More

    ದುಡಿದ ಹಣದಲ್ಲಿ ಸಮಾಜಮುಖಿ ಕೆಲಸ ಮಾಡಿ; ಪರಮೇಶಪ್ಪ ಗೂಳಣ್ಣವರ ಜನ್ಮದಿನ ಸಮಾರಂಭದಲ್ಲಿ ಶ್ರೀ ಚನ್ನವೀರ ಶಿವಯೋಗಿಗಳ ಕಿವಿಮಾತು

    ರಾಣೆಬೆನ್ನೂರ: ಮನುಷ್ಯ ತನ್ನ ಜೀವನದಲ್ಲಿ ಹೆತ್ತವರಿಗೆ, ದೇಶಕ್ಕೆ ಹಾಗೂ ಭೂಮಿಗೆ ಎಂದೂ ಭಾರವಾಗಬಾರದು. ತನ್ನ ದುಡಿಮೆಯ ಹಣದಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಸಮಾಜಕ್ಕಾಗಿ ಬಳಕೆ ಮಾಡಬೇಕು. ಸಮಾಜಮುಖಿ ಚಿಂತನೆ ಹೊಂದಿರುವ ಪರಮೇಶಪ್ಪ ಗೂಳಣ್ಣನವರ ಇಂತಹ ಕೆಲಸಗಳ ಮೂಲಕ ಮಾದರಿಯಾಗಿದ್ದಾರೆ ಎಂದು ಲಿಂಗನಾಯಕನಹಳ್ಳಿ ಜಂಗಮಕ್ಷೇತ್ರದ ಚನ್ನವೀರ ಶಿವಯೋಗಿಗಳು ಹೇಳಿದರು.
    ನಗರದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಎಪಿಎಂಸಿ ಮಾಜಿ ಸದಸ್ಯ, ಬಿಜೆಪಿ ಮುಖಂಡ ಪರಮೇಶಪ್ಪ ಗೂಳಣ್ಣನವರ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಇಲಾಖೆಗಳ ನೌಕರರಿಗೆ ಹಾಗೂ ಸಮಾಜ ಸೇವಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿಕೊಂಡು ಅವರು ಮಾತನಾಡಿದರು.
    ಮಾಜಿ ಶಾಸಕ ಅರುಣಕುಮಾರ ಪೂಜಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮನುಷ್ಯನಿಗೆ ಹುಟ್ಟು ಆಕಸ್ಮಿಕವಾದರೂ ಸಾವು ಖಚಿತ. ಹುಟ್ಟು ಸಾವಿನ ನಡುವೆ ನಾವು ಮಾಡುವ ಸೇವೆ ಶಾಶ್ವತವಾಗಿ ಉಳಿಯುತ್ತದೆ. ಪರಮೇಶಣ್ಣ ತಾವು ಬೆವರು ಸುರಿಸಿ ದುಡಿದ ಹಣದಲ್ಲಿ ಸಮಾಜಮುಖಿ ಕಾರ್ಯ ಮಾಡುತ್ತಿದ್ದು, ಅವರ ಈ ಕೆಲಸಗಳು ನಿರಂತರವಾಗಿರಲಿ ಎಂದರು.
    ಗೌರಮ್ಮ ಬಸಪ್ಪ ಗೂಳಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಮಾಜಿ ಸಚಿವ ಆರ್.ಶಂಕರ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಡಿವೈಎಸ್‌ಪಿ ಕೆ.ವಿ.ಶ್ರೀಧರ, ಮೋಟೆಬೆನ್ನೂರಿನ ಪೇಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕಾಂತೇಶ ಈಶ್ವರಪ್ಪ, ನಗರಸಭಾ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ನಾಗರಾಜ ಅಡ್ಮನಿ, ಹೊನ್ನವ್ವ ಕಾಟಿ, ಬಿಜೆಪಿ ಮುಖಂಡರಾದ ಕೆ.ಶಿವಲಿಂಗಪ್ಪ, ಪಾಲಾಕ್ಷಗೌಡ ಪಾಟೀಲ, ಬಸವರಾಜ ಹಾವೇರಿಮಠ, ಕರಬಸಪ್ಪ ಮಾಕನೂರ, ರೂಪಾ ಬಾಕಳೆ, ಶಿವಕುಮಾರ ಮುದ್ದಪ್ಪಳವರ, ಸೋಮಣ್ಣ ಗೌಡಶಿವಣ್ಣನವರ, ರಮೇಶ ನಾಯಕ, ರಾಜೇಂದ್ರ ಬಸೇನಾಯ್ಕರ, ಎ.ಬಿ.ಪಾಟೀಲ, ಡಾ.ಗಿರೀಶ ಕೆಂಚಪ್ಪನವರ, ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts