More

    ಆರ್‌ಸಿಬಿ ತಂಡದ ಹೊಸ ನಾಯಕನ ಹೆಸರು ಘೋಷಣೆ ಯಾವಾಗ ಗೊತ್ತೇ?

    ಬೆಂಗಳೂರು: ಈಗಾಗಲೆ ಐಪಿಎಲ್ 15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಮುಗಿದಿದೆ. ಎಲ್ಲ 10 ತಂಡಗಳ ಬಲಾಬಲವೂ ಸ್ಪಷ್ಟವಾಗಿದೆ. ಟೂರ್ನಿಯ ವೇಳಾಪಟ್ಟಿಯೂ ಪ್ರಕಟಗೊಂಡಿದೆ. ಹೀಗೆ ಟೂರ್ನಿಗೆ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ. ಆದರೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಮುಂದಿನ ನಾಯಕ ಯಾರು ಎಂಬ ಕುತೂಹಲ ಮಾತ್ರ ಇನ್ನೂ ತಣಿದಿಲ್ಲ. ಆರ್‌ಸಿಬಿ ತಂಡ ಕೊನೆಗೂ ಐಪಿಎಲ್ 15ನೇ ಆವೃತ್ತಿಗೆ ಹೊಸ ನಾಯಕನ ಹೆಸರನ್ನು ಮಾರ್ಚ್ 12ರಂದು (ಶನಿವಾರ) ಘೋಷಿಸಲಿದೆ ಎನ್ನಲಾಗಿದೆ. ಅಂದರೆ ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ಆಡಲಿರುವ 2ನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ಆರ್‌ಸಿಬಿ ತಂಡದ ಹೊಸ ನಾಯಕನ ಪಟ್ಟಾಭಿಷೇಕ ಆಗಲಿದೆ.

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕತ್ವ ನಿರ್ವಹಿಸಿದ ಅನುಭವದಿಂದಾಗಿ ದಕ್ಷಿಣ ಆಫ್ರಿಕಾದ ಫಾಫ್​ ಡು ಪ್ಲೆಸಿಸ್ ಈ ಸ್ಥಾನಕ್ಕೆ ನೆಚ್ಚಿನ ಅಭ್ಯರ್ಥಿಯಾಗಿದ್ದಾರೆ. ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ವಿವಾಹದಿಂದಾಗಿ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುತ್ತಿರುವ ಕಾರಣ ರೇಸ್‌ನಿಂದ ಹೊರಬಿದ್ದಿದ್ದಾರೆ. ದಿನೇಶ್ ಕಾರ್ತಿಕ್ ಈ ಹಿಂದೆ ಕೆಕೆಆರ್ ನಾಯಕರಾಗಿ ಉತ್ತಮ ನಿರ್ವಹಣೆ ತೋರಿರದ ಕಾರಣ ಹಿನ್ನಡೆ ಕಂಡಿದ್ದಾರೆ.

    2014ರಿಂದ ಆರ್‌ಸಿಬಿ ನಾಯಕರಾಗಿದ್ದ ವಿರಾಟ್ ಕೊಹ್ಲಿ ಕಳೆದ ಆವೃತ್ತಿಯ ಬಳಿಕ ಪದತ್ಯಾಗ ಮಾಡಿದ್ದರು. ಅವರು ಮತ್ತೆ ನಾಯಕತ್ವಕ್ಕೆ ಮರಳುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

    ಸ್ಪಿನ್ ದಿಗ್ಗಜ ಶೇನ್ ವಾರ್ನ್ ಸಾವಿನ ಗುಟ್ಟು ಬಿಚ್ಚಿಟ್ಟ ಥಾಯ್ಲೆಂಡ್ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts