More

    ಡು ಪ್ಲೆಸಿಸ್ ಪಡೆಗೆ ಇಂದು ಸನ್‌ರೈಸರ್ಸ್‌ ಸವಾಲು: ಆರ್‌ಸಿಬಿಗಿದೆ ಪ್ಲೇಆಫ್ ಚಾನ್ಸ್!

    ಬೆಂಗಳೂರು: ಸತತ 4 ಸೋಲಿನೊಂದಿಗೆ ಅಂಕಪಟ್ಟಿಯ ಕೊನೇ ಸ್ಥಾನಕ್ಕೆ ಕುಸಿದಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-17ರ ತನ್ನ 7ನೇ ಲೀಗ್ ಪಂದ್ಯದಲ್ಲಿ ಸೋಮವಾರ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರವಾಸಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಪ್ಲೇಆಫ್ ಅವಕಾಶ ವೃದ್ಧಿಸಿಕೊಳ್ಳಲು  ಡು ಪ್ಲೆಸಿಸ್ ಪಡೆಗೆ ಗೆಲುವು ಅನಿವಾರ‌್ಯವಾಗಿದ್ದು, ತವರಿನಲ್ಲಿ ಲಯಕ್ಕೆ ಮರಳುವ ನಿರೀಕ್ಷೆಯಿದೆ.

    ಆರ್‌ಸಿಬಿಗಿದೆ ಪ್ಲೇಆ್ ಚಾನ್ಸ್!: ಟೂರ್ನಿಯಲ್ಲಿ ಎಲ್ಲ ತಂಡಗಳು ಇದುವರೆಗೆ ಕನಿಷ್ಠ 5 ಪಂದ್ಯ ಆಡಿದ್ದು, ಆರು ಪಂದ್ಯಗಳಲ್ಲಿ ಕೇವಲ 2 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಆರ್‌ಸಿಬಿಗೆ ಇನ್ನೂ ಫ್ಲೇ ಆಫ್​​ಗೇರುವ ಅವಕಾಶವಿದೆ. ಆರ್‌ಸಿಬಿ ತನ್ನ ಬಾಕಿ ಉಳಿದಿರುವ 8 ಪಂದ್ಯಗಳಲ್ಲಿ 7 ಗೆಲುವು ದಾಖಲಿಸಿದರೆ, 16 ಅಂಕದೊಂದಿಗೆ ಪ್ಲೇಆ್ಗೇರುವ ಅವಕಾಶ ಹೊಂದಿರುತ್ತದೆ. ಜತೆಗೆ ಇತರ ತಂಡಗಳ ಲಿತಾಂಶವೂ ಆರ್‌ಸಿಬಿಗೆ ವರವಾಗಿರಬೇಕು. 2009 ಹಾಗೂ 2011ರ ಆವೃತ್ತಿಯಲ್ಲೂ ಸತತ 4 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ, ಆರ್‌ಸಿಬಿ ಬಳಿಕ ಸತತ 7 ಪಂದ್ಯಗಳಲ್ಲಿ ಗೆದ್ದು ೈನಲ್‌ಗೇರಿತ್ತು. 2016ರಲ್ಲೂ ಆರಂಭಿಕ 7ರಲ್ಲಿ 5 ಪಂದ್ಯ ಸೋತರೂ ಬಳಿಕ ಫೈನಲ್‌ಗೇರಿತ್ತು. ಇದೇ ಸಾಧನೆ ಮರುಕಳಿಸುವ ನಿರೀಕ್ಷೆ ಸದ್ಯ ಅಭಿಮಾನಿಗಳದ್ದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts