ವೈರಸ್ ನೆಪದಲ್ಲಿ ಬ್ಯಾಂಕ್ ಖಾತೆಗೆ ಕನ್ನ: ಇ ಮೇಲ್, ಲಿಂಕ್, ಫೋನ್ ಕರೆ ಮಾಡಿ ಸೈಬರ್ ಕಳ್ಳರ ವಂಚನೆ

ಬೆಂಗಳೂರು: ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿ ನೀಡುವಂತೆ ಕೋರಿ ನಿಮ್ಮ ಮೊಬೈಲ್​ಗೆ ಅಥವಾ ಇ ಮೇಲ್​ಗೆ ಸಂದೇಶ ಬಂದರೆ ಎಚ್ಚರ. ಮಾಹಿತಿ ನೀಡಿದ ಕೆಲವೇ ನಿಮಿಷದಲ್ಲಿ ನಿಮ್ಮ ಖಾತೆ ಬರಿದಾಗಬಹುದು! ಕರೊನಾ ವೈರಸ್​ನಿಂದ ಸೃಷ್ಟಿಯಾಗಿರುವ ಭಯದ ವಾತಾವರಣವನ್ನೇ ಬಂಡವಾಳ ಮಾಡಿಕೊಂಡು ಸೈಬರ್ ಕಳ್ಳರು ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ.  ಬ್ಯಾಂಕ್ ಖಾತೆ ಅಪ್​ಡೇಟ್ ಮಾಡಬೇಕಿದೆ, ಇಎಂಐ ಮುಂದೂಡಲು ನಿಮ್ಮ ಬ್ಯಾಂಕ್ ಮಾಹಿತಿ ಬೇಕಿದೆ, ಪ್ರಧಾನ ಮಂತ್ರಿ ಫಂಡ್​ಗೆ ದೇಣಿಗೆ ನೀಡಿ ಕರೊನಾ ವಿರುದ್ಧ ಹೋರಾಡಲು ಧನಸಹಾಯ … Continue reading ವೈರಸ್ ನೆಪದಲ್ಲಿ ಬ್ಯಾಂಕ್ ಖಾತೆಗೆ ಕನ್ನ: ಇ ಮೇಲ್, ಲಿಂಕ್, ಫೋನ್ ಕರೆ ಮಾಡಿ ಸೈಬರ್ ಕಳ್ಳರ ವಂಚನೆ