More

    ಅನಿಮಲ್​​ ಸಿನಿಮಾಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಶಾಕಿಂಗ್​..! ಪೇಮೆಂಟ್ ಹೆಚ್ಚಿಸಿಕೊಂಡ್ರಾ ನಟಿ ರಶ್ಮಿಕಾ..?!

    ಡಿ.1 ರಂದು ಬಿಡುಗಡೆಯಾದ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್ʼ ಮೂವಿ ಈಗಾಗಲೇ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ ಈ ಸಿನಿಮಾದಲ್ಲಿ ನಟಿಸಿದ ನಟಿ ನಟಿಯರ ಸಂಭಾವನೆ ಕುರಿತ ಅಪ್​ಡೇಟ್​​​ ಹೊರ ಬಿದ್ದಿದೆ.


    ಹಾಗಿದ್ರೆ ಸಿನಿಮಾದಲ್ಲಿ ನಟಿಸಿದವರ ಸಂಭಾವನೆ ಎಷ್ಟು ಅನ್ನೋದನ್ನ ನೋಡೋಣ. ಬಾಲಿವುಡ್​​​ ನಟ ರಣಬೀರ್ ಕಪೂರ್ ಅನಿಮಲ್‌ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 35 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.


    ಇನ್ನು ಕಿರಿಕ್​​ ಆರ್ಟಿ ಹಿರೋಯಿನ್​​ ಜತೆಗೆ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಬರೋಬ್ಬರಿ 7 ಕೋಟಿ ರೂ. ಯಷ್ಟು ಹಣವನ್ನ ಪಡೆದಿದ್ದಾರೆ ಎನ್ನಲಾಗುತ್ತಿದೆ.
    ರಣಬೀರ್‌ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್‌ ಹಿರಿಯ ನಟ ಅನಿಲ್ ಕಪೂರ್ ಅನಿಮಲ್‌ನಲ್ಲಿ ನಟಿಸಲು 2 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅನಿಮಲ್‌ ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಬಿ ಡಿಯೋಲ್ ಸಂಭಾವನೆ ಈ ಚಿತ್ರದಲ್ಲಿ ನಟಿಸಲು ಬರೋಬ್ಬರಿ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.


    ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಸುಮಾರು 26 ಚಿತ್ರಗಳ ದಾಖಲೆಯನ್ನು ಮುರಿದಿದ್ದ ಈ ಚಿತ್ರ ಇದೀಗ ಐದನೇ ದಿನದಲ್ಲಿ ಶಾರುಖ್ ಖಾನ್ ಅವರ ಜವಾನ್ ಸೇರಿದಂತೆ 14 ದೊಡ್ಡ ಚಿತ್ರಗಳನ್ನು ಹಿಂದಿಕ್ಕಿದೆ.

    ಹಿಂದೆ ಈ ದಾಖಲೆ ಶಾರುಖ್ ಖಾನ್ ಅವರ ಚೆನ್ನೈ ಎಕ್ಸ್‌ಪ್ರೆಸ್ ಹೆಸರಿನಲ್ಲಿತ್ತು. ಈ ಚಿತ್ರ ನಾಲ್ಕನೇ ದಿನಕ್ಕೆ 424.54 ಕೋಟಿ ಕಲೆಕ್ಷನ್ ಮಾಡಿದ್ದರೆ, ಅನಿಮಲ್ 424.87 ಕೋಟಿ ಕಲೆಕ್ಷನ್ ಮಾಡಿದೆ. ಸದ್ಯ ಚೆನ್ನೈ ಎಕ್ಸ್​ಪ್ರೆಸ್​​ ಸಿನಿಮಾದ ದಾಖಲೆಯನ್ನೂ ಅನಿಮಲ್​ ಹಿಂದಿಕ್ಕಿದೆ ಎನ್ನಲಾಗುತ್ತಿದೆ.

    ಮೊದಲ ದಿನವೇ 63 ಕೋಟಿ ರೂ.ಗಳ ಬೃಹತ್ ಕಲೆಕ್ಷನ್ ಮಾಡಿದ ಚಿತ್ರ ಅನಿಮಲ್‌ ರಶ್ಮಿಕಾ ಮಂದಣ್ಣ ನಟನೆಯೂ ತೆರೆಯ ಮೇಲೆ ಸುಂದರವಾಗಿ ಮೂಡಿ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts