More

    ಪಡಿತರ ಚೀಟಿ ಸಂಖ್ಯೆಯೇ ಕುಟುಂಬ ಗುರುತಿನ ಸಂಖ್ಯೆ | ಸಿಎಂ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ತೀರ್ಮಾನ

    ಬೆಂಗಳೂರು: ಕುಟುಂಬ ಗುರುತಿನ ಚೀಟಿ ನೀಡುವ ಯೋಜನೆ ಕುರಿತಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರ್ಚಚಿಸಿದರು. ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಗ್ರ ಮಾಹಿತಿ ಹೊಂದಲು, ಸವಲತ್ತುಗಳು ಅರ್ಹರಿಗೆ ತಲುಪುವಂತೆ ಮಾಡಲು ಹಾಗೂ ವಿವಿಧ ಸೌಲಭ್ಯ ವಂಚಿತರನ್ನು ಗುರುತಿಸಲು ಕುಟುಂಬ ಗುರುತಿನ ಚೀಟಿ ಸಹಕಾರಿಯಾಗಲಿದೆ.

    ಸರ್ಕಾರದ ಬಳಿ ಇರುವ ದತ್ತಾಂಶದಿಂದಾಗಿ ಯೋಜನೆಗಳನ್ನು ಇನ್ನಷ್ಟು ನಿಖರವಾಗಿ ರೂಪಿಸಲು ಅವಕಾಶವಾಗಲಿದೆ. ಆದ್ದರಿಂದ ಈ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಸಿಎಂ ಸೂಚನೆ ನೀಡಿದರು. ಈ ಯೋಜನೆಯಡಿ ಪಡಿತರ ಚೀಟಿ ಸಂಖ್ಯೆಯನ್ನೇ ಕುಟುಂಬ ಗುರುತಿನ ಸಂಖ್ಯೆಯಾಗಿ ಪರಿಗಣಿಸಲು ತೀರ್ವನಿಸಲಾಯಿತು.

    ಇದನ್ನೂ ಓದಿ: ಮೂರು ವರ್ಷಗಳ ಕಾಲ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಅನಿಲ್ ಕುಂಬ್ಳೆ-ರಾಹುಲ್ ಸ್ಥಾನ ಭದ್ರ..!

    ಪಡಿತರ ಚೀಟಿ ಹೊಂದಿಲ್ಲದವರು ಆನ್​ಲೈನ್ ಮೂಲಕ ನೋಂದಾಯಿಸಿ, ಗುರುತಿನ ಸಂಖ್ಯೆ ಪಡೆಯಲು ಕ್ರಮ ವಹಿಸುವಂತೆ ಸೂಚಿಸಲಾಯಿತು. ಎಲ್ಲ ಇಲಾಖೆಗಳ ವ್ಯಾಪ್ತಿಯ ಸಾರ್ವಜನಿಕ ಕುಂದುಕೊರತೆ ನಿವಾರಣೆಗೆ ಏಕೀಕೃತ ವೇದಿಕೆಯನ್ನು ಸೃಜಿಸುವ ಕುರಿತು ರ್ಚಚಿಸಲಾಯಿತು.

    ಇಂಡೋ-ಮ್ಯಾನ್ಮಾರ್ ಗಡಿ ದಾಟಿತ್ತು 66.4 ಕಿಲೋ ತೂಕದ 400 ಚಿನ್ನದ ಗಟ್ಟಿಗಳು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts