More

    ಐಪಿಎಲ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಗಾಯಕ!

    ನವದೆಹಲಿ: ಕರೊನಾ ಹಾವಳಿಯಿಂದಾಗಿ ಭಾರತದಿಂದ ಯುಎಇಗೆ ಸ್ಥಳಾಂತರಗೊಂಡಿರುವ ಐಪಿಎಲ್ ಟೂರ್ನಿಗೆ ಇದೀಗ ಕಾನೂನು ಬಿಕ್ಕಟ್ಟು ಎದುರಾಗಿದೆ. ಟೂರ್ನಿಗೆ ಪೂರ್ವಭಾವಿಯಾಗಿ ಇತ್ತೀಚೆಗೆ ಐಪಿಎಲ್ ಪ್ರಚಾರದ ಸಲುವಾಗಿ ‘ಆಯೇಂಗೆ ಹಮ್ ವಾಪಸ್’ ಎಂಬ ಧ್ಯೇಯಗೀತೆಯನ್ನು ಬಿಡುಗಡೆ ಮಾಡಲಾಗಿದೆ. ಇದರ ವಿರುದ್ಧ ಗಾಯಕ ಕೃಷ್ಣ ಕೌಲ್ ಅವರು ಕೃತಿಚೌರ್ಯದ ಆರೋಪ ಮಾಡಿದ್ದು, ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ.

    ‘ದೇಖ್ ಕೌನ್ ಆಯಾ ವಾಪಸ್’ ಎಂಬ ತಮ್ಮ ಹಾಡನ್ನು ಕೃತಿಚೌರ್ಯ ಮಾಡಿ ಐಪಿಎಲ್ ಧ್ಯೇಯಗೀತೆಯಲ್ಲಿ ಬಳಸಿಕೊಳ್ಳಲಾಗಿದೆ ಎಂದು ರ‌್ಯಾಪರ್ ಕೃಷ್ಣ ಕೌಲ್ ಆರೋಪಿಸಿದ್ದಾರೆ. ಟ್ವಿಟರ್‌ನಲ್ಲಿ 10.8 ಸಾವಿರ ಹಿಂಬಾಲಕರನ್ನು ಹೊಂದಿರುವ ಜನಪ್ರಿಯ ಗಾಯಕರಾಗಿರುವ ಕೃಷ್ಣ ಕೌಲ್, ಐಪಿಎಲ್ ವಿರುದ್ಧ ತಾವು ಮಾಡಿರುವ ಟ್ವೀಟ್ ಅನ್ನು ವೈರಲ್ ಮಾಡುವಂತೆ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.

    ‘ಹೇ ಗೆಳೆಯರೇ, ನನ್ನ ದೇಖ್ ಕೌನ್ ಆಯಾ ವಾಪಸ್ ಎಂಬ ನನ್ನ ಹಾಡನ್ನು ಐಪಿಎಲ್ ಕೃತಿಚೌರ್ಯ ಮಾಡಿದೆ. ಆಯೇಂಗೆ ಹಮ್ ವಾಪಸ್ ಎಂಬ ಹೆಸರಿನಲ್ಲಿ ಬಳಸಲಾಗಿರುವ ಈ ವರ್ಷದ ಐಪಿಎಲ್‌ನ ಧ್ಯೇಯಗೀತೆಯಲ್ಲಿ ನನಗೆ ಯಾವುದೇ ಕ್ರೆಡಿಟ್ ನೀಡಲಾಗಿಲ್ಲ ಅಥವಾ ಅದನ್ನು ಬಳಸುವುದಕ್ಕೆ ಮುನ್ನ ನನ್ನನ್ನು ಸಂಪರ್ಕಿಸಲಾಗಿಲ್ಲ. ನನ್ನ ಸಹ-ಗಾಯಕರು ಮತ್ತು ಗೆಳೆಯರಿಗೆ ನಾನು ಮನವಿ ಮಾಡುವುದೇನೆಂದರೆ ಈ ಟ್ವೀಟ್ ಅನ್ನು ರೀಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಿ. ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ’ ಎಂದು ಕೃಷ್ಣ ಕೌಲ್ ಅವರು ಐಪಿಎಲ್ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿರುವ ಹಾಡಿನ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಐಪಿಎಲ್ ಶುರುವಾಗುವುದಕ್ಕೆ ಮುನ್ನವೇ ವಿಶೇಷ ದಾಖಲೆ ಬರೆದ ಮುಂಬೈ ಇಂಡಿಯನ್ಸ್!

    ಇದಲ್ಲದೆ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಅವರು, ಕಾನೂನು ಹೋರಾಟ ಮಾಡುವುದಾಗಿಯೂ ತಿಳಿಸಿದ್ದಾರೆ. ಸ್ವತಃ ಸಂಗೀತ ಸಂಯೋಜನೆ ಮಾಡಿರುವ ಈ ಹಾಡನ್ನು ತಾನೇ ಹಾಡಿದ್ದೇನೆ ಎಂದು ಕೃಷ್ಣ ಕೌಲ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts