More

    ಹೆಬ್ಬಾಳ್ಕರ್ ಕೊಟ್ಟ ಕುಕ್ಕರ್ ಇನ್ನೂ ಚೆನ್ನಾಗಿದೆಯಾ?: ರಮೇಶ್​ ಜಾರಕಿಹೊಳಿ ಟಾಂಗ್​

    ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮತ್ತೆ ಸೇಡಿನ ರಾಜಕೀಯದ ಶುರುವಾಗಿದ್ದು, ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಚಿವ ರಮೇಶ್​ ಜಾರಕಿಹೊಳಿ ರಣತಂತ್ರ ಹೆಣೆದಿದ್ದಾರೆ.

    ಲಕ್ಷ್ಮೀ ಹೆಬ್ಬಾಳ್ಕರ್​ ಶಾಸಕಗಿರಿಗೆ ಬ್ರೇಕ್​ ಹಾಕಲು ಮೊದಲ ಹಂತವಾಗಿ ಬೆಳಗಾವಿ ಗ್ರಾಮೀಣ ಬಿಜೆಪಿ ಘಟಕ ಕಚೇರಿಯನ್ನು ರಮೇಶ್​ ಜಾರಕಿಹೊಳಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಗ್ರಾಮೀಣ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಕೊಟ್ಟ ಕುಕ್ಕರ್ ಇನ್ನೂ ಚೆನ್ನಾಗಿದೆಯಾ? ಎಂದು ವ್ಯಂಗ್ಯವಾಡಿದರು.

    ಇದನ್ನೂ ಓದಿ: ಮಾಲಿವುಡ್​ಗೂ ಅಂಟಿದ ಕಳ್ಳಸಾಗಾಣೆ ನಂಟು: ನಟಿ ಶಾಮ್ನಾ ಪ್ರಕರಣದಲ್ಲೂ ಕೇಳಿಬಂತು ಚಿನ್ನದ ರಾಣಿ ಹೆಸರು!

    ಕಳೆದ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ನಾನು ಪ್ರಯತ್ನ ಮಾಡಿದ್ದೆ. ನನ್ನಿಂದ ಮಾಜಿ ಬಿಜೆಪಿಯ ಶಾಸಕ ಸಂಜಯ ಪಾಟೀಲ್​ಗೆ ಅನ್ಯಾಯ ಆಗಿದೆ. ಬಿಜೆಪಿ ಕಾರ್ಯಕರ್ತರು ಸ್ವಂತ ಹಣದಿಂದ ಕಾರ್ಯಾಲಯ ಮಾಡಿದ್ದಾರೆ. ಗ್ರಾಮೀಣ ಕ್ಷೇತ್ರದಲ್ಲಿ 2023ರಲ್ಲಿ ಇತಿಹಾಸ ಸೃಷ್ಟಿ ಮಾಡಬೇಕಿದೆ ಎಂದರು.

    ಇದು ರಮೇಶ ಜಾರಕಿಹೊಳಿ ಹಾಗೂ ಸುರೇಶ ಅಂಗಡಿಯಿಂದ ಸಾಧ್ಯವಿಲ್ಲ. ಕಾರ್ಯಕರ್ತರು ಇದಕ್ಕಾಗಿ ಇತಿಹಾಸ ಸೃಷ್ಟಿಸಲು ಸಿದ್ಧರಾಗಬೇಕು. ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡೋ ಶಕ್ತಿ ಕಾರ್ಯಕರ್ತರಿಗೆ ಇದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

    ಗ್ರಾಮೀಣ ಭಾಗದ ಶಾಸಕರಿಗೆ ಹಣದ ಅಹಂಕಾರ ಇದೆ. ಕಳೆದ ಚುನಾವಣೆಯಲ್ಲಿ ಕೊಟ್ಟ ಕುಕ್ಕರ್ ಇನ್ನೂ ಚೆನ್ನಾಗಿದೆಯಾ? ಕುಕ್ಕರ್ ಕೊಟ್ಟಿದ್ದು ನನ್ನ ದುಡ್ಡಿನಿಂದ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಆಗಿದೆ. ಈ ಕ್ಷೇತ್ರದದಲ್ಲಿ ಈ ಬಾರಿ ಗೆಲ್ಲುಲು ಎಲ್ಲಾ ರೀತಿಯ ಸಹಾಯ ಮಾಡಲು ನಾನು ಸಿದ್ಧ. ಯಾವುದೇ ಆಮಿಷಕ್ಕೆ ಬಲಿಯಾಗಬೇಡಿ. 2023ರಲ್ಲಿ ಗ್ರಾಮೀಣದಲ್ಲಿ ಬಿಜೆಪಿ ಧ್ವಜ ಹಾರಿಸಲೇಬೇಕು ಎಂದು ಕರೆ ನೀಡಿದರು.

    ಇದನ್ನು ಓದಿ: ಸಮ್ಮತಿಸಿದರೆ ಸಾಲದು… ಮಹಿಳೆ ಇಷ್ಟಪಟ್ಟು ಮಿಲನಕ್ಕೆ ಸಹಕರಿಸದಿದ್ದರೆ ರೇಪ್ ಆಗುತ್ತೆ!

    ಡಿಸಿಸಿ ಬ್ಯಾಂಕ್, ಜಿಪಂ ಸೇರಿ ಚುನಾವಣೆಯಲ್ಲಿ ಗೆಲ್ಲಬೇಕು. ಕಾಂಗ್ರೆಸ್​‌ನವರು ದುಡ್ಡು ಎಷ್ಟೇ ಕೊಟ್ಟರೂ, ಅದಕ್ಕಿಂತ ಹೆಚ್ಚು ನಾನು ಕೊಡುತ್ತೇನೆ. ನಮ್ಮದು ಬೆವರು ಸುರಿಸಿ ದುಡಿದ ದುಡ್ಡು. ಅವರ ಹಾಗೇ ಅಕ್ರಮ ಮಾರ್ಗದಿಂದ ಬಂದ ದುಡ್ಡಲ್ಲ. ಇದು ಅಹಂಕಾರದ ಮಾತಲ್ಲ, ಸಾಲ ಮಾಡಿಯಾದ್ರು ಕೊಡುತ್ತೇನೆಂದು ರಮೇಶ್​ ಜಾರಕಿಹೊಳಿ ಹೇಳಿದರು. (ದಿಗ್ವಿಜಯ ನ್ಯೂಸ್​)

    ಮಾಸ್ಕ್‌ ಧರಿಸದೇ ಕಾರ್ಯಕ್ರಮದಲ್ಲಿ ಸುಮಲತಾ ಭಾಗಿ: ಎಲ್ಲರಲ್ಲೂ ಆತಂಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts