲ.

    ಓಶಾನೆ ಥಾಮಸ್ (ರಾಜಸ್ಥಾನ ರಾಯಲ್ಸ್):
    ಆರ್‌ಸಿಬಿ ತಂಡಕ್ಕೆ ವರ್ಗಾವಣೆ ಆಗಲಿದ್ದಾರೆ ಈ ಮೂವರು ಕ್ರಿಕೆಟಿಗರು..?ಕಳೆದ 2 ಆವೃತ್ತಿಗಳಿಂದ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದು, ಕೇವಲ 4 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಉತ್ತಮ ಫಾರ್ಮ್‌ನಲ್ಲಿದ್ದರೂ ರಾಯಲ್ಸ್ ತಂಡ ಓಶಾನೆ ಸೇವೆಯನ್ನು ಈ ಬಾರಿ ಸೂಕ್ತವಾಗಿ ಬಳಸಿಕೊಂಡಿಲ್ಲ. 39 ಟಿ20 ಪಂದ್ಯಗಳಿಂದ 53 ವಿಕೆಟ್ ಕಬಳಿಸಿದ್ದು, 39 ಲಿಸ್ಟ್ ಎ ಪಂದ್ಯಗಳಿಂದ 57 ವಿಕೆಟ್ ಪಡೆದಿದ್ದಾರೆ. ಈ ಬಾರಿ ದುಬಾರಿಯಾಗಿದ್ದ ಉಮೇಶ್ ಯಾದವ್, ಡೇಲ್ ಸ್ಟೈನ್‌ರನ್ನು ಕೈಬಿಡುವ ಸಾಧ್ಯತೆಗಳಿವೆ. ಹೀಗಾಗಿ ಹೊಸ ವೇಗಿ ತಲಾಷ್‌ನಲ್ಲಿರುವ ಆರ್‌ಸಿಬಿ, ಓಶಾನೆ ಥಾಮಸ್‌ಗೆ ಗಾಳ ಹಾಕುವ ಸಾಧ್ಯತೆಗಳಿವೆ.

    ಡೇವಿಡ್ ಮಿಲ್ಲರ್ (ರಾಜಸ್ಥಾನ ರಾಯಲ್ಸ್):
    ಆರ್‌ಸಿಬಿ ತಂಡಕ್ಕೆ ವರ್ಗಾವಣೆ ಆಗಲಿದ್ದಾರೆ ಈ ಮೂವರು ಕ್ರಿಕೆಟಿಗರು..?ಉತ್ತಮ ಫಿನಿಷರ್ ಎನಿಸಿಕೊಂಡಿರುವ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಈ ಬಾರಿ ರಾಯಲ್ಸ್ ಪರ ಮಿಂಚಲು ವಿಫಲರಾದರು. ಆರ್‌ಸಿಬಿ ತಂಡದಲ್ಲಿ ನಾಯಕ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ ಜೋಡಿಯಷ್ಟೇ ಹೆಚ್ಚಾಗಿ ಫಿನಿಷಿಂಗ್ ಜವಾಬ್ದಾರಿ ಹೊತ್ತುಕೊಂಡಿದೆ. ಹೀಗಾಗಿ ಮತ್ತೋರ್ವ ಫಿನಿಷರ್ ತಂಡಕ್ಕೆ ಅಗತ್ಯವಾಗಿದ್ದು, ಡೇವಿಡ್ ಮಿಲ್ಲರ್ ಅವರನ್ನು ವರ್ಗಾವಣೆ ಮಾಡಿಕೊಳ್ಳಲು ಆರ್‌ಸಿಬಿ ಸಿದ್ಧತೆಯಲ್ಲಿದೆ. ರಾಯಲ್ಸ್ ತಂಡ ಮಿಲ್ಲರ್ ಅವನ್ನು ಮೂಲ ಬೆಲೆ 75 ಲಕ್ಷ ರೂಪಾಯಿಗೆ ಕೊಂಡುಕೊಂಡಿತ್ತು. ಕೇವಲ ಏಕೈಕ ಪಂದ್ಯವಾಡಲಷ್ಟೇ ಶಕ್ತರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts