More

    ರಶ್ಮಿಕಾ ಮಂದಣ್ಣ ಬಳಿ ಇರುವ ಆಸ್ತಿಯೆಷ್ಟು ಗೊತ್ತಾ? ನಟಿಯ ಒಡೆತನದಲ್ಲಿರುವ ದುಬಾರಿ ಕಾರುಗಳೆಷ್ಟು?

    ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ನಟಿ ಇದೀಗ ಬಹಳ ಎತ್ತರದ ಸ್ಥಾನಕ್ಕೇರಿದ್ದಾರೆ. ಅಂದ ಹಾಗೆ ಈ ನಟಿ ವರ್ಷಕ್ಕೆ ಎಷ್ಟು ಹಣ ದುಡಿಯುತ್ತಾರೆ? ಅವರ ಬಳಿ ಯಾವ ಯಾವ ಕಾರುಗಳಿವೆ? ಎನ್ನುವ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

    ಕಿರಿಕ್ ಪಾರ್ಟಿ ತೆರೆ ಕಂಡ ವರ್ಷ ಅಂದರೆ 2016ರಲ್ಲಿ ರಶ್ಮಿಕಾ ಅವರ ಒಟ್ಟು ಆಸ್ತಿಯ ಮೊತ್ತ ಸರಿ ಸುಮಾರು 3 ಕೋಟಿ ರೂಪಾಯಿಯಷ್ಟಿತ್ತು. ಇದೀಗ ಅವರ ಆಸ್ತಿಯ ಮೊತ್ತ ಸುಮಾರು 40 ಕೋಟಿ ರೂಪಾಯಿಗೂ ಹೆಚ್ಚಿದೆ. ಪ್ರತಿ ವರ್ಷ ಕಡಿಮೆಯೆಂದರೂ 5 ಕೋಟಿ ರೂಪಾಯಿಯನ್ನು ಅವರು ದುಡಿಮೆ ಮಾಡುತ್ತಿದ್ದಾರಂತೆ.

    25 ವರ್ಷದ ರಶ್ಮಿಕಾ ಇದಾಗಲೇ ಹಲವಾರು ದುಬಾರಿ ಕಾರುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 60 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಆಡಿ ಕಾರ್, 20 ಲಕ್ಷ ರೂಪಾಯಿಯಷ್ಟು ಬೆಲೆ ಬಾಳುವ ಟೊಯೋಟೊ ಇನೋವಾ ಕಾರು, ಒಂದು ಕೋಟಿಗೂ ಹೆಚ್ಚು ಮೌಲ್ಯದ ಮರ್ಸಿಡೀಸ್ ಬೆನ್ಜ್, 25 ಲಕ್ಷ ರೂಪಾಯಿಯ ಹುಂಡೈ ಕ್ರೆಟಾ ಕಾರು ಅವರದ್ದಾಗಿದೆ.

    ಕರ್ನಾಟಕದಲ್ಲಿ ತಮ್ಮದೇ ಆದ ವಿಲ್ಲಾ ಇರುವ ಅವರು ಇತ್ತೀಚೆಗೆ ಮುಂಬೈನಲ್ಲೂ ಒಂದು ಅಪಾರ್ಟ್​ಮೆಂಟ್ ಖರೀದಿಸಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲೂ ಮಿಂಚುವ ಆಸೆಯಿಂದಾಗಿ ವಾಣಿಜ್ಯ ನಗರಿಗೆ ಶಿಫ್ಟ್ ಆಗಿದ್ದಾರೆ. (ಏಜೆನ್ಸೀಸ್)

    ಪೆಗಾಸಸ್ ಬೇಹುಗಾರಿಕಾ ಸಾಫ್ಟ್​ವೇರ್​ಗೆ ರಾಹುಲ್ ಗಾಂಧಿ, ಪ್ರಶಾಂತ್ ಕಿಶೋರ್ ಟಾರ್ಗೆಟ್?!

    ಚಿನ್ನಾಭರಣ ಪ್ರಿಯರಿಗೆ ಶುಭಸುದ್ದಿ: ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ

    ತಿರುಪತಿ ತಿಮ್ಮಪ್ಪನಿಗೆ ಆರೂವರೆ ಕೆಜಿ ತೂಕದ ಚಿನ್ನದ ಖಡ್ಗ ಅರ್ಪಿಸಿದ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts