More

    2011ರ ಜನಗಣತಿ ಮಾಹಿತಿಯ ವರ್ಗೀಕರಣ ನಡೆಯುತ್ತಿದೆ ಎಂದ ಕೇಂದ್ರ ಗೃಹ ಸಚಿವಾಲಯ

    ನವದೆಹಲಿ: ದೇಶಾದ್ಯಂತ 2011ರಲ್ಲಿ ಸಂಗ್ರಹಿಸಲಾದ ಜನಗಣತಿಯ ಕಚ್ಚಾ ಮಾಹಿತಿಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದೆ. ಅಲ್ಲಿ ಅವುಗಳ ವರ್ಗೀಕರಣ, ವಿಂಗಡಣೆ ನಡೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ರಾಜ್ಯಸಭೆಗೆ ತಿಳಿಸಿದೆ.

    ಗ್ರಾಮೀಣ ಅಭಿವೃದ್ಧಿ ಸಚಿವಾಲಯ, ನಗರ ಬಡತನ ನಿರ್ಮೂಲನೆ ಮತ್ತು ವಸತಿ ಸಚಿವಾಲಯವು ಜಂಟಿಯಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸೋಷಿಯೋ ಎಕನಾಮಿಕ್ ಆ್ಯಂಡ್ ಕಾಸ್ಟ್​ ಸೆನ್ಸಸ್ (ಎಸ್​ಇಸಿಸಿ) 2011 ನಡೆಸಿತ್ತು. ಈ ರೀತಿ ಸಂಗ್ರಹಿಸಿದ ಮಾಹಿತಿಯಲ್ಲಿ ಜಾತಿ ಮಾಹಿತಿ ಬಿಟ್ಟು ಉಳಿದುದನ್ನು ಅಂತಿಮಗೊಳಿಸಿ ಇದೇ ಎರಡು ಸಚಿವಾಲಯಗಳು ಪ್ರಕಟಿಸಲಿವೆ.

    ಇದನ್ನೂ ಓದಿ: ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ‘ಅಟಲ್’ ಇಂದು​ ಸಂಪೂರ್ಣ: ಏನಿದರ ವಿಶೇಷತೆ?

    ಸದ್ಯ ಈ ಡೇಟಾದ ವರ್ಗೀಕರಣ, ವಿಂಗಡಣೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಗಣತಿ ಮಾಡುವುದಕ್ಕೆ ಭಾರತದ ರಿಜಿಸ್ಟ್ರಾರ್ ಜನರಲ್​ ಕಚೇರಿ ಸಾಗಣೆ ಮತ್ತು ತಾಂತ್ರಿಕ ನೆರವನ್ನು ಒದಗಿಸತ್ತು ಎಂದು ಸರ್ಕಾರ ಹೇಳಿದೆ. (ಏಜೆನ್ಸೀಸ್)

    ಗುಜರಾತಿನ ಆಯುರ್ವೇದ ಇನ್​ಸ್ಟಿಟ್ಯೂಟ್ಸ್​ಗೆ ರಾಷ್ಟ್ರೀಯ ಸ್ಥಾನಮಾನ- ಮಸೂದೆಗೆ ಸಂಸತ್ ಒಪ್ಪಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts