More

    ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯ; ಹೆಪ್ಪುಗಟ್ಟಿದ ಜಲಪಾತ, ನದಿಗಳು…ಫೋಟೋಗಳಲ್ಲಿ ನೋಡಿ

    ಉತ್ತರಾಖಂಡ: ಎಡೆಬಿಡದ ಹಿಮಪಾತದಿಂದಾಗಿ ಉತ್ತರಾಖಂಡದಲ್ಲಿ ಚಳಿ ನಿರಂತರವಾಗಿ ಹೆಚ್ಚುತ್ತಿದೆ. ಈಗ ನದಿಗಳು ಮತ್ತು ಜಲಪಾತಗಳು ಸಹ ಹೆಪ್ಪುಗಟ್ಟಲು ಪ್ರಾರಂಭಿಸಿವೆ. ಗುಡ್ಡಗಾಡು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನ ತೀವ್ರವಾಗಿ ಕುಸಿಯುತ್ತಿದೆ. ಈ ಕಾರಣದಿಂದಾಗಿ, ಶಿಖರಗಳಲ್ಲಿ ಹಿಮಪಾತವಾಗುತ್ತಿದ್ದರೆ, ಹಳ್ಳ ಕೊಳ್ಳಗಳು ಸೇರಿದಂತೆ ಜಲಪಾತಗಳು ಸಹ ಹಲವೆಡೆ ಹೆಪ್ಪುಗಟ್ಟಲು ಪ್ರಾರಂಭಿಸಿವೆ. ಗುರುವಾರ ಚಮೋಲಿ ಜಿಲ್ಲೆಯ ನೀತಿ ಗ್ರಾಮದ ಕಾಳಿ ದೇವಸ್ಥಾನದ ಬಳಿಯ ಚಿಲುಮೆಯ ನೀರು ಕೂಡ ಹೆಪ್ಪುಗಟ್ಟಿದೆ.  

    ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯ; ಹೆಪ್ಪುಗಟ್ಟಿದ ಜಲಪಾತ, ನದಿಗಳು...ಫೋಟೋಗಳಲ್ಲಿ ನೋಡಿ

    ಚಮೋಲಿಯಿಂದ ಔಲಿಯವರೆಗೆ ನಿರಂತರ ಹಿಮಪಾತದಿಂದಾಗಿ ಉತ್ತರಾಖಂಡದ ಕಣಿವೆಗಳು ಒಂದೆಡೆ ಸುಂದರವಾಗಿ ಕಾಣುತ್ತಿವೆ. ಔಲಿಯಲ್ಲಿ ನಿರಂತರ ಹಿಮಪಾತದಿಂದಾಗಿ, ಜಾರು ರಸ್ತೆಗಳು ಹೆಚ್ಚಾಗಿದೆ. ಬಿರ್​​​​ಒ ನೌಕರರು ಕೂಡ ಹಿಮ ತೆಗೆಯುವ ಕೆಲಸ ಆರಂಭಿಸಿದ್ದಾರೆ. 

    ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯ; ಹೆಪ್ಪುಗಟ್ಟಿದ ಜಲಪಾತ, ನದಿಗಳು...ಫೋಟೋಗಳಲ್ಲಿ ನೋಡಿ

    ಶುಷ್ಕ ಹವಾಮಾನ 
    ಹವಾಮಾನ ಇಲಾಖೆ ಪ್ರಕಾರ, ಮುಂದಿನ ಕೆಲವು ದಿನಗಳವರೆಗೆ ಡೂನ್ ಸೇರಿದಂತೆ ಹೆಚ್ಚಿನ ಪ್ರದೇಶಗಳಲ್ಲಿ ಶುಷ್ಕ ಹವಾಮಾನವಿರುವ ಸಾಧ್ಯತೆಯಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಹಿಮ ಮತ್ತು ಬಯಲು ಪ್ರದೇಶದಲ್ಲಿ ಸಾಧಾರಣ ಮಂಜಿನಿಂದಾಗಿ ತೊಂದರೆ ಹೆಚ್ಚಾಗಬಹುದು. ಉತ್ತರಾಖಂಡದಲ್ಲಿ ಬಹಳ ದಿನಗಳಿಂದ ಶುಷ್ಕ ವಾತಾವರಣವಿತ್ತು. ಬಯಲು ಸೀಮೆಯಲ್ಲಿ ಪ್ರಖರವಾದ ಬಿಸಿಲು ಬೀಳುತ್ತಿದೆ. ಆದರೂ, ಶಿಖರಗಳಲ್ಲಿ ಲಘು ಹಿಮಪಾತವು ಮುಂದುವರಿಯುತ್ತದೆ. ತಾಪಮಾನವೂ ವೇಗವಾಗಿ ಕುಸಿಯುತ್ತಿದೆ.  

    ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯ; ಹೆಪ್ಪುಗಟ್ಟಿದ ಜಲಪಾತ, ನದಿಗಳು...ಫೋಟೋಗಳಲ್ಲಿ ನೋಡಿ

    ಬೆಳಗ್ಗೆ ಮತ್ತು ಸಂಜೆ ತೀವ್ರ ಚಳಿಯ ಎಚ್ಚರಿಕೆ
    ಇಲ್ಲಿನ ಹೆಚ್ಚಿನ ನಗರಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುತ್ತದೆ. ಹವಾಮಾನ ಕೇಂದ್ರದ ನಿರ್ದೇಶಕ ಬಿಕ್ರಮ್ ಸಿಂಗ್ ಪ್ರಕಾರ, ಮುಂದಿನ ಕೆಲವು ದಿನಗಳವರೆಗೆ ರಾಜ್ಯದಲ್ಲಿ ಶುಷ್ಕ ಹವಾಮಾನದ ನಿರೀಕ್ಷೆಯಿದೆ. ಸಾಧಾರಣದಿಂದ ದಟ್ಟವಾದ ಮಂಜಿನಿಂದಾಗಿ ಬಯಲು ಸೀಮೆಯಲ್ಲಿ ವಿಶೇಷವಾಗಿ ಉಧಮ್ ಸಿಂಗ್ ನಗರ ಮತ್ತು ಹರಿದ್ವಾರದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ಗುಡ್ಡಗಾಡು ಪ್ರದೇಶಗಳಲ್ಲಿ ಹಿಮಪಾತವಾಗುವ ಸಾಧ್ಯತೆ ಇದೆ. ಮಲೆನಾಡಿನಿಂದ ಬಯಲು ಸೀಮೆಯವರೆಗೆ ಬೆಳಗ್ಗೆ ಮತ್ತು ಸಂಜೆ ತೀವ್ರ ಚಳಿಯ ಎಚ್ಚರಿಕೆ ಇದೆ. 

    ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯ; ಹೆಪ್ಪುಗಟ್ಟಿದ ಜಲಪಾತ, ನದಿಗಳು...ಫೋಟೋಗಳಲ್ಲಿ ನೋಡಿ

    ಕಾಡಾನೆ ದಾಳಿಯಿಂದ ಕುಟುಂಬವನ್ನು ರಕ್ಷಣೆ ಮಾಡಿದ ಚಿಪ್ಸ್​ ಮತ್ತು ಸ್ಯಾಂಡ್​ವಿಚ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts