More

    VIDEO | ಬ್ಯಾಟಿಂಗ್ ಬಿಟ್ಟು ಬೌಲಿಂಗ್ ಮಾಡಿದ ಪೂಜಾರ; ನನ್ನ ಕೆಲಸವನ್ನು ಬಿಟ್ಟುಬಿಡು ಎಂದ ಆರ್.ಅಶ್ವಿನ್!

    ಅಹಮದಾಬಾದ್: ತವರಿನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಟೀಂ ಇಂಡಿಯಾ ಗೆದ್ದು ಬೀಗಿದೆ. ಇದರೊಂದಿಗೆ ಭಾರತ ಸತತ ನಾಲ್ಕು ಟೆಸ್ಟ್ ಸರಣಿಗಳಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ದಾಖಲೆ ಬರೆದಿದೆ.

    ಅಹಮದಾಬಾದ್​ನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟೆಸ್ಟ್‌ ಸರಣಿಯ ಅಂತಿಮ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಐದನೇ ಹಾಗೂ ಕೊನೆಯ ದಿನದಂದು ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ ನಲ್ಲಿ ಎರಡು ವಿಕೆಟ್ ನಷ್ಟಕ್ಕೆ 175 ರನ್ ಗಳಿಸುವುದರೊಂದಿಗೆ ಪಂದ್ಯವನ್ನು ಡ್ರಾ ಮಾಡಿಕೊಂಡಿತು.

    ಇದನ್ನೂ ಓದಿ:  ಪ್ರಧಾನಿಗೆ ಫೈಟರ್ ರವಿ ಯಾರೆಂಬುದೇ ಗೊತ್ತಿಲ್ಲ… ಕಾಂಗ್ರೆಸ್​ನವರು ಟ್ರೋಲ್ ಮಾಡುವ ಅಗತ್ಯವಿಲ್ಲ; ಶೋಭಾ ಕರಂದ್ಲಾಜೆ ನೀಡಿದ ಸ್ಪಷ್ಟನೆ ಹೀಗಿದೆ…

    ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಅಪರೂಪದ ಸನ್ನಿವೇಶವೊಂದು ನಡೆಯಿತು. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ತಂಡದ ಬ್ಯಾಟ್ಸ್​ಮನ್ ಚೇತೇಶ್ವರ ಪೂಜಾರಗೆ ಬೌಲಿಂಗ್ ಮಾಡಲು ಅವಕಾಶ ಕೊಡುತ್ತಿದ್ದಂತೆ ಒಂದು ಕ್ಷಣ ಎಲ್ಲರೂ ಅಚ್ಚರಿ ಪಟ್ಟರು. ಅಚ್ಚುಕಟ್ಟಾಗಿ ಒಂದು ಓವರ್ ಬೌಲಿಂಗ್ ಮಾಡಿದ ಪೂಜಾರ 1 ರನ್ ಬಿಟ್ಟು ಕೊಟ್ಟರು.

    ಪೂಜಾರ ಬೌಲಿಂಗ್ ನೋಡಿ ಮೈದಾನದಲ್ಲಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಇದೇ ವೇಳೆ ಪೂಜಾರ ಬೌಲಿಂಗ್ ಶೈಲಿ ಆಸ್ಟ್ರೇಲಿಯಾದ ಸ್ಪನ್ ದಿಗ್ಗಜ ಶೇನ್ ವಾರ್ನ್ ಅವರನ್ನು ಹೋಲುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ವರ್ಣಿಸಿದರು.

    ಇದನ್ನೂ ಓದಿ: ದಶಪಥ ಹೆದ್ದಾರಿ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಬೇಕೆಂಬ ಕನಿಷ್ಟ ಸೌಜನ್ಯವೂ ಇಲ್ಲ; ಆಕ್ರೋಶ ವ್ಯಕ್ತಪಡಿಸಿದ ಡಿ.ಕೆ.ಸುರೇಶ್

    ಪೂಜಾರ ಬೌಲಿಂಗ್ ಬಗ್ಗೆ ತಂಡದ ಪ್ರಮುಖ ಸ್ಪಿನ್ನರ್, ಆಲ್​ರೌಂಡರ್ ಆರ್​.ಅಶ್ವಿನ್ ಈ ಬಗ್ಗೆ ಪ್ರತಿಕ್ರಿಯಿಸಿ, ನಾನು ಏನು ಮಾಡಬೇಕು? ನನ್ನ ಕೆಲಸವನ್ನು ಬಿಟ್ಟುಬಿಡು? ಎಂದು ಕಾಲೆಳೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts