More

    ವಿವಾದದ ಕಿಡಿ ಹೊತ್ತಿಸಿದ ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಮಾತು…

    ಬೆಳಗಾವಿ: ವಿಧಾನಸಭೆಯ ಮಾಜಿ ಅಧ್ಯಕ್ಷ ರಮೇಶ್‌ ಕುಮಾರ್ ಅವರು ಸದನದಲ್ಲಿ ಆಡಿದ ಮಾತೊಂದು ತೀವ್ರ ವಿವಾದದ ರೂಪ ಪಡೆದುಕೊಂಡಿದೆ.
    ಗುರುವಾರ ವಿಧಾನಸಭೆಯಲ್ಲಿ ಅತಿವೃಷ್ಟಿ, ಪ್ರವಾಹದ ಹಾನಿ ಕುರಿತು ಚರ್ಚೆ ನಡೆಯುತ್ತಿದ್ದಾಗ ಹಲವಾರು ಶಾಸಕರು ತಾವೂ ಈ ವಿಷಯದ ಬಗ್ಗೆ ಮಾತನಾಡುವ ಇಚ್ಛೆ ವ್ಯಕ್ತಪಡಿಸಿದರು. ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ‘‘ಈಗಾಗಲೇ 25 ಶಾಸಕರು ಮಾತನಾಡಿದ್ದಾರೆ. ನಾಲ್ಕು ದಿನಗಳಿಂದ ಈ ಚರ್ಚೆ ನಡೆಯುತ್ತಿದೆ. ಇನ್ನೂ ಸರ್ಕಾರ ಉತ್ತರ ಕೊಡುವುದು ಬೇರೆ ಬಾಕಿ ಇದೆ. ಇಷ್ಟು ಸುದೀರ್ಘವಾಗಿ ಎಲ್ಲರೂ ಮಾತನಾಡುತ್ತಿದ್ದರೆ ಸದನದ ಕಾರ್ಯ ಕಲಾಪಗಳನ್ನು ನಡೆಸುವುದು ಹೇಗೆ’’ ಎಂದು ನಗುತ್ತಲೇ ಅಸಮಾಧಾನ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಅತ್ಯಾಚಾರದ ವಿಷಯ ಚರ್ಚಿಸುತ್ತಿದ್ದಾಗಲೇ ಜಾರಿತು ಸಿದ್ದರಾಮಯ್ಯ ಪಂಚೆ!; ಹತ್ತಿರ ಬಂದು ‘ಪಂಚೆ ಕಳಚಿದೆ ನೋಡಿ’ ಎಂದ ಡಿಕೆಶಿ…

    ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ನ ರಮೇಶ್‌ಕುಮಾರ್, ‘‘ದೇರ್ ಈಸ್ ಎ ಸೇಯಿಂಗ್ ಇನ್ ಇಂಗ್ಲಿಷ್… ವ್ಹೆನ್ ರೇಪ್ ಈಸ್ ಇನ್ನೆವಿಟಬಲ್ ಲೆಟ್ಸ್ ಲೇ ಡೌನ್ ಆ್ಯಂಡ್ ಎಂಜಾಯ್ ಇಟ್. ದಾಟ್ಸ್ ದಿ ಪೊಸಿಷನ್ ಹಿಯರ್ ನೌ…’’ (ಹೀಗೊಂದು ಮಾತಿದೆ, ಅತ್ಯಾಚಾರ ಅನಿವಾರ್ಯವಾಗಿದ್ದರೆ, ಸುಮ್ಮನೆ ಮಲಗಿ ಅದನ್ನು ಆಸ್ವಾದಿಸಿ. ಅಂತಹ ಸ್ಥಿತಿ ಈಗ ಇಲ್ಲೂ ಇದೆ…) ಎಂದು ನಗುತ್ತಲೇ ಹೇಳಿದರು. ಇದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ನಕ್ಕು ಸುಮ್ಮನಾದರು.
    ಈ ವಿಷಯವೇ ಈಗ ವಿವಾದದ ರೂಪ ಪಡೆದುಕೊಂಡಿದೆ. ಮಾಜಿ ಸ್ಪೀಕರ್ ಒಬ್ಬರು ಈ ರೀತಿ ಸದನದಲ್ಲಿ ಮಾತನಾಡಬಹುದೇ? ಅದನ್ನು ಕೇಳಿಸಿಕೊಂಡೂ ಈಗಿನ ಸ್ಪೀಕರ್ ಅದನ್ನು ತಡೆಯದೇ ಸುಮ್ಮನೆ ಇದ್ದುದೇಕೆ ಎಂಬ ವಾದ ಈಗ ಕೇಳಿಬರುತ್ತಿದೆ.

    ಇದನ್ನೂ ಓದಿ: ಸದನದಲ್ಲಿ ಸ್ಪೀಕರ್ ರಮೇಶ್​ಕುಮಾರ್ ರೇಪ್ ಉದಾಹರಣೆಗೆ ತಾರಾ ತೀವ್ರ ಖಂಡನೆ

    ರಮೇಶ್​ ಕುಮಾರ್​ ಅವರು 2019ರಲ್ಲಿ ತಾವು ಸ್ಪೀಕರ್ ಆಗಿದ್ದಾಗಲೂ ಹೀಗೇ ಸದನಲ್ಲಿ ರೇಪ್​ ವಿಷಯ ಮಾತನಾಡಿ, ವಿವಾದಕ್ಕೀಡಾಗಿದ್ದರು. ಅದಾಗ್ಯೂ ಮತ್ತೊಮ್ಮೆ ಸದನದಲ್ಲಿ ಆ ವಿಚಾರವಾಗಿ ಮಾತನಾಡಿ, ಮತ್ತೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

    ಎರಡು ವರ್ಷದ ಮಗನನ್ನು ಬಕೆಟ್​ ನೀರಿನಲ್ಲಿ ಮುಳುಗಿಸಿ ಕೊಂದು, ನೇಣು ಹಾಕಿಕೊಂಡ ತಾಯಿ!

    ಸುದ್ದಿಯ ಶೀರ್ಷಿಕೆ ತಿರುಚಿದ ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts