More

    ಮುಂದಿನ ವರ್ಷ ಸರ್ಕಸ್​ ಮಾಡ್ತಾರಂತೆ ರಣವೀರ್​ ಸಿಂಗ್​- ರೋಹಿತ್​ ಶೆಟ್ಟಿ

    ಮುಂಬೈ: ಕಳೆದ ವರ್ಷ ಬಿಡುಗಡೆಯಾದ ‘ಸಿಂಬಾ’ ಚಿತ್ರದಲ್ಲಿ ರಣವೀರ್​ ಸಿಂಗ್​ ಮತ್ತು ರೋಹಿತ್​ ಶೆಟ್ಟಿ ಮೊದಲ ಬಾರಿ ಒಂದಾಗಿದ್ದರು. ಇನ್ನೇನು ಬಿಡುಗಡೆಗೆ ತಯಾರಿ ನಡೆಸಿರುವ ಸೂರ್ಯವಂಶಿ ಸಿನಿಮಾದಲ್ಲಿಯೂ ನಟ ರಣವೀರ್​ ಸಿಂಗ್​ ಮತ್ತು ನಿರ್ದೇಶಕ ರೋಹಿತ್​ ಶೆಟ್ಟಿ ಕೈ ಜೋಡಿಸಿದ್ದಾರೆ. ಈಗ ಇನ್ನೊಂದು ಹೊಸ ಚಿತ್ರದಲ್ಲಿ ಮತ್ತೆ ಜತೆಯಾಗಿ ಕೆಲಸ ಮಾಡುತ್ತಿದ್ದು, ಶೀರ್ಷಿಕೆ ಸಹ ಘೋಷಣೆ ಆಗಿದೆ.

    ಇದನ್ನೂ ಓದಿ: ಹಾಸ್ಯ ನಟ ಚಿಕ್ಕಣ್ಣನಿಗೆ ‘ಉಪಾಧ್ಯಕ್ಷ’ ಪಟ್ಟ

    ಹೌದು, ಈ ಬಾರಿ ಆಕ್ಷನ್​ ಅಲ್ಲ, ಪಕ್ಕಾ ಕಾಮಿಡಿ ರೂಪದ ಕಥೆಯನ್ನೇ ಈ ತಂಡ ಹೊತ್ತು ಬಂದಿದೆ. ಈಗಾಗಲೇ ಸುದ್ದಿಯಾದಂತೆ ಸಂಜೀವ್​ ಕುಮಾರ್​ ಅಭಿನಯದ ‘ಅಂಗೂರ್​’ ಚಿತ್ರವನ್ನೇ ರೀಮೇಕ್​ ಮಾಡುತ್ತಿದ್ದು, ಇದಕ್ಕೆ ಸರ್ಕಸ್​ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ರಣವೀರ್​ ಸಿಂಗ್​ಗೆ ನಾಯಕಿಯರಾಗಿ ಜಾಕ್ವೆಲೀನ್​ ಫರ್ನಾಂಡಿಸ್​ ಮತ್ತು ಪೂಜಾ ಹೆಗ್ಡೆ ಇಬ್ಬರೂ ನಟಿಸುತ್ತಿದ್ದಾರೆ.

    ‘ಅಂಗೂರ್​’ ಬಾಲಿವುಡ್​ನ ಕ್ಲಾಸಿಕ್​ ಚಿತ್ರ. ಶೇಕ್​ಸ್ಪಿಯರ್​ನ ‘ಕಾಮಿಡಿ ಆಫ್​ ಎರರ್ಸ್​’ ನಾಟಕವನ್ನು ಆಧರಿಸಿ ಗುಲ್ಜಾರ್​ ನಿರ್ದೇಶನ ಮಾಡಿದ್ದರು. ಇನ್ನು ಸಂಜೀವ್​ ಕುಮಾರ್​ ಮತ್ತು ದೇವನ್​ ವರ್ಮಾ ಈ ಚಿತ್ರದಲ್ಲಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಅದೇ ನಾಟಕವನ್ನಾಧರಿಸಿ, ಕನ್ನಡದಲ್ಲಿ ರಮೇಶ್​ ಅರವಿಂದ್​ ಅಭಿನಯದಲ್ಲಿ ‘ಉಲ್ಟಾ ಪಲ್ಟಾ’ ಚಿತ್ರ ನಿರ್ಮಾಣವಾಗಿತ್ತು. ಈಗ ಅದೇ ‘ಅಂಗೂರ್​’ ಚಿತ್ರವು ಬಾಲಿವುಡ್​ನಲ್ಲಿ ಇನ್ನೊಮ್ಮೆ ರೀಮೇಕ್​ ಆಗುವುದಕ್ಕೆ ಸಜ್ಜಾಗಿದೆ.

    ಇದನ್ನೂ ಓದಿ: ತ್ರಿಮೂರ್ತಿ ಸನ್ನಿಧಿಯಲ್ಲಿ ‘ವಿಧಿಬರಹ’ ಆರಂಭ

    ರೋಹಿತ್ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಬ್ಯಾಕ್​ ಟು ಬ್ಯಾಕ್​ ಆಕ್ಷನ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ‘ಸಿಂಬಾ’, ‘ಸೂರ್ಯವಂಶಿ’ ನಂತರ ಮುಂದೇನು ಎಂದು ಅವರು ಯೋಚಿಸುತ್ತಿದ್ದಾಗ, ‘ಅಂಗೂರ್​’ ಚಿತ್ರವನ್ನು ರೀಮೇಕ್​ ಮಾಡುವ ಯೋಚನೆ ಹೊಳೆಯಿತಂತೆ. ಸದ್ಯಕ್ಕೆ ಕೆಲಸಗಳು ಪ್ರಾರಂಭವಾಗಿದ್ದು, ಮುಂದಿನ ವರ್ಷ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ನಿರ್ದೇಶನದ ಜತೆಗೆ ನಿರ್ಮಾಣದ ಹೊಣೆಯನ್ನೂ ರೋಹಿತ್​ ಶೆಟ್ಟಿ ಹೊತ್ತಿದ್ದಾರೆ.

    ಕ್ಯಾಮರಾ ಬಗ್ಗೆ ನಟ ಗಣೇಶ್​ ಭಾವುಕ ಮಾತು; ತ್ರಿಬಲ್​ ರೈಡಿಂಗ್​ ಶೂಟಿಂಗ್​ ಶುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts