More

    ರಥ ನಿರ್ಮಾಣಕ್ಕೆ ಅಗತ್ಯ ಸಹಕಾರ

    ಮಸ್ಕಿ: ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದ ರಥ 150 ವರ್ಷ ಹಳೆಯದಾದ ಹಿನ್ನೆಲೆಯಲ್ಲಿ ಭಕ್ತರು 1.30 ಕೋಟಿ ರೂ. ವೆಚ್ಚದಲ್ಲಿ ನೂತನ ರಥ ನಿರ್ಮಾಣಕ್ಕೆ ಮುಂದಾಗಿದ್ದು, ಆರ್ಥಿಕ ಸೇರಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಭರವಸೆ ನೀಡಿದರು.

    ನೂತನ ರಥ ನಿರ್ಮಾಣ ಕಾರ್ಯ ಪರಿಶೀಲಿಸಿದ ನಂತರ ಮಾತನಾಡಿದರು. ರಥ ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿರುವ ವರ್ತಕ ಮಲ್ಲಪ್ಪ ಕುಡತನಿ ಮಾತನಾಡಿ, ರಥ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಶೇ.70 ಪೂರ್ಣಗೊಂಡಿದೆ. ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕೊಪ್ಪಳದ ಖ್ಯಾತ ಶಿಲ್ಪಿ ಯಲ್ಲಪ್ಪ ಆಚಾರ ಮತ್ತವರ ತಂಡ ಕಳೆದು ನಾಲ್ಕೈದು ತಿಂಗಳಿನಿಂದ ರಥ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದರು.

    ಸಂಪೂರ್ಣ ಸಾಗವಾನಿ ಕಟ್ಟಿಗೆಯಲ್ಲಿ ವಿವಿಧ ಕಲಾಕೃತಿಯೊಂದಿಗೆ 39 ಅಡಿ ಎತ್ತರದ ರಥ ನಿರ್ಮಾಣವಾಗಲಿದೆ. ರಥವನ್ನು ನೂತನ ತಂತ್ರಜ್ಞಾನ ಅಳವಡಿಸಿ ನಿರ್ಮಿಸಲಾಗುತ್ತಿದ್ದು, ಸ್ಟೇರಿಂಗ್, ಜಾಕ್ ಸೌಲಭ್ಯ ಹೊಂದಿರಲಿದೆ. 2024ರ ಫೆಬ್ರವರಿಯಲ್ಲಿ ಮಲ್ಲಿಕಾರ್ಜುನ ಜಾತ್ರೆ ಸಂದರ್ಭದಲ್ಲಿ ನೂತನ ರಥ ದೇವಸ್ಥಾನಕ್ಕೆ ಸಮರ್ಪಣೆಯಾಗಲಿದೆ, ರಥ ನಿರ್ಮಾಣಕ್ಕೆ ಕಾರ್ಯಕ್ಕೆ ಭಕ್ತರು ದೇಣಿಗೆ ನೀಡುವ ಮೂಲಕ ಕೈಜೋಡಿಸಬೇಕು ಎಂದು ಮಲ್ಲಪ್ಪ ಕುಡತಿನಿ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts