More

    2 ಸಾವಿರ ರೂ. ನೋಟುಗಳಿನ್ನೂ ಬ್ಯಾಂಕ್​ಗಳಿಗೆ ಪೂರ್ತಿ ಮರಳಿಲ್ಲ; ಭಾರತೀಯ ರಿಸರ್ವ್​ ಬ್ಯಾಂಕ್​ನಿಂದ ಮಾಹಿತಿ

    ಮುಂಬೈ: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಶೇ. 97.26ರಷ್ಟು ಬ್ಯಾಂಕುಗಳಿಗೆ ಮರಳಿ ಬಂದಿವೆ. ಇನ್ನೂ 9,760 ಕೋಟಿ ರೂ. ಮೌಲ್ಯದ (ಶೇ. 2.7ರಷ್ಟು) ನೋಟುಗಳು ಇನ್ನೂ ಜನರ ಬಳಿ ಇವೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್​ ಕಳೆದ ಶುಕ್ರವಾರ ಹೇಳಿದೆ.

    ಮೇ 19ರಂದು ಆರ್​ಬಿಐ 2000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿತ್ತು. ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅಥವಾ ಬ್ಯಾಂಕ್​ ಖಾತೆಗಳಿಗೆ ಜಮಾ ಮಾಡಲು ಸೆ. 30 ಕೊನೆಯ ದಿನಾಂಕವಾಗಿತ್ತು. ನಂತರ ಈ ಗಡುವನ್ನು ಅ.7ರವರೆಗೆ ವಿಸ್ತರಿಸಲಾಯಿತು. ಬಳಿಕ ಈ ಸೇವೆಯನ್ನು ಸ್ಥಗಿತಗೊಳಿಸಲಾಯಿತು.

    ಆರ್​ಬಿಐ ನೋಟು ಹಿಂಪಡೆಯಲು ನಿರ್ಧರಿಸಿದ 2023ರ ಮೇ 19ರಂದು 2,000 ರೂ. ನೋಟುಗಳು ಒಟ್ಟು 3.56 ಲ ಕೋಟಿ ರೂ.ಗಳಷ್ಟು ಚಲಾವಣೆಯಲ್ಲಿದ್ದವು. ನ. 30ರ ಹೊತ್ತಿಗೆ ಅದು 9,760 ಕೋಟಿ ರೂ.ಗೆ ಇಳಿದಿದೆ ಎಂದು ಆರ್​ಬಿಐ ಹೇಳಿದೆ.

    ನೋಟು ವಿನಿಮಯ ಹೇಗೆ?

    ದೇಶಾದ್ಯಂತ 19 ಆರ್​ಬಿಐ ಕಚೇರಿಗಳಲ್ಲಿ ಒಂದು ಬಾರಿಗೆ 20 ಸಾವಿರ ರೂ. ಮಿತಿವರೆಗೆ 2000 ರೂ. ನೋಟುಗಳನ್ನು ಠೇವಣಿ ಮಾಡಬಹುದು ಅಥವಾ ಬದಲಾಯಿಸಿಕೊಳ್ಳಬಹುದು. ರಿಸರ್ವ್​ ಬ್ಯಾಂಕ್​ನ ಗೊತ್ತುಪಡಿಸಿದ ಪ್ರಾದೇಶಿಕ ಕಚೇರಿಗಳಿಗೆ ವಿಮಾ ಪೋಸ್ಟ್​ ಮೂಲಕವೂ ಕಳುಹಿಸಬಹುದು.

    ಆರ್​ಬಿಐ ಕಚೇರಿಗಳು ಎಲ್ಲೆಲ್ಲಿವೆ?

    ಆರ್​ಬಿಐನ 19 ಕಚೇರಿಗಳು ಬೆಂಗಳೂರು, ಅಹಮದಾಬಾದ್​, ಬೇಲಾಪುರ್​, ಭೋಪಾಲ್​, ಭುವನೇಶ್ವರ, ಚಂಡೀಗಢ, ಚೆನ್ನೆ, ಗುವಾಹಟಿ, ಹೈದರಾಬಾದ್​, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ತಿರುವನಂತಪುರಂ ಮತ್ತು ಪಾಟ್ನಾಗಳಲ್ಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts