More

    ಬಿ.ಸೀಹಳ್ಳಿ ಗ್ರಾಮದಲ್ಲಿ ರಾಸುಗಳ ಪರಿಷೆ ಆರಂಭ

    ಬನ್ನೂರು: ಪಟ್ಟಣದ ಸಮೀಪದ ಬಿ.ಸೀಹಳ್ಳಿ ಗ್ರಾಮದ ಆದಿಶಕ್ತಿ ಹುಚ್ಚಮ್ಮ ದೇವಿಯ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಸುತ್ತಮುತ್ತಲಿನ ಗ್ರಾಮಗಳು ವಿವಿಧ ಜಿಲ್ಲೆಗಳಿಂದ ರಾಸುಗಳನ್ನು ತಂದು ಕಟ್ಟಲಾಗುತ್ತಿದ್ದು, ರಾಸುಗಳ ಪರಿಷೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ.


    ವಿವಿಧ ವಿಭಾಗಗಳಲ್ಲಿ ರಾಸುಗಳಿಗೆ ಬಹುಮಾನ ನೀಡುವ ಹಿನ್ನೆಲೆಯಲ್ಲಿ ಹರಕೆ ಹೊತ್ತ ಭಕ್ತರು ನಾನಾ ಭಾಗಗಳಿಂದ ತಮ್ಮ ರಾಸುಗಳನ್ನು ತಂದು ಇಲ್ಲಿ ಕಟ್ಟುವ ವಾಡಿಕೆ ಇದೆ. ರಾಸುಗಳಿಗಾಗಿ ಬೃಹತ್ ಚಪ್ಪರಗಳನ್ನು ನಿರ್ಮಿಸಿ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡುತ್ತಾರೆ. ಚಿಕ್ಕ ಕರುಗಳಿಂದ ಹಿಡಿದು ದೊಡ್ಡ ರಾಸುಗಳನ್ನು ಕಟ್ಟುತ್ತಾರೆ.


    ಇಲ್ಲಿ ರಾಸುಗಳ ವ್ಯಾಪಾರವು ನಡೆಯುತ್ತದೆ. ದಲ್ಲಾಳಿಗಳ ಹಾವಳಿ ಇಲ್ಲದೆ ರೈತರೇ ನೇರವಾಗಿ ರಾಸುಗಳನ್ನು ಮಾರಾಟ ಮಾಡುವುದರಿಂದ ಇಲ್ಲಿಗೆ ದೂರದ ಊರುಗಳಿಂದ ಪಶುಪಾಲಕರು ಬಂದು ತಮಗೆ ಇಷ್ಟವಾದ ರಾಸುಗಳನ್ನು ಕೊಳ್ಳುತ್ತಾರೆ. ರಾಸುಗಳ ಜತೆಗೆ ಬಂಡೂರು ಕುರಿಗಳೂ ಆಕರ್ಷಣೀಯವಾಗಿದ್ದು, ಅವುಗಳ ವ್ಯಾಪಾರವೂ ಜೋರಾಗಿದೆ.


    ಇಂದು ರಥೋತ್ಸವ:
    ಹುಚ್ಚಮ್ಮ ದೇವಿಯ ರಥೋತ್ಸವ ಶುಕ್ರವಾರ ಮಧ್ಯಾಹ್ನದ ವೇಳೆಗೆ ಜರುಗಲಿದ್ದು, ರಥಕ್ಕೆ ತಳಿರು ತೋರಣ ಅಲಂಕಾರ ಮಾಡುವ ಕಾರ್ಯವು ಭರದಿಂದ ಸಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts