More

    ಟೀಮ್ ಇಂಡಿಯಾ ಕೋಚ್ ಹುದ್ದೆ ತೊರೆದರೂ ಕ್ರಿಕೆಟ್ ನಂಟು ಬಿಡದ ರವಿ ಶಾಸ್ತ್ರಿ !

    ನವದೆಹಲಿ: ಕಳೆದ ನಾಲ್ಕೂವರೆ ವರ್ಷಗಳಿಂದ ಭಾರತ ತಂಡದ ಮುಖ್ಯಕೋಚ್ ಹುದ್ದೆಯಲ್ಲಿದ್ದ ರವಿ ಶಾಸ್ತ್ರಿ, ಟಿ20 ವಿಶ್ವಕಪ್ ಮುಕ್ತಾಯದೊಂದಿಗೆ ತಮ್ಮ ಅವಧಿಯನ್ನು ಮುಕ್ತಾಯಗೊಳಿಸಿದ್ದಾರೆ. ಇದೀಗ ಬಿಡುವಿನಲ್ಲಿರುವ ರವಿ ಶಾಸ್ತ್ರಿ, ಮುಂದೆ ಮತ್ತೆ ವೀಕ್ಷಕ ವಿವರಣೆಗಾರರಾಗಿ ಅಥವಾ ಐಪಿಎಲ್ ಹೊಸ  ಫ್ರಾಂಚೈಸಿ ಅಹಮದಾಬಾದ್ ತಂಡಕ್ಕೆ ಕೋಚ್ ಆಗಿ ಬರಲಿದ್ದಾರೆ ಎಂದೆಲ್ಲಾ ಸುದ್ದಿಗಳು ಹರಿಡಾಡುತ್ತಿವೆ. ಆದರೆ, ನಿವೃತ್ತಿ ಆಟಗಾರರಿಗಾಗಿ ಮುಂದಿನ ವರ್ಷ ನಡೆಯಲಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ಗೆ (ಎಲ್‌ಎಲ್‌ಸಿ) ಆಯುಕ್ತರಾಗಿ ರವಿಶಾಸ್ತ್ರಿ ನೇಮಕಗೊಂಡಿದ್ದಾರೆ.

    ಇದನ್ನೂ ಓದಿ: ಪುತ್ರ ನೀಡಿದ ಆ ದೂರಿನಿಂದಾಗಿ ದ್ರಾವಿಡ್ ಅವರನ್ನು ಕೋಚ್ ಮಾಡಿದೆವು ಎಂದ ಗಂಗೂಲಿ!

    ಎಲ್‌ಎಲ್‌ಸಿ ಮೊದಲ ಆವೃತ್ತಿಯೂ ಮುಂದಿನ ವರ್ಷ ಯುಎಇಯಲ್ಲಿ ಆಯೋಜನೆಗೊಳ್ಳುತ್ತಿದೆ. ಈ ಟೂರ್ನಿಯ ಸಂಪೂರ್ಣ ಉಸ್ತುವಾರಿಯನ್ನು ರವಿಶಾಸ್ತ್ರಿ ವಹಿಸಿಕೊಳ್ಳಲಿದ್ದಾರೆ. ‘ಕ್ರಿಕೆಟ್ ಜತೆ ಮತ್ತೆ ಸಂಪರ್ಕ ಬೆಳೆಸುವುದು ಖುಷಿಯ ವಿಚಾರ. ಲೆಜೆಂಡ್ಸ್ ಲೀಗ್‌ನಲ್ಲಿ ಆಡುವವರು ಬಹುತೇಕ ಚಾಂಪಿಯನ್‌ಗಳಾಗಿರುತ್ತಾರೆ’ ಎಂದು 59 ವರ್ಷದ ರವಿಶಾಸ್ತ್ರಿ ತಿಳಿಸಿದ್ದಾರೆ.

    ಇದನ್ನೂ ಓದಿ: ಆಸ್ಟ್ರೇಲಿಯಾದ ಈ ಗಂಡ-ಹೆಂಡತಿ ಈಗ ಟಿ20 ವಿಶ್ವ ಚಾಂಪಿಯನ್ಸ್!

    ಮಾಜಿ ಆಟಗಾರರು ಒಳಗೊಂಡ ಈ ಲೀಗ್‌ನಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಇತರ ತಂಡಗಳ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಭಾರತ, ಏಷ್ಯಾ ಹಾಗೂ ವಿಶ್ವ ಶೇಷ ತಂಡಗಳನ್ನಾಗಿ ವಿಂಗಡಿಸಲಾಗಿದೆ. ‘ಇಂಥ ದೊಡ್ಡ ಹುದ್ದೆಗಳಿಗೆ ರವಿಶಾಸ್ತ್ರಿಯಂಥ ವ್ಯಕ್ತಿಯೇ ಸೂಕ್ತ. ಅವರೊಬ್ಬ ನಿಜವಾದ ಲೆಜೆಂಡ್. ಭಾರತೀಯ ಕ್ರಿಕೆಟ್‌ಗೆ ರಂಗು ತುಂಬಿದ ವ್ಯಕ್ತಿ’ ಎಂದು ಲೀಗ್‌ನ ಸಿಇಒ ಹಾಗೂ ಸಹ-ಸಂಸ್ಥಾಪಕ ರಮಣ್ ರಹೆಜಾ ತಿಳಿಸಿದ್ದಾರೆ. ರವಿಶಾಸ್ತ್ರಿ ಜತೆಗೆ ಆಸ್ಟ್ರೇಲಿಯಾದ ಫಿಸಿಯೋಥೆರಪಿಸ್ಟ್, ಎನ್‌ಸಿಎಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಂಡ್ರೂ ಲೀಪುಸ್ ಈಗಾಗಲೇ ಲೀಗ್ ಸೇರ್ಪಡೆಗೊಂಡಿದ್ದಾರೆ.

    ಸನ್‌ರೈಸರ್ಸ್‌ಗೆ ಟಾಂಗ್ ನೀಡಿದ ಡೇವಿಡ್​ ವಾರ್ನರ್ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts