More

    ಈ ಬಾರಿ ಆನ್​ಲೈನ್​ನಲ್ಲಿ ರಂಗಶಂಕರ ಮ್ಯಾಂಗೋ ಪಾರ್ಟಿ!

    ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ಜನಪ್ರಿಯ ನಟ, ನಿರ್ಮಾಪಕ, ನಿರ್ದೇಶಕ ಎನಿಸಿದ್ದ ಶಂಕರ್​ನಾಗ್​ ಅವರ ಕನಸಿನ ಕೂಡು ರಂಗಶಂಕರದಲ್ಲಿ ಮಾವಿನಹಣ್ಣಿನ ಋತುವಿನಲ್ಲಿ ಪ್ರತಿ ವರ್ಷ ಮ್ಯಾಂಗೋ ಪಾರ್ಟಿ ಆಯೋಜಿಸಲಾಗುತ್ತದೆ. ಅದರಂತೆ ಈ ಬಾರಿ ಜೂನ್​ 14ರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.30ರವರೆಗೆ ಮ್ಯಾಂಗೋ ಪಾರ್ಟಿ ನಡೆಯಲಿದೆ. ಈ ಬಾರಿಯ ಪಾರ್ಟಿ ಎಂದಿನಂತೆ ಇರದೆ, ಸ್ವಲ್ಪ ವಿಭಿನ್ನವಾಗಿರಲಿದೆ ಎಂದು ಪಾರ್ಟಿಯ ಆಯೋಜಕಿ ಅರುಂಧತಿ ನಾಗ್​ ಹೇಳಿದ್ದಾರೆ.

    ಮಾವಿನ ಪಾರ್ಟಿ ಹೀಗಿರುತ್ತದೆ: ಪಾರ್ಟಿಗೆ ಆಗಮಿಸುವವರು ತಮ್ಮಿಷ್ಟದ ಒಂದು ಕೆ.ಜಿ. ಮಾವಿನಹಣ್ಣನ್ನು ತಂದು ಪಾರ್ಟಿ ಸ್ಥಳದಲ್ಲಿ ನಿಗದಿಪಡಿಸಲಾಗಿರುವ ಬುಟ್ಟಿಯೊಳಗೆ ಹಾಕಬೇಕು. ಅಂತೆಯೇ ಬುಟ್ಟಿಯಲ್ಲಿರುವ ಇತರೆ ಬಗೆಯ ಮಾವಿನಹಣ್ಣುಗಳನ್ನು ತೆಗೆದುಕೊಂಡು ತಿನ್ನಬೇಕು. ಅಲ್ಲದೆ, ತಮ್ಮಲ್ಲಿರುವ ಗಾಯನ, ನೃತ್ಯ, ಚಿತ್ರಕಲೆ ಮತ್ತಿತರ ಕಲೆಗಳನ್ನು ಪ್ರದರ್ಶಿಸಬೇಕು.

    ಇದನ್ನೂ ಓದಿ: ಈ ಬ್ಯಾಟರಿ ಬಳಸಿದ್ರೆ 20 ಲಕ್ಷ ಕಿ.ಮೀ. ಸಂಚರಿಸುತ್ತೆ ಕಾರು…! ಎಲೆಕ್ಟ್ರಿಕ್​ ವಾಹನ ಕ್ಷೇತ್ರದಲ್ಲಿ ಮಿಂಚಿನ ಸಂಚಾರ

    ಪ್ರತಿ ಬಾರಿಯೂ ಅಂದಾಜು 300 ಕೆ.ಜಿ.ಯಷ್ಟು 50 ಬಗೆಯ ಮಾವಿನಹಣ್ಣುಗಳನ್ನು ಪಾರ್ಟಿಗೆ ತಂದು ವಿನಿಮಯ ಮಾಡಿಕೊಳ್ಳಲಾಗುತ್ತದೆ. ರಂಗಗೀತೆಗಳ ಗಾಯನ ಸೇರಿ ವಿವಿಧ ಬಗೆಯ ಕಲೆ ಮತ್ತು ಪ್ರತಿಭಾಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. 2003ರಲ್ಲಿ ಮೊದಲ ಮ್ಯಾಂಗೋ ಪಾರ್ಟಿ ಆಯೋಜನೆಗೊಂಡಿದ್ದು, ಇಂದಿನವರೆಗೂ ನಿರಂತರವಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ.

    ಈ ಬಾರಿ ವಿಭಿನ್ನ: ಸದ್ಯ ಕೋವಿಡ್​-19 ಪಿಡುಗು ಜಾಗತಿಕವಾಗಿ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಮ್ಯಾಂಗೋ ಪಾರ್ಟಿಯನ್ನು ಆನ್​ಲೈನ್​ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಅರುಂಧತಿ ನಾಗ್​ ವಿವರಿಸಿದ್ದಾರೆ.

    ಎಂದಿನಂತೆ ಈ ಬಾರಿಯೂ 5 ಮತ್ತು 6 ವರ್ಷದ ಮಕ್ಕಳಿಗೆ ಕತೆ ಹೇಳುವ ಸ್ಪರ್ಧೆ ಇರಲಿದೆ. ಹಿರಿಯರಿಗೆ ಮಾವಿನ ವಿವಿಧ ಬಗೆಯ ಭಕ್ಷ್ಯಗಳ ತಯಾರಿಕೆಯ ಸ್ಪರ್ಧೆ ಇರಲಿದೆ. ಪ್ರಶಸ್ತಿಗೆ ಆಯ್ಕೆಯಾಗುವ ಭಕ್ಷ್ಯವನ್ನು ರಂಗಶಂಕರದ ಕೆಫೆಯಲ್ಲಿ ತಯಾರಿಸಿ, ಅದರ ವಿಡಿಯೋವನ್ನು ಮೊಬೈಲ್​ನಲ್ಲಿ ಪ್ರಸಾರ ಮಾಡಲಾಗುವುದು ಎಂದು ಹೇಳಿದ್ದಾರೆ.

    ಸೆಕ್ಸ್​ ತಪ್ಪು, ರೇಪ್​ ಓಕೆನಾ ಎಂದು ನಿರ್ಮಾಪಕಿ ಏಕ್ತಾ ಕಪೂರ್​ ಪ್ರಶ್ನಿಸಿದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts