More

    ಆರ್​ಬಿಐ ಸುಪರ್ದಿಗೆ ಯೆಸ್ ಬ್ಯಾಂಕ್: ಗ್ರಾಹಕರ ಹಣ ವಿತ್​ಡ್ರಾಗೆ ಗರಿಷ್ಠ ಮಿತಿ 50,000 ರೂಪಾಯಿ

    ನವದೆಹಲಿ: ಸುಸ್ಥಿ ಸಾಲಗಳಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಖಾಸಗಿ ವಲಯದ ಯೆಸ್ ಬ್ಯಾಂಕ್​ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಬ್ಯಾಂಕ್​ನ ಆಡಳಿತ ಮಂಡಳಿಯನ್ನು ಸೂಪರ್​ಸೀಡ್ ಮಾಡಿದೆ. ಜತೆಗೆ ಗ್ರಾಹಕರ ಹಣ ವಿತ್​ಡ್ರಾ ಮಿತಿಯನ್ನು 50 ಸಾವಿರ ರೂಪಾಯಿಗೆ ಮಿತಿಗೊಳಿಸಿದೆ.

    ಈ ಕುರಿತು ಹಣಕಾಸು ಸಚಿವಾಲಯ ಮತ್ತು ಆರ್​ಬಿಐ ಈ ಬಗ್ಗೆ ಪ್ರತ್ಯೇಕ ಸುತ್ತೋಲೆಗಳನ್ನು ಹೊರಡಿಸಿದೆ. 2020ರ ಏ.3ರವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ಬ್ಯಾಂಕಿನ ಆರ್ಥಿಕ ಸ್ಥಿತಿ ಗಂಭೀರವಾಗಿ ಕುಸಿದಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ಕೆಲ ದಿನಗಳಲ್ಲಿ ಬ್ಯಾಂಕಿನ ಮರು ನಿರ್ವಣಕ್ಕಾಗಿ ಆರ್​ಬಿಐ ಯೋಜನೆಯೊಂದನ್ನು ಅನ್ವೇಷಿಸುತ್ತದೆ. ಬ್ಯಾಂಕ್ ಠೇವಣಿದಾರರನ್ನು ದೀರ್ಘಕಾಲದವರೆಗೆ ಸಂಕಷ್ಟಕ್ಕೆ ಒಳಪಡಿಸುವುದಿಲ್ಲ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.

    ಯೆಸ್ ಬ್ಯಾಂಕ್​ನ ಎಲ್ಲ ಕಾರ್ಯ ಚಟುವಟಿಕೆಗಳ ಆರಂಭ ಮತ್ತು ಮುಂದುವರಿಕೆಗೆ ತಡೆಯಾಜ್ಞೆ ನೀಡಲಾಗಿದ್ದು, ಬ್ಯಾಂಕ್​ನ ಆಡಳಿತಾಧಿಕಾರಿಯನ್ನಾಗಿ ಎಸ್​ಬಿಐನ ಮಾಜಿ ಸಿಎಫ್​ಒ ಪ್ರಶಾಂತ್ ಕುಮಾರ್​ರನ್ನು ನೇಮಿಸಲಾಗಿದೆ. ಮಾಡಲಾಗಿದೆ. ವೈದ್ಯಕೀಯ ಅವಶ್ಯಕತೆ, ಉನ್ನತ ಶಿಕ್ಷಣ, ಮದುವೆ ಹಾಗೂ ಇನ್ನಿತರ ಕೆಲ ಕಾರಣಗಳಿಗೆ ಮಾತ್ರ ವಿತ್ ಡ್ರಾ ಮಿತಿಯಲ್ಲಿ ವಿನಾಯಿತಿ ನೀಡಲಾಗಿದೆ. ಈ ಕಾರಣಗಳಿಗಾಗಿ ಗ್ರಾಹಕರು ಗರಿಷ್ಠ 5 ಲಕ್ಷ ರೂ. ವರೆಗೆ ಹಣ ಪಡೆಯಬಹುದು. ಪಂಜಾಬ್ ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ವಂಚನೆ ನಡೆದ ಪ್ರಕರಣ ಬೆಳಕಿಗೆ ಬಂದಾಗ ಆರ್​ಬಿಐ ಇದೇ ರೀತಿ ಕ್ರಮಗಳನ್ನು ತೆಗೆದುಕೊಂಡಿತ್ತು.

    ಯೆಸ್​ ಬ್ಯಾಂಕ್​ ಆನ್​ಲೈನ್ ಸೇವೆ ಸ್ಥಗಿತ: ಈ ಬೆಳವಣಿಗೆ ನಂತರ ಯೆಸ್ ಬ್ಯಾಂಕ್​ನ ಆನ್​ಲೈನ್ ಬ್ಯಾಂಕಿಂಗ್ ಸೇವೆ ಜಾಮ್ ಆಗಿದೆ. ಇದಕ್ಕೆ ಹೆಚ್ಚಿನ ಜನ ಹಣ ಹಿಂಪಡೆಯಲು ಮುಗಿಬಿದ್ದಿರುವುದೂ ಕಾರಣ ಎನ್ನಲಾಗಿದೆ. ನೆಟ್ ಬ್ಯಾಂಕಿಂಗ್​ನಲ್ಲಿ ಇಕ್ಕಟ್ಟು ಸೃಷ್ಟಿಯಾಗಿರುವ ಪರಿಣಾಮ ಗ್ರಾಹಕರ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂಬ ಸಂದೇಶ ಬ್ಯಾಂಕ್ ಗ್ರಾಹಕರಿಗೆ ರವಾನೆಯಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts