More

    ಆರ್‌ಸಿಬಿ ತರಬೇತಿಗೆ ಯುಎಇ ನಾಯಕನ ನೆರವು ಪಡೆದಿದ್ದು ಏಕೆ?

    ದುಬೈ: ಯುಎಇ ತಂಡದ ನಾಯಕ ಅಹಮದ್ ರಾಜಾ ಹಾಗೂ ಯುವ ಆಟಗಾರ ಕಾರ್ತಿಕ್ ಮೇಯಪ್ಪನ್ ಅವರನ್ನು ಐಪಿಎಲ್ ವೇಳೆ ಆರ್‌ಸಿಬಿ ತಂಡದೊಂದಿಗೆ ಅಭ್ಯಾಸ ನಡೆಸಲು ಆಯ್ಕೆ ಮಾಡಲಾಗಿದೆ. ಆರ್‌ಸಿಬಿ ತಂಡದ ಬೌಲಿಂಗ್ ಕೋಚ್ ಶ್ರೀಧರನ್ ಶ್ರೀರಾಮ್ ಶಿಾರಸ್ಸಿನ ಮೇರೆಗೆ ಎಡಗೈ ಸ್ಪಿನ್ನರ್ ರಾಜಾ ತಂಡ ಸೇರ್ಪಡೆಗೊಂಡರು. ಇದರಿಂದ ಆರ್‌ಸಿಬಿ ತಂಡ ಸ್ಥಳೀಯ ಪಿಚ್‌ನಲ್ಲಿ ಸ್ಪಿನ್ ಬೌಲರ್‌ಗಳನ್ನು ಎದುರಿಸಲು ಸಹಕಾರಿಯಾಗುವ ದೃಷ್ಟಿಯಿಂದ ಯುಎಇ ನಾಯಕನಿಗೆ ಮಣೆ ಹಾಕಲಾಗಿದೆ.

    ಇದನ್ನೂ ಓದಿ: ಆಫ್​-ಸ್ಪಿನ್ನರ್‌ಗಳ ಪಟ್ಟಿಯಲ್ಲಿ ಕತ್ರೀನಾ ಕೈಫ್​ಗೆ ಸ್ಥಾನ ನೀಡಿದ ಅಶ್ವಿನ್!

    ರಾಜಾ ಈಗಾಗಲೇ ತಂಡದ ಹೋಟೆಲ್‌ನಲ್ಲಿ ಕ್ವಾರಂಟೈನ್ ಅವಧಿ ಮುಕ್ತಾಯಗೊಳಿಸಿ, ತಂಡದೊಂದಿಗೆ ಅಭ್ಯಾಸ ಆರಂಭಿಸಿದ್ದಾರೆ. ‘ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿ ವರ್ಗದವರನ್ನು ಪರಿಚಯ ಮಾಡಿಕೊಂಡಿದ್ದೇನೆ. ಯುಎಇ ತಂಡದ ನಾಯಕ ಎಂದು ಪರಿಚಯಿಸಿಕೊಂಡಿದ್ದೇನೆ. ಸ್ಪಿನ್ ವಿಭಾಗದಲ್ಲಿ ಸಹಾಯ ಮಾಡುತ್ತಿರುವುದಕ್ಕೆ ಎಬಿ ಡಿವಿಲಿಯರ್ಸ್‌ ಥ್ಯಾಂಕ್ಯೂ ಹೇಳಿದರು ಎಂದು ಅಹಮದ್ ಹೇಳಿದ್ದಾರೆ. ರಾಜಾ 14 ವರ್ಷಗಳಿಂದ ರಾಷ್ಟ್ರೀಯ ತಂಡದ ಭಾಗವಾಗಿದ್ದಾರೆ. ಬಯೋ ಬಬಲ್‌ನಲ್ಲಿ ಆಡುವುದು ವಿಚಿತ್ರ ಅನುಭವ. ಐಪಿಎಲ್ ಹಾಗೂ ಆರ್‌ಸಿಬಿ ತಂಡಕ್ಕೆ ಧನ್ಯವಾದಗಳು ಎಂದು 31 ವರ್ಷದ ಅಹಮದ್ ರಾಜಾ ಹೇಳಿದ್ದಾರೆ.

    ಇದನ್ನೂ ಓದಿ: ಐಪಿಎಲ್‌ನಲ್ಲಿ ಗದ್ದಲ ಎಬ್ಬಿಸಿದ ವಿವಾದಗಳಿವು…

    ಹೋಟೆಲ್ ವ್ಯವಸ್ಥೆ ಅತ್ಯುತ್ತಮವಾಗಿದ್ದು, ಕೊಠಡಿಗಳು ವಿಶಾಲವಾಗಿವೆ. ಜತೆಗೆ ಬೀಚ್ ಖಾಸಗಿಯಾಗಿದೆ. ಐಸಿಸಿ ಅಕಾಡೆಮಿಯಲ್ಲಿ ಮೊದಲ ಬಾರಿಗೆ ತರಬೇತಿ ಅವಧಿಯಲ್ಲಿ ಪಾಲ್ಗೊಂಡಿದ್ದು, ಖುಷಿ ನೀಡಿದೆ ಎಂದು ಹೇಳಿದ್ದಾರೆ. 19 ವರ್ಷದ ಲೆಗ್ ಸ್ಪಿನ್ನರ್ ಕಾರ್ತಿಕ್ ಯುಎಇ ಪರ 4 ಏಕದಿನ ಪಂದ್ಯಗಳನ್ನಾಡಿದ್ದಾರೆ. ಶ್ರೀಧರನ್ ಶ್ರೀರಾಮ್ ಆಸ್ಟ್ರೇಲಿಯಾ ತಂಡ ವಿದೇಶಿ ಪ್ರವಾಸ ಕೈಗೊಳ್ಳುವ ವೇಳೆ ಸ್ಪಿನ್ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

    ಕೋವಿಡ್ ಹೀರೋಗಳಿಗೆ ಆರ್‌ಸಿಬಿ ಸಲ್ಯೂಟ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts