More

    ವೈರಸ್ ನೆಪದಲ್ಲಿ ಬ್ಯಾಂಕ್ ಖಾತೆಗೆ ಕನ್ನ: ಇ ಮೇಲ್, ಲಿಂಕ್, ಫೋನ್ ಕರೆ ಮಾಡಿ ಸೈಬರ್ ಕಳ್ಳರ ವಂಚನೆ

    ಬೆಂಗಳೂರು: ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿ ನೀಡುವಂತೆ ಕೋರಿ ನಿಮ್ಮ ಮೊಬೈಲ್​ಗೆ ಅಥವಾ ಇ ಮೇಲ್​ಗೆ ಸಂದೇಶ ಬಂದರೆ ಎಚ್ಚರ. ಮಾಹಿತಿ ನೀಡಿದ ಕೆಲವೇ ನಿಮಿಷದಲ್ಲಿ ನಿಮ್ಮ ಖಾತೆ ಬರಿದಾಗಬಹುದು! ಕರೊನಾ ವೈರಸ್​ನಿಂದ ಸೃಷ್ಟಿಯಾಗಿರುವ ಭಯದ ವಾತಾವರಣವನ್ನೇ ಬಂಡವಾಳ ಮಾಡಿಕೊಂಡು ಸೈಬರ್ ಕಳ್ಳರು ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ.

     ಬ್ಯಾಂಕ್ ಖಾತೆ ಅಪ್​ಡೇಟ್ ಮಾಡಬೇಕಿದೆ, ಇಎಂಐ ಮುಂದೂಡಲು ನಿಮ್ಮ ಬ್ಯಾಂಕ್ ಮಾಹಿತಿ ಬೇಕಿದೆ, ಪ್ರಧಾನ ಮಂತ್ರಿ ಫಂಡ್​ಗೆ ದೇಣಿಗೆ ನೀಡಿ ಕರೊನಾ ವಿರುದ್ಧ ಹೋರಾಡಲು ಧನಸಹಾಯ ಮಾಡಿ…ಹೀಗೆ ಹಲವು ರೀತಿಯಲ್ಲಿ ವಂಚನೆ ಪ್ರಯತ್ನಗಳು ನಡೆದಿವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರೂ ಎಚ್ಚರಿಕೆ ಕೊಟ್ಟಿದ್ದಾರೆ.

    ಸೈಬರ್ ಕಳ್ಳರು ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿ ಹಣ ಲಪಟಾಯಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು. ಇಎಂಐ ಮುಂದೂಡುವ ಸಲುವಾಗಿ ಒಟಿಪಿ ನಂಬರ್ ಪಡೆಯುತ್ತಾರೆ. ಒಟಿಪಿ ನಂಬರ್ ಹಂಚಿಕೊಂಡರೆ ನಿಮ್ಮ ಖಾತೆಯಿಂದ ಹಣ ಲಪಟಾಯಿಸುವ ಸಾಧ್ಯತೆಗಳಿವೆ. ಇಂಥ ಹೊಸ ವಂಚನೆ ಬೆಳಕಿಗೆ ಬಂದಿದೆ.
    | ಡಿ.ರೂಪಾ ಐಪಿಎಸ್ ಅಧಿಕಾರಿ

    ಲಿಂಕ್ ಕಳಿಸಿ ಕನ್ನ: ಕರೊನಾ ವಿರುದ್ಧ ಹೋರಾಡಲು ಪ್ರಧಾನಮಂತ್ರಿ ಫಂಡ್​ಗೆ ಧನಸಹಾಯ ಮಾಡಿ ಎಂದು ಸಾರ್ವಜನಿಕರಿಗೆ ಲಿಂಕ್ ಕಳಿಸುತ್ತಾರೆ. ಲಿಂಕ್ ಕ್ಲಿಕ್ ಮಾಡಿದರೆ, ಅದರಲ್ಲಿ ಹಲವು ಆಯ್ಕೆಗಳು ಬರುತ್ತವೆ. ಆ ಆಯ್ಕೆಗಳಲ್ಲಿ ಬ್ಯಾಂಕ್ ಮಾಹಿತಿ ನೀಡಿದರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಲಪಟಾಯಿಸುತ್ತಾರೆ.

    ಇ-ಮೇಲ್ ಕಳಿಸಿ ಲೂಟಿ: ನಕಲಿ ದಾಖಲೆ ಕೊಟ್ಟು ಸಿಮ್ಾರ್ಡ್ ಖರೀದಿಸುವ ಸೈಬರ್ ಕಳ್ಳರು, ನಕಲಿ ವ್ಯಾಲೆಟ್ ಸೃಷ್ಟಿಸಿ ಕರೊನಾ ಸಂತ್ರಸ್ತರಿಗೆ ಧನಸಹಾಯ ಮಾಡುವಂತೆ ಸಾರ್ವಜನಿಕರ ಇ-ಮೇಲ್ ಅಥವಾ ಮೊಬೈಲ್​ಗೆ ಸಂದೇಶಗಳನ್ನು ಕಳಿಸುತ್ತಾರೆ. ಇದನ್ನು ನಂಬಿದ ಹಲವು ಜನ ಈಗಾಗಲೇ ಆನ್​ಲೈನ್ ಮೂಲಕ ಲಕ್ಷಾಂತರ ರೂ.ಗಳನ್ನು ಸೈಬರ್ ಕಳ್ಳರ ಖಾತೆಗೆ ವರ್ಗಾವಣೆ ಮಾಡಿದ್ದಾರೆ.

    ಇಎಂಐ ಹೆಸರಲ್ಲಿ ಕರೆ: ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡುವ ಕಳ್ಳರು, ಆರ್​ಬಿಐ ಸೂಚನೆ ಮೇರೆಗೆ ಇಎಂಐ ಮುಂದೂಡಬೇಕಾಗಿದೆ. ನಿಮ್ಮ ಮೊಬೈಲ್​ಗೆ ಬರುವ ಒಟಿಪಿ ನಂಬರ್ ಹೇಳುವಂತೆ ಸೂಚಿಸುತ್ತಾರೆ. ಎಷ್ಟೊ ಜನ ಮೊಬೈಲ್​ಗೆ ಬಂದ ಒಟಿಪಿ ನಂಬರ್​ನ್ನು ಹೇಳಿ ಹಣ ಕಳೆದುಕೊಂಡಿದ್ದಾರೆ.

    ಸಾರ್ವಜನಿಕರು ಸೂಕ್ತ ರೀತಿಯಲ್ಲಿ ಪರಿಶೀಲಿಸದೇ ಅಪರಿಚಿತರು ಹೇಳಿದ ಖಾತೆಗೆ ಹಣ ಜಮೆ ಮಾಡಬಾರದು. ಸೈಬರ್ ವಂಚನೆ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು.
    | ಎಂ.ಡಿ.ಶರತ್ ಕುಮಾರ್ ಎಸ್​ಪಿ (ಸಿಐಡಿ ಸೈಬರ್)

    ಹೊರರಾಜ್ಯದ ಕಳ್ಳರು: ನೊಯ್ಡಾ, ಜಾರ್ಖಂಡ್, ಕೊಲ್ಕತದಲ್ಲಿ ಕುಳಿತು ಕರೊನಾ ದೇಣಿಗೆ ಹೆಸರಿನಲ್ಲಿ ವಂಚಿಸುತ್ತಿರುವವರ ಪ್ರಮಾಣ ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿರುವುದರಿಂದ ಸುಲಭವಾಗಿ ಕಳ್ಳರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಸೈಬರ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಎಚ್ಚರಿಕೆ ಇರಲಿ

    • ಅನುಮಾನಾಸ್ಪದ ಇ-ಮೇಲ್​ಗಳ ಬಗ್ಗೆ ಜಾಗರೂಕರಾಗಿರಿ.
    • ಸಾರ್ವಜನಿಕ ಪ್ರದೇಶದಲ್ಲಿ ಬ್ಲೂ-ಟೂತ್​ಗಳನ್ನು ಹೆಚ್ಚಾಗಿ ಬಳಸಬೇಡಿ.
    • ಸಾರ್ವಜನಿಕ ವೈಫೈ ಬಳಸಬೇಕಾದರೆ, ನೀವು ಸಂರ್ಪಸುತ್ತಿರುವ ನೆಟ್​ವರ್ಕ್ ಕಾನೂನುಬದ್ಧ ಆಗಿದೆಯೇ ? ಸುರಕ್ಷಿತವೇ ? ಎಂದು ಪರಿಶೀಲಿಸಲು ಮರೆಯದಿರಿ.
    • ಸೈಬರ್ ವಂಚನೆಗೊಳಗಾದರೆ ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ.
    • ಇ-ಮೇಲ್ ಅಥವಾ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳಬೇಡಿ.

    | ಅವಿನಾಶ ಮೂಡಂಬಿಕಾನ

    ಸಚಿವರ ಪುತ್ರಿ ಸೋಗಲ್ಲಿ ಹನಿಟ್ರ್ಯಾಪ್​ ಯತ್ನ: ಟೆನಿಸ್ ಆಟಗಾರ್ತಿಯ ಖೆಡ್ಡಾದಿಂದ ಬಚಾವಾದ ಯುವ ಕಾಂಗ್ರೆಸ್ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts