More

    ಹಿಂದು ಧರ್ಮ ರಕ್ಷಣೆಗೆ ಪಣ ತೊಡೋಣ; ಪ್ರಮೋದ ಮುತಾಲಿಕ್

    ರಾಣೆಬೆನ್ನೂರ: ಹಿಂದುಗಳು ಜಾತಿ, ಪಕ್ಷದ ಹೆಸರಿನಲ್ಲಿ ಬೇರೆ ಬೇರೆ ಆಗುವ ಬದಲು ಅದನ್ನು ಮನೆಯಲ್ಲಿಯೆ ಇಟ್ಟು ಹೊರಗೆ ಬಂದಾಗ ನಾನೊಬ್ಬ ಹಿಂದು ಎಂದು ಒಂದಾಗಬೇಕು. ಇಲ್ಲವಾದರೆ ಹುಬ್ಬಳ್ಳಿ, ಬೆಂಗಳೂರಿನ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅಡ್ಡಿ ಪಡಿಸುತ್ತಿರುವ ಮುಸ್ಲಿಮರು ಮುಂದಿನ ದಿನದಲ್ಲಿ ನಿಮ್ಮ ಮನೆಯಲ್ಲಿ ಪೂಜೆ ಮಾಡುವುದನ್ನು ತಡೆಯಲು ಬರುತ್ತಾರೆ. ಆದ್ದರಿಂದ ಹಿಂದುಗಳ ಜಾಗೃತಿ ಅನಿವಾರ್ಯವಾಗಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
    ಇಲ್ಲಿಯ ಮುನ್ಸಿಪಲ್ ಮೈದಾನದಲ್ಲಿ ಸ್ಥಳೀಯ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ವತಿಯಿಂದ 15ನೇ ವರ್ಷ ಗಣೇಶೋತ್ಸವ ನಿಮಿತ್ತ ಬುಧವಾರ ಸಂಜೆ ಏರ್ಪಡಿಸಿದ್ದ ಹಿಂದು ಧಾರ್ಮಿಕ ಜಾಗೃತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
    ಪ್ರತಿಯೊಬ್ಬರೂ ಹಿಂದು ಧರ್ಮ ಪಾಲನೆ, ದೇಶದ ಸಂಸ್ಕೃತಿ ಉಳಿಸಲು ಪಣತೊಡಬೇಕು. ಸ್ವದೇಶಿ ವಸ್ತು ಖರೀಸಬೇಕು. ಹಿಂದು ರಾಷ್ಟ್ರ ಉಳಿದರೆ ಮಾತ್ರ ನನ್ನ ಜಾತಿ, ಪಕ್ಷ, ಮನೆ, ಮಠ ಉಳಿಯುತ್ತದೆ ಎಂಬುದನ್ನು ಅರ್ಥೈಯಿಸಿಕೊಳ್ಳಬೇಕು. ಮುಸ್ಲಿಮರ ಓಲೇಕೆಗಾಗಿ ಅವರು ಹೇಳಿದಂತೆ ನಡೆದರೆ ಹಿಂದು ರಾಷ್ಟ್ರ ಉಳಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
    ಮುಸ್ಲಿಮರು ಈಗಾಗಲೇ ಹಿಂದು ಸಮಾಜಕ್ಕೆ ಅಲ್ಲಲ್ಲಿ ಅಡ್ಡಿ ಪಡಿಸುತ್ತಿದ್ದಾರೆ. ಆದರೆ, ಹಿಂದುತ್ವದ ಹೋರಾಟಗಾರರಿಂದ ಇಂದಿಗೂ ದೇಶದ ಇಸ್ಲಾಂಮಿಕ್ ಆಗಿಲ್ಲ. ಅನೇಕರ ಪರಿಶ್ರಮ, ರಕ್ತ ಸುರಿಸುತ್ತಿರುವ ಫಲವಾಗಿ ಇನ್ನೂ ಹಿಂದು ರಾಷ್ಟ್ರ ಉಳಿದಿದೆ. ಆದ್ದರಿಂದ ಹಿಂದುತ್ವದ ಉಳಿವಿಗಾಗಿ ಪ್ರತಿಯೊಬ್ಬರೂ ಹೋರಾಟಕ್ಕೆ ಸಿದ್ಧರಾಗಿರಬೇಕು ಎಂದರು.
    ಇಲ್ಲಿಯ ಬಿಜೆಪಿಯವರಿಗೆ ಅಧಿಕಾರ ಕಳೆದುಕೊಂಡಾಗ ಮಾತ್ರ ಹಿಂದುತ್ವ ನೆನಪಾಗುತ್ತಿದೆ. ಅಧಿಕಾರ ಬಂದ ಕೂಡಲೇ ಹಿಂದುತ್ವ, ಹಿಂದು ಕಾರ್ಯಕರ್ತರನ್ನು ಮರೆತು ಬಿಡುತ್ತಾರೆ. ಇಂಥವರನ್ನು ನಂಬಬೇಡಿ. 500 ವರ್ಷದ ಸಮಸ್ಯೆ ಬಗೆಹರಿಸಿ ಅಯೋಧ್ಯೆಯಲ್ಲಿಯೆ ರಾಮ ಮಂದಿರ ನಿರ್ಮಾಣ ಮಾಡಲು ನರೇಂದ್ರ ಮೋದಿಯವರೇ ಪ್ರಧಾನಿಯಾಗಿ ಬರಬೇಕಾಯಿತು ಎಂದರು.
    ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಯವರು ನೂರು ವರ್ಷ ಹೋದರೂ ಸರಿ ಮತ್ತೇ ಅಯೋಧ್ಯೆಯಲ್ಲಿ ಬಾಬರ್ ಮಸೀದಿ ಕಟ್ಟುವುದಾಗಿ ಹೇಳುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಶ್ರೀ ರಾಮ ಮಂದಿರದ ಒಂದು ಹುಲ್ಲು ಕಡಿ ಕೂಡ ಅಲ್ಲಾಡಿಸಿ ತೋರಿಸಲಿ ಎಂದು ಸವಾಲು ಹಾಕಿದ ಅವರು, ಅಪಘಾನಿಸ್ತಾನದಲ್ಲಿ ಬಾಬರ್‌ನ ಮಸೀದಿ ತಿಪ್ಪೆ ಗುಂಡಿ ಆಗಿ ಹೋಗಿದೆ. ಅದನ್ನು ಮೊದಲು ನೋಡಿಕೊಳ್ಳಿ ಎಂದು ಕುಟುಕಿದರು.
    ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಮಾತನಾಡಿ, ದೇಶದ ಅನ್ನ ತಿಂದು ಸೈನಿಕರ ಮೇಲೆ ಹಾಗೂ ದೇವ, ದೇವತೆಗಳ ಮೇಲೆ ಅವಹೇಳನ ಮಾಡುತ್ತಿರುವ ಕೊಳಕು ಮನಸ್ಸುಗಳನ್ನು ಹೊರ ಹಾಕಬೇಕು ಎಂಬ ಉದ್ದೇಶದಿಂದ ಗಣೇಶೋತ್ಸವ ಆರಂಭಿಸಿದ್ದೇವೆ. ದೇಶ, ಹಿಂದುತ್ವ, ಸಂಸ್ಕಾರ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಮ್ಮಿಂದ ನಿರಂತರವಾಗಿರಲಿದೆ ಎಂದರು.
    ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
    ಕನ್ನಡ ಕೆಚ್ಚೆದೆಯ ಅಕ್ಕ ಅನು, ಶ್ರೀ ರಾಮ ಮಂದಿರದ ಕಲಾಕೃತಿ ಸಿದ್ಧಪಡಿಸಿದ ಕಲಾವಿದ ಇಂದ್ರಕುಮಾರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts