More

    ವೆಂಕಟೇಶ್ವರನ ಕಣ್ತುಂಬಿಕೊಂಡ ಭಕ್ತಗಣ; ರಾಣೆಬೆನ್ನೂರಲ್ಲಿ ಅದ್ಧೂರಿ ವೈಕುಂಠ ಏಕಾದಶಿ ಆಚರಣೆ

    ರಾಣೆಬೆನ್ನೂರ: ಇಲ್ಲಿನ ಮೆಡ್ಲೇರಿ ರಸ್ತೆ ವಾಗೀಶ ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ವೈಕುಂಠ ಏಕಾದಶಿ ಅಂಗವಾಗಿ ಶ್ರೀ ವೆಂಕಟೇಶ್ವರ ದೇವರಿಗೆ ವಿಶೇಷ ಪೂಜೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
    ವೈಕುಂಠ ಏಕಾದಶಿ ದಿನ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನ ಬಳಿ ಸ್ವರ್ಗದ ಮಾದರಿಯ ಮಂಟಪ ನಿರ್ಮಿಸಲಾಗಿತ್ತು. ಸಹಸ್ರಾರು ಭಕ್ತರು ಮಂಟಪದ ಮೂಲಕ ಸಾಗಿಬಂದು ಅದರ ಎದುರಿನ ಕಟ್ಟೆಯ ಮೇಲಿನ ದೇವರ ದರ್ಶನ ಪಡೆದು ಪುನೀತರಾದರು.
    ದರ್ಶನದ ನಂತರ ಆಗಮಿಸಿದ ಎಲ್ಲ ಭಕ್ತರಿಗೆ ತಿರುಪತಿ ಮಾದರಿ ಲಡ್ಡು ಪ್ರಸಾದ ವಿತರಿಸಲಾಯಿತು. ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ದರ್ಶನಕ್ಕೆ ಅವಕಾಶ ಒದಗಿಸಲಾಗಿತ್ತು. ಗೋವಿಂದ ಚಿಮ್ಮಲಗಿ ನೇತೃತ್ವದ ಅರ್ಚಕರ ತಂಡ ವಿಶೇಷ ಪೂಜೆ ನೆರವೇರಿಸಿದರು.
    ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಅರುಣಕುಮಾರ ಪೂಜಾರ, ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ ರಾಯಚೂರ, ಡಾ.ಆರ್.ಎಂ.ಕುಬೇರಪ್ಪ, ಸಂತೋಷಕುಮಾರ ಪಾಟೀಲ, ಏಕನಾಥ ಭಾನುವಳ್ಳಿ, ಚೋಳಪ್ಪ ಕಸವಾಳ, ಹಾಲೇಶ ಗವಳಿ, ರಾಜೀವ ಕುಬೇರಪ್ಪ, ಹನುಮಂತಪ್ಪ ಅರೇಪಲ್ಲಿ, ನಾಗರಾಜ ಗೌಡರ, ವೆಂಕಟೇಶ ಬಸ್ತಿಪಾಡ, ಚಂದ್ರು ರಾಯಚೂರ, ಗುರು ರಾಯಚೂರ, ವೆಂಕಟೇಶ ಮಂಗ್ಲೆ, ಪ್ರವೀಣ ಅರೇಪಲ್ಲಿ, ಕೆ.ಗುರುರಾಜ, ನಾಗರಾಜ ಪವಾರ, ಮುರಳಿ ದಾವಣಗೆರೆ, ಅಮಿತ್ ರಾಯಚೂರ, ಅಜಿತ ರಾಯಚೂರ ಸೇರಿದಂತೆ ಸಹಸ್ರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
    ನಾದಸ್ವರ, ಸಂಗೀತ ಸೇವೆ :
    ಬೆಳಗ್ಗೆ ದೇವರಿಗೆ ಮಹಾಭಿಷೇಕ, ಅಲಂಕಾರ, ನೈವೇದ್ಯ ನೆರವೇರಿಸಲಾಯಿತು. ನಂತರ ವೇದಮಂತ್ರ, ಮಂಗಲವಾದ್ಯಗಳೊಂದಿಗೆ ಗ್ರಾಮ ಪ್ರದಕ್ಷಿಣೆ ಹಾಗೂ ವೈಕುಂಠ ಮಂಟಪದಲ್ಲಿ ಶ್ರೀ ಭೂ ಸಹಿತ ಶ್ರೀನಿವಾಸನ ಪ್ರತಿಷ್ಠಾಪನೆ ಮಾಡಲಾಯಿತು. ಸಂಜೆ ನಾದ ಸ್ವರ ಹಾಗೂ ಭಜನಾ ಮಂಡಳಿಗಳಿಂದ ಸಂಗೀತ ಸೇವೆ ಜರುಗಿತು. ರಾತ್ರಿ 9ಕ್ಕೆ ವಿಷ್ಣು ಸಹಸ್ರನಾಮ, ಮಹಾಮಂಗಳಾರತಿ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts