More

    ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ಮುಂದಾದ ರವೀಂದ್ರ ಜಡೇಜಾ! ಕಾರಣವೇನು ಗೊತ್ತೇ?

    ನವದೆಹಲಿ: ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಶೀಘ್ರದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಪ್ರಕಟಿಸುವ ಸಾಧ್ಯತೆಗಳಿವೆ. ಸೀಮಿತ ಓವರ್ ಕ್ರಿಕೆಟ್‌ನಲ್ಲಿ ವೃತ್ತಿಜೀವನವನ್ನು ಸುದೀರ್ಘಗೊಳಿಸುವ ಸಲುವಾಗಿ 33 ವರ್ಷದ ಜಡೇಜಾ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

    ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ವೇಳೆ ಮುಂದೋಳಿನ ಗಾಯಕ್ಕೆ ತುತ್ತಾಗಿದ್ದ ಜಡೇಜಾ, ಬಳಿಕ 2ನೇ ಟೆಸ್ಟ್‌ನಿಂದ ಹೊರಗುಳಿದಿದ್ದರು. ಮೊಣಕಾಲು ಗಾಯವೂ ಕಾಡಿರುವುದರಿಂದ ಅವರು ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಗೂ ಅಲಭ್ಯರಾಗಿದ್ದಾರೆ. ಜಡೇಜಾ ಶೀಘ್ರದಲ್ಲೇ ಶಸಚಿಕಿತ್ಸೆ ಒಳಗಾಗುವ ಸಾಧ್ಯತೆ ಇದ್ದು, ಇದರಿಂದಾಗಿ ಅವರು 6 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗುತ್ತದೆ. ಇದರಿಂದ ಮುಂದಿನ ವರ್ಷ ತವರಿನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಸರಣಿಗೂ ಅವರು ಗೈರಾಗಲಿದ್ದಾರೆ.

    ಮುಂದಿನ ವರ್ಷದ ಐಪಿಎಲ್ 15ನೇ ಆವೃತ್ತಿಯವರೆಗೂ ಜಡೇಜಾ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಸಿಎಸ್‌ಕೆ ತಂಡದಲ್ಲಿ 16 ಕೋಟಿ ರೂ.ಗೆ ರಿಟೇನ್ ಆಗಿರುವ ಜಡೇಜಾ, ಭವಿಷ್ಯದಲ್ಲಿ ಧೋನಿ ಐಪಿಎಲ್‌ಗೂ ವಿದಾಯ ಹೇಳಿದ ಬಳಿಕ ನಾಯಕರಾಗಲಿದ್ದಾರೆ ಎನ್ನಲಾಗುತ್ತಿದೆ.

    ಟೆಸ್ಟ್ ಕ್ರಿಕೆಟ್ ತ್ಯಜಿಸಿದರೆ ಸೀಮಿತ ಓವರ್ ಕ್ರಿಕೆಟ್ ಪ್ರಕಾರದಲ್ಲಿ ದೀರ್ಘಕಾಲ ಮುಂದುವರಿಯುವ ಯೋಜನೆಯನ್ನು ಜಡೇಜಾ ಹಾಕಿಕೊಂಡಿದ್ದಾರೆ. ಜಡೇಜಾ ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಮೊದಲ ಆಯ್ಕೆಯ ಸ್ಪಿನ್ನರ್ ಆಗಿದ್ದರು. ಅವರು ನಿವೃತ್ತರಾದರೆ ಆರ್. ಅಶ್ವಿನ್‌ಗೆ ಮತ್ತೆ ಆ ಸ್ಥಾನ ಒಲಿಯಲಿದೆ ಎನ್ನಲಾಗುತ್ತಿದೆ. ಜಡೇಜಾ ಭಾರತ ಪರ ಇದುವರೆಗೆ 56 ಟೆಸ್ಟ್ ಆಡಿದ್ದು, 223 ವಿಕೆಟ್ ಮತ್ತು 1 ಶತಕ ಸಹಿತ 2,145 ರನ್ ಗಳಿಸಿದ್ದಾರೆ.

    ದೇಶೀಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿದ ಸಿಎಸ್‌ಕೆ ತಾರೆ ಋತುರಾಜ್ ಗಾಯಕ್ವಾಡ್

    ವಿವಾಹದ 4ನೇ ವಾರ್ಷಿಕೋತ್ಸವದಂದು ಕೊಹ್ಲಿಯಿಂದ ಪತ್ನಿಗೆ ವಿಶೇಷ ಸಂದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts