More

    ಕಾನೂನು ತಿಳಿದುಕೊಂಡು, ಗೌರವಿಸಬೇಕು; ವೈ.ಎಲ್. ಲಾಡಖಾನ್

    ರಾಣೆಬೆನ್ನೂರ: ಭಾರತದ ಸಂವಿಧಾನ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕನ್ನು ನೀಡಿದೆ. ಎಲ್ಲರಿಗೂ ಕಾನೂನಿನ ಅರಿವು ಇರಬೇಕು. ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಧೀಶೆ ವೈ.ಎಲ್. ಲಾಡಖಾನ್ ಹೇಳಿದರು.
    ಮಹಿಳಾ ದಿನಾಚರಣೆ ನಿಮಿತ್ತ ರೋಟರಿ ಕ್ಲಬ್ ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿ ವತಿಯಿಂದ ನಗರದ ನಗರದ ನಿವೃತ್ತ ನೌಕರರ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಹೆಣ್ಣುಮಕ್ಕಳಿಗೆ ಶಿಕ್ಷಣ ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಹೆಣ್ಣು ಮಕ್ಕಳಿಗೆ ಮುಂದೆ ಗುರಿ ಇರಬೇಕು. ಆ ಗುರಿ ತಲುಪಲು ಗುರುವಿನ ನೆರವು ಪಡೆದು ಶ್ರಮಿಸಬೇಕು. ವಿಧ್ಯಾರ್ಥಿ ಜೀವನದಲ್ಲಿ ಕ್ರಿಯಾಶೀಲರಾಗಿರಬೇಕು. ಸಮಯಕ್ಕೆ ಮಹತ್ವ ಕೊಡಬೇಕು. ಓದುವ ಸಮಯದಲ್ಲಿ ಚೆನ್ನಾಗಿ ಅಭ್ಯಾಸ ಮಾಡಬೇಕು. ಇದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ಆಲದರ್ತಿ, ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬುರಡಿಕಟ್ಟಿ, ಬಿಇಒ ಎಂ.ಎಚ್. ಪಾಟೀಲ, ವಕೀಲ ಕುಮಾರ ಮಡಿವಾಳರ, ರೋಟರಿ ಕ್ಲಬ್ ಅಧ್ಯಕ್ಷ ಎಂ.ಎ. ಅನಂತರೆಡ್ಡಿ, ಎಸ್.ಡಿ. ಬಳಿಗಾರ, ಜಿ.ಎನ್. ಸಿಂಹ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts