More

    ನಕಲಿ ನೈರ್ಮಲ್ಯಕಕ್ಕೆ ಬಳಸುವ ಕೆಮಿಕಲ್ ಸಿಸಿಬಿ ವಶ | ದಂಧೆಗೆ ಸರಬರಾಜು ಮಾಡಲು ಸಂಗ್ರಹಿಸಿದ್ದ ಓರ್ವನ ಬಂಧನ

    ಬೆಂಗಳೂರು: ಕರೊನಾ ವೈರಸ್ ಹಿನ್ನೆಲೆಯಲ್ಲಿ ನಕಲಿ ನೈರ್ಮಲ್ಯಕ ಹಾಗೂ ನಕಲಿ ಮಾಸ್ಕ್ ತಯಾರಿಸುವ ದಂಧೆ ಹೆಚ್ಚಾಗುತ್ತಿದೆ. ಕಳೆದೊಂದು ತಿಂಗಳ ಅವಧಿಯಲ್ಲಿ ನೈರ್ಮಲ್ಯಕಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರು ವುದರಿಂದ ಕೆಲವರು ದಂಧೆಗೆ ಮುಂದಾಗಿದ್ದಾರೆ.

    ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಸಿಸಿಬಿ ಪೊಲೀಸರು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ನಕಲಿ ನೈರ್ಮಲ್ಯಕ ತಯಾರಿಸುತ್ತಿದ್ದ ಗೋದಾಮುಗಳ ಮೇಲೆ ದಾಳಿ ನಡೆಸಿ, ಈವರೆಗೂ 4ಕ್ಕೂ ಹೆಚ್ಚು ಕೇಸ್ ಪತ್ತೆ ಹಚ್ಚಿದ್ದಾರೆ. ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ನಕಲಿ ನೈರ್ಮಲ್ಯಕ ತಯಾರಿಕೆಗೆ ಬಳಸುವ ಕೆಮಿಕಲ್ ಸಂಗ್ರಹಿಸಿ ಸರಬರಾಜು ಮಾಡಲು ಯತ್ನಿಸಿದ್ದ ಗೋದಾಮಿನ ಆರೋಪಿಯನ್ನು ಬಂಧಿಸಿದ್ದಾರೆ.

    ಬಿಟಿಎಂ ಲೇಔಟ್​ನ 2ನೇ ಹಂತದ ನಿವಾಸಿ ರೇಣುಕಾಪ್ರಸಾದ್ (53) ಬಂಧಿತ. ಪೆಟ್ರೋಲಿಯಂ ವಸ್ತುಗಳಾದ 400 ಲೀ. ಐಸೋಪ್ರೊಫಿಲ್, 210 ಲೀ. ಟಾಲಿನ್, 100 ಲೀ. ಟರ್ಪಂಟೈನ್, 600 ಲೀ. ಆಸಿಟೋನ್, 50 ಲೀ. ಬೆಂಜೈಲ್ ಆಲ್ಕೋಹಾಲ್ ಹಾಗೂ ನೈಟ್ರೋನ್ ಬೆಂಜಿನ್, ಮಿಥಿಲಿನ್ ಕ್ಲೋರೈಡ್, ಕ್ಯಾಸ್ಟ್ರಾಕ್ಸ್, ಗ್ಲಿಸರಿನ್ ಸೇರಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

    ಹಳೇ ಕೇಸ್​ಗಳ ಬೆನ್ನತ್ತಿದಾಗ ಪತ್ತೆ: ಕಳೆದ 1 ತಿಂಗಳಿಂದ ನಗರದೆಲ್ಲೆಡೆ 4ಕ್ಕೂ ಹೆಚ್ಚು ನಕಲಿ ನೈರ್ಮಲ್ಯಕ ಕೇಸ್ ಪತ್ತೆಯಾಗಿವೆ. ಐಸೋಪ್ರೋಫಿಲ್ ಆಲ್ಕೋಹಾಲ್​ನಿಂದ ನಕಲಿ ನೈರ್ಮಲ್ಯಕ ತಯಾರಿಸುತ್ತಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿತ್ತು. ಇದನ್ನು ತಯಾರಿಸಲು ಬಳಸಲು ಕೆಮಿಕಲ್ ವಸ್ತುಗಳನ್ನು ಸರಬರಾಜು ಮಾಡುವ ಮತ್ತೊಂದು ಜಾಲ ಇರುವುದು ಕಂಡು ಬಂದಿತ್ತು. ಈವರೆಗಿನ ಬಂಧಿತ ಆರೋಪಿಗಳು ಕೆಮಿಕಲ್ ಸರಬರಾಜು ಮಾಡುತ್ತಿದ್ದ ವ್ಯಕ್ತಿ ಬಗ್ಗೆ ಸುಳಿವು ನೀಡಿದ್ದರು. ಇದನ್ನು ಆಧರಿಸಿ ಸಿಸಿಬಿ ಡಿಸಿಪಿ ಕೆ.ಪಿ. ರವಿಕುಮಾರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ಕೈಗೊಂಡಿತ್ತು.

    ಸುಧಾಮನಗರದ 4ನೇ ಕ್ರಾಸ್​ನಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿದಾಗ ಲಕ್ಷಾಂತರ ರೂ. ಮೌಲ್ಯದ ಕೆಮಿಕಲ್ ವಸ್ತು ಪತ್ತೆಯಾಗಿದೆ. ಪತ್ತೆಯಾಗಿರುವ ವಸ್ತು ಅಪಾಯಕಾರಿ ಸ್ಪೋಟಕ ಸಾಮಗ್ರಿಗಳಾಗಿವೆ. ಅನಧಿಕೃತವಾಗಿ ಸಂಗ್ರಹಿಸಿದ್ದ. ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ವೈರಸ್ ನೆಪದಲ್ಲಿ ಬ್ಯಾಂಕ್ ಖಾತೆಗೆ ಕನ್ನ: ಇ ಮೇಲ್, ಲಿಂಕ್, ಫೋನ್ ಕರೆ ಮಾಡಿ ಸೈಬರ್ ಕಳ್ಳರ ವಂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts