More

    ಬಿ ಟೌನ್​​​​ನಲ್ಲಿ ಬಾಬಿ 1, ಬಾಬಿ 2 ಮತ್ತು OG ಬಾಬಿ ಯಾರ‍್ಯಾರು?, ಸದ್ದು ಮಾಡುತ್ತಿವೆ ‘ಅನಿಮಲ್​​​​​’ ಹೊಸ ಮೀಮ್‌ಗಳು

    ಮುಂಬೈ: ‘ಅನಿಮಲ್​​​​​’ ಬಾಕ್ಸ್ ಆಫೀಸ್‌ನಲ್ಲಿ ಹೇಗೆ ಅದ್ಭುತ ಸೃಷ್ಟಿಸಿದೆಯೋ, ಅದೇ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿಯೂ ಅದ್ಭುತಗಳನ್ನು ಮಾಡುತ್ತಿದೆ. ಚಿತ್ರ ಬಿಡುಗಡೆಯಾದಾಗಿನಿಂದ ನಿರಂತರವಾಗಿ ಹಲವು ಮೀಮ್‌ಗಳು ಸಖತ್ ವೈರಲ್​​​ ಆಗಿವೆ. ತಂದೆ-ಮಗನ ಮೀಮ್ ನಂತರ ಈಗ ಬಾಬಿ 1, ಬಾಬಿ 2 ಮತ್ತು ಒಜಿ ಬಾಬಿ ಮೀಮ್‌ಗಳು ಸದ್ದು ಮಾಡುತ್ತಿವೆ. ನೀವು ಅನಿಮಲ್​​​​ ಚಿತ್ರ ನೋಡಿದ್ದರೆ, ಈ ಮೀಮ್‌ಗಳು ಅರ್ಥವಾಗುತ್ತವೆ. ಒಂದು ವೇಳೆ ನೀವು ಚಲನಚಿತ್ರವನ್ನು ನೋಡದಿದ್ದರೂ ಚಿಂತಿಸಬೇಕಾಗಿಲ್ಲ. ಈ ಸುದ್ದಿಯಲ್ಲಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಿಸಲಿದ್ದೇವೆ. ಜತೆಗೆ ರಣಬೀರ್ ಮತ್ತು ಈ ಮೂವರು ಬಾಬಿಯರ ಬಗ್ಗೆ ಹೇಳುತ್ತೇವೆ.  

    ಬಾಬಿ 1
    ಮೊದಲಿಗೆ ಬಾಬಿ1 ಪರಿಚಯಿಸುತ್ತೇವೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈಗ ರಶ್ಮಿಕಾ ಮಂದಣ್ಣ ಬಾಬಿ 1 ಆಗಿದ್ದು ಏಕೆ ಎಂದು ಅರ್ಥಮಾಡಿಕೊಳ್ಳಲು, ನೀವು ಚಿತ್ರದಲ್ಲಿ ಅವರ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕು. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ರಣಬೀರ್ ಕಪೂರ್ ಪ್ರೀತಿಸಿ ನಂತರ ಮದುವೆಯಾಗುತ್ತಾರೆ. ಚಿತ್ರದಲ್ಲಿ ರಶ್ಮಿಕಾ ರಣಬೀರ್ ಜೀವನದಲ್ಲಿ ಬರುವ ಮೊದಲ ಹುಡುಗಿ, ಅದಕ್ಕಾಗಿಯೇ ಪ್ರೇಕ್ಷಕರು ಅವರಿಗೆ ಬಾಬಿ 1 ಎಂದು ಹೆಸರಿಟ್ಟಿದ್ದಾರೆ.

    ಬಾಬಿ 2
    ಈಗ ಬಾಬಿ 2 ಯಾರೆಂದು ಗೊತ್ತಾಗಿರಬೇಕು, ತೃಪ್ತಿ ದಿಮ್ರಿ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಈ ಚಿತ್ರದಿಂದ ಅವರಿಗೆ ಬೇರೆಯದ್ದೇ ಐಡೆಂಟಿಟಿ ಸಿಕ್ಕಿತು. ಅಂದಹಾಗೆ ಅವರಿಗೆ ಬಾಬಿ 2 ಎಂಬ ಟ್ಯಾಗ್ ಅನ್ನು ನೀಡಲಾಗಿದೆ. ಚಿತ್ರದಲ್ಲಿ ತೃಪ್ತಿ ದಿಮ್ರಿ ರಶ್ಮಿಕಾ ಮಂದಣ್ಣ ನಂತರ, ರಣಬೀರ್ ಜೀವನದಲ್ಲಿ ಎರಡನೇ ನಾಯಕಿಯಾಗಿ ಪ್ರವೇಶಿಸುತ್ತಾರೆ. ಅವನು ಅವಳನ್ನು ಪ್ರೀತಿಸುತ್ತಾನೆ. ಇಬ್ಬರ ನಡುವೆ ರೋಮ್ಯಾಂಟಿಕ್ ಮತ್ತು ಬೋಲ್ಡ್ ದೃಶ್ಯಗಳನ್ನೂ ಚಿತ್ರೀಕರಿಸಲಾಗಿದೆ. ಜೋಯಾ ವಹಾಬ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ತೃಪ್ತಿ, ರಣಬೀರ್ ಜೀವನದಲ್ಲಿ ಎರಡನೇ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ, ಅದಕ್ಕಾಗಿಯೇ ಅವರಿಗೆ ಬಾಬಿ 2 ಎಂದು ಹೆಸರಿಸಲಾಗಿದೆ.

    OG ಬಾಬಿ
    ಈಗ ನಾವು ನಿಮಗೆ OG ಬಾಬಿ ಅಂದರೆ ಒರಿಜಿನಲ್ ಬಾಬಿ ಬಗ್ಗೆ ಪರಿಚಯಿಸುವ ಅಗತ್ಯವಿಲ್ಲ, ಇದಕ್ಕೆ ಉತ್ತರವನ್ನೂ ನೀವೇ ತಿಳಿದಿರಬೇಕು. ಹೌದು, ಆಲಿಯಾ ಭಟ್. ಅವರು ನಿಜ ಜೀವನದಲ್ಲಿ ರಣಬೀರ್ ಕಪೂರ್ ಅವರ ಪ್ರೀತಿಯ ಹೆಂಡತಿ. ಅಭಿಮಾನಿಗಳು ಅವರಿಗೆ ಒಜಿ ಬಾಬಿ ಎಂದು ಹೆಸರಿಟ್ಟಿದ್ದಾರೆ. ಇದೀಗ ಹಲವು ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಇದರಲ್ಲಿ ಮೂವರನ್ನೂ ಹೋಲಿಕೆ ಮಾಡಲಾಗುತ್ತಿದೆ. ಇಷ್ಟೇ ಅಲ್ಲ, ತನ್ನ ಅನುಭವವನ್ನು ಹಂಚಿಕೊಂಡ ತೃಪ್ತಿ ದಿಮ್ರಿ, ಜನರು ತನ್ನನ್ನು ಎಲ್ಲೆಡೆ ಬಾಬಿ 2 ಎಂದು ಕರೆಯುತ್ತಿದ್ದಾರೆಂದು ಹೇಳಿದ್ದರು.

    ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಲನಚಿತ್ರವು ಉದ್ಯಮಿ ಬಲ್ಬೀರ್ ಸಿಂಗ್ (ಅನಿಲ್) ಮತ್ತು ಅವನ ಮಗ ಅರ್ಜುನ್ ಸಿಂಗ್ (ರಣಬೀರ್) ನಡುವಿನ ಸಂಬಂಧದ ಸುತ್ತ ಸುತ್ತುತ್ತದೆ. ಚಿತ್ರವು ಹಿಂಸೆ, ಪ್ರಣಯ ಮತ್ತು ಧೈರ್ಯದಿಂದ ತುಂಬಿದೆ.

    ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಹೊರತುಪಡಿಸಿ ಅನಿಲ್ ಕಪೂರ್, ಬಾಬಿ ಡಿಯೋಲ್, ಶಕ್ತಿ ಕಪೂರ್, ಸುರೇಶ್ ಒಬೆರಾಯ್, ಪ್ರೇಮ್ ಚೋಪ್ರಾ ಮತ್ತು ತೃಪ್ತಿ ದಿಮ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ‘ಕಬೀರ್ ಸಿಂಗ್’ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಇವರು ‘ಅರ್ಜುನ್ ರೆಡ್ಡಿ’ ನಿರ್ದೇಶನಕ್ಕೆ ಹೆಸರುವಾಸಿ. ‘ಅನಿಮಲ್’ ಅನ್ನು ಭೂಷಣ್ ಕುಮಾರ್ ಮತ್ತು ಕೃಷ್ಣ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಿದೆ. ಇದು ಡಿಸೆಂಬರ್ 1 ರಂದು ಬಿಡುಗಡೆಯಾದಾಗಿನಿಂದ ಹೊಸ ಅಲೆ ಸೃಷ್ಟಿಸುತ್ತಿದೆ. ಚಿತ್ರ ಥಿಯೇಟರ್‌ಗಳಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ.

    ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯ; ಹೆಪ್ಪುಗಟ್ಟಿದ ಜಲಪಾತ, ನದಿಗಳು…ಫೋಟೋಗಳಲ್ಲಿ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts