More

    ಮಾವನ ಕುಲದ ಒಳಿತಿಗೆ ವಿಜ್ಞಾನದ ಕೊಡುಗೆ ಅಪಾರ; ವಿಜ್ಞಾನಿ ರಮೇಶ ನಾಯ್ಡು

    ರಾಣೆಬೆನ್ನೂರ: ಬಾಹ್ಯಾಕಾಶ ಮತ್ತು ಉದ್ಯಮಶೀಲತೆ ಸಾಧಿಸುವತ್ತ ಇಸ್ರೋ ಗಮನ ಹರಿಸುತ್ತಿದೆ. ಮಾನವ ಕುಲದ ಒಳಿತಿಗೆ ವಿಜ್ಞಾನ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಇಸ್ರೋ ಮತ್ತು ಯು.ಆರ್. ರಾವ್ ಸೆಟಲೈಟ್ ಸೆಂಟರ್‌ನ ವಿಜ್ಞಾನಿ ವಿ. ರಮೇಶ ನಾಯ್ಡು ತಿಳಿಸಿದರು.
    ಇಲ್ಲಿಯ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬೆಂಗಳೂರಿನ ಇಸ್ರೋ ಮತ್ತು ಯು.ಆರ್. ರಾವ್ ಸೆಟಲೈಟ್ ಸೆಂಟರ್ ವತಿಯಿಂದ ಗುರುವಾರ ಏರ್ಪಡಿಸಿದ್ದ ವಿಶ್ವ ಬಾಹ್ಯಾಕಾಶ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಒಂದು ವಾರ ವಿಶ್ವ ಬಾಹ್ಯಾಕಾಶ ವಾರವಾಗಿ ಆಚರಿಸಲಾಗುತ್ತಿದೆ. ಇದು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಅಂತಾರಾಷ್ಟ್ರೀಯ ಸಂಭ್ರಮಾಚರಣೆ ಸಮಯವಾಗಿದೆ. ಬಾಹ್ಯಾಕಾಶವನ್ನು ಮನುಷ್ಯರು ಹೇಗೆ ಉಪಯೋಗಿಸುತ್ತಾರೆ ಎಂಬುದರ ಮೇಲೆ ಬಾಹ್ಯಾಕಾಶ ಸುಸ್ಥಿರತೆ ಅವಲಂಬಿತವಾಗಿದೆ. ಅದರಲ್ಲೂ ಭೂಮಿಯ ಸುತ್ತ ಇರುವ ಕಕ್ಷೆಯ ಪ್ರದೇಶವನ್ನು ಮನುಷ್ಯರು ಹೇಗೆ ಬಳಸುತ್ತಾರೆ ಎಂಬುದು ಮುಖ್ಯ ಎಂದರು.
    ವಿದ್ಯಾಲಯದ ಪ್ರಾಂಶುಪಾಲ ಡಾ. ಶಿವಕುಮಾರ ಬಿ. ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗೆ ಮುಕ್ತವಾಗಿ ಉಪಗ್ರಹ, ಉಡಾವಣೆ ವಾಹನ ಮಾದರಿಗಳು, ಪೋಸ್ಟರ್ ಮತ್ತು ವೀಡಿಯೊ ಪ್ರದರ್ಶಿಸಲಾಯಿತು. ಜಿಲ್ಲೆಯ ವಿವಿಧ ಶಾಲೆ, ಕಾಲೇಜ್‌ನ ವಿದ್ಯಾರ್ಥಿಗಳಿಗಾಗಿ ಕ್ವಿಜ್, ಪಿಕ್ ಆ್ಯಂಡ್ ಸ್ಪೀಕ್ ಸೇರಿ ಇತರ ಸ್ಪರ್ಧೆ ಜರುಗಿದವು.
    ಇಸ್ರೋ ವಿಜ್ಞಾನಿ ಡಾ. ರಾಘವೇಂದ್ರ ಕುಲಕರ್ಣಿ, ಆಡಳಿತ ಮಂಡಳಿ ಸದಸ್ಯ ಬಿ.ಎಸ್. ಸಣ್ಣಗೌಡರ, ಡಾ . ಎಂ.ಈ. ಶಿವಕುಮಾರ ಹೊನ್ನಾಳಿ, ಡಾ. ಬಿ. ಮಹೇಶ್ವರಪ್ಪ, ಭಾವನಾ ಪಾಟೀಲ, ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts