More

    ಈ ಫೋಟೋದಲ್ಲಿರುವ ಚಿಕ್ಕ ಹುಡುಗಿ ಯಾರು ಗೊತ್ತಾಯ್ತಾ?

    ಮುಂಬೈ: ಸುಮಾರು 40 ವರ್ಷಗಳ ಹಿಂದೆ ತೆಗೆದ ಒಂದು ಬ್ಲಾಕ್​ ಅಂಡ್​ ವೈಟ್​ ಫೋಟೋ, ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. 80ರ ದಶಕದ ಆರಂಭದಲ್ಲಿ ನಡಡೆದ ರಿಷಿ ಕಪೂರ್​ ಮತ್ತು ನೀತೂ ಸಿಂಗ್​ ಅವರ ಫೋಟೋ ಇದು. ಈ ಫೋಟೋದಲ್ಲಿ ರಿಷಿ ಮತ್ತು ನೀತೂ ಜತೆಗೆ ಒಬ್ಬ ಚಿಕ್ಕ ಹುಡುಗಿ ಇದ್ದು, ಆ ಹುಡುಗಿ ನಂತರದ ವರ್ಷಗಳಲ್ಲಿ ಬಾಲಿವುಡ್​ನಲ್ಲಿ ಜನಪ್ರಿಯ ನಟಿಯಾಗಿ ಹೊಮ್ಮಿದರು. ಇಷ್ಟಕ್ಕೂ ಆ ನಟಿ ಯಾರು ಗೊತ್ತಾ? ರವೀನಾ ಟಂಡನ್​.

    ಇದನ್ನೂ ಓದಿ: ಬಿಗ್​ಬಾಸ್​ ಮನೆಯಿಂದ ಅರ್ಧಕ್ಕೆ ಎಲಿಮಿನೇಟ್ ಆದ ಬಗ್ಗೆ ಕೊನೆಗೂ ಶಾಕಿಂಗ್ ಹೇಳಿಕೆ ನೀಡಿದ ರಾಜೀವ್​!​​

    ಹೌದು, ಈ ಫೋಟೋದಲ್ಲಿರುವುದು ರವೀನಾ ಟಂಡನ್​. ಅಷ್ಟೇ ಅಲ್ಲ, ಈ ಫೋಟೋವನ್ನು ಅವರೇ ತಮ್ಮ ಇನ್​ಸ್ಟಾಗ್ರಾಂನ ಖಾತೆಯಲ್ಲಿ ಮಂಗಳವಾರ ಹಂಚಿಕೊಂಡಿದ್ದಾರೆ.

    ಈ ಕುರಿತು ಬರೆದುಕೊಂಡಿರುವ ರವೀನಾ, ಒಂದು ಅಪರೂಪದ ಫೋಟೋ ಸಿಕ್ಕಿದೆ. ಇದನ್ನು ಹುಡುಕಿಕೊಟ್ಟಿದ್ದಿಕ್ಕೆ ಜೂಹಿ ಬಬ್ಬರ್​ ಅವರಿಗೆ ಧನ್ಯವಾದಗಳು. ಚಿಂಟು ಅಂಕಲ್​ (ರಿಷಿ ಕಪೂರ್​) ತಮ್ಮ ಆತ್ಮಚರಿತ್ರೆಯಲ್ಲಿ ಈ ಫೋಟೋ ಬಳಸಿಕೊಳ್ಳಬೇಕೆಂದುಕೊಂಡಿದ್ದರು. ಈ ಫೋಟೋ ಇದ್ದರೆ ಕೊಡು ಎಂದು ಕೇಳಿದ್ದರು. ಆದರೆ, ಆ ಸಂದರ್ಭದಲ್ಲಿ ನನ್ನ ಬಳಿ ಈ ಫೋಟೋ ಇರಲಿಲ್ಲ. ಎಷ್ಟು ಹುಡುಕಿದರೂ ಸಿಗಲಿಲ್ಲ. ಈಗ ಫೋಟೋ ಸಿಕ್ಕಿದೆಯಾದರೂ, ಕೊಡುವುದಕ್ಕೆ ಚಿಂಟು ಅಂಕಲ್​ ಬದುಕಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ.

    ಇದನ್ನೂ ಓದಿ: ನನಗೆ ಸಾಮಾನ್ಯ ಮನುಷ್ಯನಾಗಿರೋಕೇ ಇಷ್ಟ ಅಂತ ಸೋನು ಹೇಳಿದ್ದೇಕೆ?

    ರಿಷಿ ಕಪೂರ್​ ಮದುವೆಯಲ್ಲಿ ರವೀನಾ ಟಂಡನ್​ ಹೇಗೆ ಎಂಬ ಪ್ರಶ್ನೆ ಬರಬಹುದು. ವಿಷಯವೇನೆಂದರೆ, 70-80ರ ದಶಕದಲ್ಲಿ ಬಾಲಿವುಡ್​ನಲ್ಲಿ ಹೆಸರು ಮಾಡಿದ್ದ ನಿರ್ದೇಶಕರ ಪೈಕಿ ರವಿ​ ಟಂಡನ್​. ಅವರ ಮಗಳೇ ಈ ರವೀನಾ. ರಿಷಿ ಕಪೂರ್ ಜತೆಗೆ ರವಿ ಟಂಡನ್​ಗೆ ಒಳ್ಳೆಯ ಬಾಂಧವ್ಯವಿತ್ತು. ಅಷ್ಟೇ ಅಲ್ಲ, ರಿಷಿ ಅಭಿನಯದಲ್ಲಿ ರಾಹೀ ಬದಲ್​ ಗಯೆ, ಆನ್​ ಔರ್​ ಶಾನ್​ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಬರೀ ರಿಷಿ ಅಷ್ಟೇ ಅಲ್ಲ, ನೀತೂ ಜತೆಗೆ ಕೆಲಸ ಮಾಡಿದ್ದ ರವಿ ಟಂಡನ್​, ವಖ್ತ್​ ಕೀ ದೀವಾರ್​ ಎಂಬ ಚಿತ್ರದಲ್ಲಿ ನೀತೂ ಅವರನ್ನು ನಿರ್ದೇಶಿಸಿದ್ದರು.

    ಇಂಡಿಯನ್ 2 ವಿಳಂಬವಾಗಲು ಕಮಲ್ ಹಾಸನ್ ಸಹ ಕಾರಣವಂತೆ … ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts