ಮುಂಬೈ:’ಪ್ರೇಮ್ ಕಹಾನಿ’ ಎನ್ನುವುದು ಚಿತ್ರರಂಗದ ಫೇವರೇಟ್ ಶೀರ್ಷಿಕೆ ಎಂದರೆ ತಪ್ಪಿಲ್ಲ. ಹಿಂದಿಯಲ್ಲಿ ಈಗಾಗಲೇ ಎರಡು ಬಾರಿ ಅದೇ ಹೆಸರಿನ ಚಿತ್ರಗಳು ಬಂದಿರುವುದರ ಜತೆಗೆ ಕನ್ನಡದಲ್ಲೂ ಅಜಯ್ ರಾವ್ ಅಭಿನಯದಲ್ಲಿ ‘ಪ್ರೇಮ್ ಕಹಾನಿ’ ಎಂಬ ಚಿತ್ರವೊಂದು ಬಂದಿತ್ತು. ಈಗ್ಯಾಕೆ ಈ ವಿಷಯವೆಂದರೆ, ಬಾಲಿವುಡ್ನಲ್ಲಿ ಅದೇ ಹೆಸರಿನ ಇನ್ನೊಂದು ಚಿತ್ರ ಸೆಟ್ಟೇರುತ್ತಿದೆ.
ಇದನ್ನೂ ಓದಿ: ಇನ್ನೊಂದು 250 ಕೋಟಿ ರೂ. ಚಿತ್ರದಲ್ಲಿ ಪ್ರಭಾಸ್!
ಹೌದು, ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದಲ್ಲಿ ಕರಣ್ ಜೋಹರ್ ಹೊಸ ಚಿತ್ರವೊಂದನ್ನು ನಿರ್ದೇಶಿಸುವುದಕ್ಕೆ ಹೊರಟಿದ್ದು, ಆ ಚಿತ್ರಕ್ಕೆ ಇದೀಗ ‘ಪ್ರೇಮ್ ಕಹಾನಿ’ ಎಂಬ ಹೆಸರನ್ನು ಇಡಲಾಗಿದೆ. ಈಗಾಗಲೇ ಲಾಕ್ಡೌನ್ ಸಮಯದಲ್ಲಿ ಕರಣ್, ಚಿತ್ರದ ಸ್ಕ್ರಿಪ್ಟ್ ಕೆಲಸಗಳನ್ನು ಮುಗಿಸಿದ್ದಾರಂತೆ. ಇನ್ನು, ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಮೊದಲಿಗೆ ಚಿತ್ರತಂಡದವರಿಗೆ ಲಸಿಕೆ ಹಾಕಿಸಿ, ತಕ್ಷಣವೇ ಅವರು ಚಿತ್ರೀಕರಣ ಪ್ರಾರಂಭಿಸಲಿದ್ದಾರೆ ಎಂಬ ಸುದ್ದಿ ಬಾಲಿವುಡ್ನಲ್ಲಿದೆ.
ಕರಣ್ ಚಿತ್ರವೊಂದನ್ನು ನಿರ್ದೇಶಿಸಿ ನಾಲ್ಕು ವರ್ಷಗಳೇ ಆಗಿದ್ದವು. ‘ಏ ದಿಲ್ ಹೇ ಮುಷ್ಕಿಲ್’ ಎಂಬ ಚಿತ್ರವನ್ನು ನಿರ್ದೇಶಿಸಿದ ನಂತರ, ಅವರು ನಿರ್ದೇಶನಕ್ಕಿಂತ ನಿರ್ಮಾಣದಲ್ಲೇ ಹೆಚ್ಚು ತೊಡಗಿಸಿಕೊಂಡಿದ್ದರು. ಆಗಾಗ ನಿರ್ದೇಶನಕ್ಕೆ ವಾಪಸ್ಸಾಗುವ ಬಗ್ಗೆ ಹೇಳುತ್ತಲೇ ಇದ್ದ ಅವರು, ಇದೀಗ ‘ಪ್ರೇಮ್ ಕಹಾನಿ’ ಮೂಲಕ ನಿರ್ದೇಶನಕ್ಕೆ ವಾಪಸ್ಸಾಗಿದ್ದಾರೆ ಎನ್ನುವುದು ವಿಶೇಷ.
ಇದನ್ನೂ ಓದಿ: ಹಿರಿಯ ಪೋಷಕ ನಟಿ ಬಿ.ಜಯಾ ಇನ್ನಿಲ್ಲ! ಕಣ್ಣೀರ ಕಡಲಲ್ಲಿ ಚಿತ್ರರಂಗ
ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಇದಕ್ಕೂ ಮುನ್ನ ‘ಗಲ್ಲಿ ಬಾಯ್’ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದರು. ಆ ನಂತರ ಅವರು ಕರಣ್ ಜೋಹರ್ ನಿರ್ಮಾಣದ ‘ತಖ್ತ್’ ಚಿತ್ರದಲ್ಲಿ ನಟಿಸುವುದಾಗಿ ಸುದ್ದಿಯಾಗಿತ್ತು. ಚಿತ್ರ ಪ್ರಾರಂಭವಾದರೂ, ಬಜೆಟ್ ಹೆಚ್ಚಾಯಿತು ಎಂಬ ಕಾರಣಕ್ಕೆ ಆ ಚಿತ್ರವನ್ನು ನಿಲ್ಲಿಸಿ, ‘ಪ್ರೇಮ್ ಕಹಾನಿ’ ಶುರು ಮಾಡಲಾಗುತ್ತಿದೆ.
ಕಳೆದ ಲಾಕ್ಡೌನ್ನಲ್ಲೇ ನನ್ನ ಮದುವೆ ಆಯ್ತು: ‘ಗಂಡ-ಹೆಂಡ್ತಿ’ ಗುಟ್ಟು ಬಿಚ್ಚಿಟ್ಟ ಸಂಜನಾ ಗಲ್ರಾನಿ