More

    ಕರೊನಾ ಕಲಿಸಿಕೊಟ್ಟಿರುವ ಪಾಠ ಏನು? ರವಿಚಂದ್ರನ್​ ಹೇಳ್ತಾರೆ ಕೇಳಿ …

    ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಮೇನಲ್ಲಿ ‘ರವಿ ಬೋಪಣ್ಣ’ ಚಿತ್ರ ಬಿಡುಗಡೆ ಮಾಡುವ ಯೋಚನೆ ರವಿಚಂದ್ರನ್ ಅವರಿಗೆ ಇತ್ತಂತೆ. ಆದರೆ, ಕರೊನಾದಿಂದ ಪ್ಲಾನ್ ಎಲ್ಲಾ ತಲೆ ಕೆಳಗಾಗಿದೆ. ಸರಿ ಮುಂದೇನು? ‘ಕರೊನಾ ಬಗ್ಗೆ ತಲೆ ಕೆಡಿಸಿಕೊಂಡರೆ, ಮನುಷ್ಯ ಮನೆಯಲ್ಲೇ ಸತ್ತು ಹೋಗುತ್ತಾನೆ’ ಎನ್ನುತ್ತಾರೆ ಅವರು.

    ಇದನ್ನೂ ಓದಿ: ಮಗನ ಚಿತ್ರಕ್ಕೆ ರವಿಮಾಮ ಆಕ್ಷನ್-ಕಟ್; ವಿಕ್ರಮ್ ಜತೆ ರವಿಚಂದ್ರನ್ ಸಹ ಸಿನಿಮಾದಲ್ಲಿರ್ತಾರೆ

    ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿರುವ ಅವರು, ‘ಮುಂದೇನು, ಯಾವ ತರಹ ಬದುಕಬೇಕು ಎಂದು ಯೋಚಿಸಬೇಕು.ಏಕೆಂದರೆ, ವಾತಾವರಣ ಫಿಕ್ಸ್ ಆಯಿತು. ಇದರ ಮಧ್ಯೆಯೇ ಬದುಕುವುದನ್ನು ಕಲಿಯಬೇಕು. ಹೋರಾಟ ಇದ್ದರೇನೇ ಅಲ್ವಾ ಬದುಕು ಅನ್ನೋದು. ಕರೊನಾ ಜತೆಗೆ ಹೋರಾಡಿ. ಏನು ಮಾಡೋಕೂ ಆಗಲ್ಲ. ಮನೆಯಲ್ಲಿದವನಿಗೂ ಅಂಟಿಕೊಂಡಿದೆ. ಹೊರಗೆ ಹೋದವನಿಗೂ ಅಂಟಿಕೊಂಡಿದೆ. ಯಾರನ್ನೂ ಬಿಟ್ಟಿಲ್ಲ. ಬರಬೇಕು ಎಂದರೆ, ಹೇಗೋ ಅಟಕಾಯಿಸಿಕೊಂಡು ಬರುತ್ತದೆ. ಎಲ್ಲ ಮುಚ್ಚಿ ಕೂತರೆ ಬದುಕೋದು ಹೇಗೆ?’ ಎಂಬುದು ಅವರ ಪ್ರಶ್ನೆ.

    ಇದನ್ನೂ ಓದಿ: VIDEO| ರವಿಚಂದ್ರನ್​ ಜನ್ಮದಿನಕ್ಕೆ ಕಿಚ್ಚನ ಶುಭಾಶಯ ಹೀಗಿದೆ ನೋಡಿ!

    ರವಿಚಂದ್ರನ್ ಅವರು ಹೇಳುವಂತೆ, ಕರೊನಾನ ಯಾರೂ ತಡೆಯೋಕೆ ಸಾಧ್ಯವಿಲ್ಲ, ಜನರೇ ಎಚ್ಚರಿಕೆಯಿಂದ ಬದುಕಬೇಕು ಎಂಬುದು ಅವರ ಅಭಿಪ್ರಾಯ. ‘ಕರೊನಾ ನಿಲ್ಲಿಸೋದು ಕಷ್ಟ, ಮನೆಯಲ್ಲಿರಿ ಎಂದರೆ ಸಂಪಾದನೆ ಹೇಗೆ? ಹೊಟ್ಟೆಪಾಡಿನ ಕಥೆ ಹೇಗೆ? ಎರಡು ಸಾವಿರ ಕೊಟ್ಟರೆ ಬದುಕೋಕೆ ಆಗುತ್ತಾ? 20 ಸಾವಿರ ರೂಪಾಯಿ ಇದ್ದರೆ ಒಂದು ಕುಟುಂಬ ನೋಡಿಕೊಳ್ಳೋದು ಕಷ್ಟ. ಅಂಥದ್ದರಲ್ಲಿ ಎರಡು ಸಾವಿರದಲ್ಲಿ ಹೇಗೆ ಬದುಕೋದು? ಅದರ ಬದಲು ಹೊರಗೆ ಹೋಗಿ ಸಾಯ್ತೀನಿ ಎನ್ನುತ್ತಾನೆ ಮನುಷ್ಯ. ಎಲ್ಲಾ ಪರಿಸ್ಥಿತಿಗೂ, ಮನಸ್ಥಿತಿಗೂ ರೆಡಿ ಆಗಬೇಕು. ಕರೊನಾ ಕಲಿಸಿಕೊಟ್ಟಿರುವ ಪಾಠ ಅದು’ ಎಂದು ವ್ಯಾಖ್ಯಾನಿಸುತ್ತಾರೆ ರವಿಚಂದ್ರನ್.

    ಕನ್ನಡಿಗರೇ ನನ್ನ ಮರಿಬೇಡ್ರಪ್ಪೋ! ಆಂಕರ್ ಅನುಶ್ರಿಗೆ ಶುರುವಾಗಿದೆ ಭಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts