More

    ರಶ್ಮಿಕಾ VS ಪೂಜಾ, ಕಿಯಾರಾ: ಯಾರ ಕೈ ತಪ್ಪಿತು ದಳಪತಿ ವಿಜಯ್ 66ನೇ ಸಿನಿಮಾ?

    ಸದ್ಯ, ದಕ್ಷಿಣ ಭಾರತದಲ್ಲಿ ನಂ.1 ನಟಿಯರೆಂದರೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಬುಟ್ಟ ಬೊಮ್ಮಾ ಪೂಜಾ ಹೆಗ್ಡೆ ಅವರ ಹೆಸರು ಕೇಳಿಬರುತ್ತದೆ. ಹೌದು, ಸಾಲು ಸಾಲು ಸಿನಿಮಾಗಳನ್ನು ಗಿಟ್ಟಿಸಿಕೊಳ್ಳುತ್ತಾ ಇವರಿಬ್ಬರೂ ದಕ್ಷಿಣ ಹಾಗೂ ಉತ್ರರದ ಸಿನಿರಂಗಗಳಲ್ಲಿ ಮಾಡುತ್ತಿರುವ ಕಮಾಲ್ ಅಷ್ಟಿಷ್ಟಲ್ಲಾ. ಇದೀಗ, ಇವರಿಬ್ಬರ ನಡುವೆ ಸಿಕ್ಕಾಪಟ್ಟೆ ಕಾಂಪಿಟಿಷನ್ ಎದುರಾಗುತ್ತಿದೆ. ಹೌದು, ರಶ್ಮಿಕಾ ಅವರು ಪುಷ್ಪಚಿತ್ರದ ಬಳಿಕ ಮತ್ತಷ್ಟು ಖ್ಯಾತಿ ಗಳಿಸಿದ್ದಾರೆ. ಮತ್ತೊಂದೆಡೆ, ನಟಿ ಪೂಜಾ ಹೆಗ್ಡೆ ಅವರು ಸಹ (2022) ಈ ಒಂದೇ ವರ್ಷದಲ್ಲಿ 5 ಸಿನಿಮಾಗಳ ರಿಲೀಸ್ ಹೊಂದಿದ್ದಾರೆ. ಹೀಗಾಗಿ, ರಶ್ಮಿಕಾ ಮಂದಣ್ಣ ಹಾಗೂ ಪುಜಾ ಹೆಗ್ಡೆ ಅವರ ಟ್ರ್ಯಾಕ್ ರೆಕಾರ್ಡ್ ಬಗ್ಗೆ ಹೇಳಬೇಕಾಗಿಲ್ಲ.
    ಆದರೆ, ಈಗ ಈ ನಟಿಯರು ಒಬ್ಬರಿಗೆ ಸಿಕ್ಕ ಅವಕಾಶವನ್ನು ಮತ್ತೊಬ್ಬರು ಗಿಟ್ಟಿಸಿಕೊಳ್ಳುವ ರೇಂಜ್​ಗೆ ಪೈಪೋಟಿ ಎದುರಿಸುತ್ತಿದ್ದಾರೆ. ಹೌದು, ನಟಿ ರಶ್ಮಿಕಾ ಮಂದಣ್ಣ ಈಗ ಮತ್ತೊಬ್ಬ ತಮಿಳು ಸ್ಟಾರ್ ನಟನ ಜೊತೆಗೆ ನಟಿಸಲು ರೆಡಿಯಾಗಿದ್ದಾರೆ. ಆದರೆ, ರಶ್ಮಿಕಾ ಆಯ್ಕೆಯಾದ ಸಿನಿಮಾಗೆ ಮೊದಲು ನಟಿ ಪೂಜಾ ಹೆಗ್ಡೆ ಅವರ ಹೆಸರು ಕೇಳಿಬಂದಿತ್ತು. ಅಂದಹಾಗೆ, ಆ ಸ್ಟಾರ್ ನಟ ಯಾರೋ ಅಲ್ಲ. ಬದಲಿಗೆ ಶೀಘ್ರದಲ್ಲೇ ಬೀಸ್ಟ್ಆಗಿ ಮಿಂಚಲಿರುವ ನಟ ದಳಪತಿ ವಿಜಯ್ ಅವರು. ನಟನ #Thalapathy66 ನೇ ಚಿತ್ರಕ್ಕೆ ಮೊದಲಿಗೆ ನಟಿ ಪುಜಾ ಹೆಗ್ಡೆ ಅವರ ಹೆಸರು ಕೇಳಿಬಂದರೂ, ಇದೀಗ ಈ ಚಿತ್ರದ ಅವಕಾಶ ಒಲಿದಿದ್ದು ಮಾತ್ರ ನಟಿ ರಶ್ಮಿಕಾ ಮಂದಣ್ಣ.
    ಇನ್ನು,ಆರಂಭದಲ್ಲಿ ನಟಿ ಪೂಜಾ ಹೆಗ್ಡೆ ಜೆತೆಗೆ ನಟಿ ಕಿಯಾರಾ ಅಡ್ವಾನಿ ಅವರ ಹೆಸರು ಕೂಡಾ ಈ ಸಿನಿಮಾಗೆಂದು ಕೇಳಿ ಬಂದಿತ್ತು. ಆದರೆ, ಇಬ್ಬರನ್ನು ಪಕ್ಕಕ್ಕೆ ಇಟ್ಟು ರಶ್ಮಿಕಾ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹೌದು, ನಟ ದಳಪತಿ ವಿಜಯ್ ಅವರ 66ನೇ ಚಿತ್ರಕ್ಕೆ ನಟಿ ರಶ್ಮಿಕಾ ಮಂದಣ್ಣ ನಾಯಕಿ ಆಗಲಿದ್ದಾರಂತೆ. ಈ ವಿಚಾರ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ವಿಚಾರ ಕುರಿತು ಕೇವಲ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ ಎನ್ನಲಾಗಿದೆ. ದಳಪತಿ ವಿಜಯ್ ಅವರ ಈ 66ನೇ ಟೈಟಲ್ ಇಲ್ಲದ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಅವರು ನಿರ್ದೇಶನ ಮಾಡಲಿದ್ದಾರೆ.
    ಈ ಚಿತ್ರದ ನಿರ್ದೇಶಕ ವಂಶಿ ಪೈಡಿಪಲ್ಲಿ ಅವರೇ ಸಿನಿಮಾಗೆ ರಶ್ಮಿಕಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ಸೂಚಿಸಿದ್ದಾರಂತೆ. ಯಾಕೆಂದರೆ, ಚಿತ್ರದ ಕಥೆಗೆ ತಕ್ಕಂತೆ ನಾಯಕಿಯ ಪಾತ್ರಕ್ಕೆ ರಶ್ಮಿಕಾ ಅವರೇ ಸರಿಹೊಂದುತ್ತಾರೆ ಎಂಬ ಭಾವನೆ ನಿರ್ದೇಶಕರದ್ದಂತೆ. ಕನ್ನಡ, ತೆಲುಗಿನಲ್ಲಿ ಈಗಾಗಲೇ ಸ್ಟಾರ್ ನಟರ ಜತೆಗೆ ಮಿಂಚಿ ಸ್ಟಾರ್ ನಟಿ ಎನಿಸಿಕೊಂಡ ರಶ್ಮಿಕಾ ಈಗ ಅತ್ತ ಬಾಲಿವುಡ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರ, ಅಮಿತಾಬ್ ಬಚ್ಚನ್ ಜೊತೆಗೆ ತೆರೆಹಂಚಿಕೊಂಡಿದ್ದಾರೆ. ತಮಿಳಿನಲ್ಲಿ ಈಗಾಗಲೇ ರಶ್ಮಿಕಾ ಮಂದಣ್ಣ ನಟ ಕಾರ್ತಿ ಜತೆಗೆ ಸುಲ್ತಾನ್ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈಗ ವಿಜಯ್ ಜೊತೆಗೆ ಸಿನಿಮಾ ಮಾಡುತ್ತಿದ್ದು, ರಶ್ಮಿಕಾ ತಮಿಳಿನಲ್ಲಿ ಸಹ ಸ್ಟಾರ್​ ನಟಿ ಎನಿಸಿಕೊಂಡರೆ ಆಶ್ಚರ್ಯವಿಲ್ಲ.

    ರಶ್ಮಿಕಾ VS ಪೂಜಾ, ಕಿಯಾರಾ: ಯಾರ ಕೈ ತಪ್ಪಿತು ದಳಪತಿ ವಿಜಯ್ 66ನೇ ಸಿನಿಮಾ?

    ಮತ್ತೆ ಬೋಲ್ಡ್ ಅವತಾರ ತಾಳಿದ ಸಮಂತಾ! ಫೋಟೋಗಳು ವೈರಲ್…

    ಅಪ್ಪನಂತೆ ಮಕ್ಕಳು… ದುಬೈನಲ್ಲಿ ಹುಡುಗಿಯ ಜತೆಗಿರುವ ನಾಗಾರ್ಜುನ ಫೋಟೋ ವೈರಲ್! ವಾಸ್ತವ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts