More

    ಸಿಡಿ ನಕಲಿಯೇ ಆದರೂ ಮಾಡಿದ್ಯಾರಂತ ಗೊತ್ತಾಗಬೇಕಲ್ಲ: ಡಿಕೆಶಿಗೆ ಸಚಿವ ಬೊಮ್ಮಾಯಿ ಪಂಚ್

    ಬೆಂಗಳೂರು: ಬಯಲಾದ ಅಶ್ಲೀಲ ಸಿಡಿ ನಕಲಿಯೇ ಎಂದಾದರೂ ಮಾಡಿದ್ಯಾರಂತ ಗೊತ್ತಾಗಬೇಕಲ್ಲ. ಏನಿದೆ ಮಸಲತ್ತು ತಿಳಿಯಬೇಕಲ್ಲ. ಅದಕ್ಕಾಗಿಯೇ ಎಸ್ ಐಟಿ ರಚಿಸಿದ್ದೇವೆ.

    ನಕಲಿ ಸಿಡಿ ಎಂದ ಮೇಲೆ ತನಿಖೆಯ ಔಚಿತ್ಯವೇನು? ಎಂದು ಪ್ರಶ್ನಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಗೃಹ ಸಚಿವ ನೀಡಿದ ಪಂಚ್ ಇದು.

    ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಯಾಂಟ್ ಬಿಚ್ಚಿದವರು ಯಾರು ? ಬಿಚ್ಚಿದವರೇ ಪ್ಯಾಂಟ್ ಹಾಕಿಕೊಳ್ಳಬೇಕು ಎನ್ನುವುದು ಸೇರಿ ಎಲ್ಲ ಆಯಾಮಗಳಲ್ಲಿ ತನಿಖೆಯಾಗಲಿದೆ. ವರದಿ ಬಂದಾದ ಮೇಲೆ ಪ್ಯಾಂಟ್ ಬಗ್ಗೆಯೂ ಗೊತ್ತಾಗುತ್ತದೆ ಎಂದು ಕುಟುಕಿದರು.

    ಇದನ್ನೂ ಓದಿರಿ: Roberrt Twitter Review: ದರ್ಶನ್​ ಅಭಿನಯದ ರಾಬರ್ಟ್​ ಚಿತ್ರದ ಟ್ವಿಟರ್​ ವಿಮರ್ಶೆ ಹೀಗಿದೆ…

    ಅಗತ್ಯಬಿದ್ದರೆ ಎಫ್ಐಆರ್
    ಎಫ್ ಐಆರ್ ದಾಖಲಿಸದೆ ತನಿಖೆ ಹೇಗೆ ಸಾಧ್ಯ ?ವೆಂಬ ಪ್ರಶ್ನೆಗೆ ಬೊಮ್ಮಾಯಿ ಉತ್ತರಿಸಿ, ಪ್ರಾಥಮಿಕ ಹಂತದ ತನಿಖೆ ನಡೆಯುತ್ತದೆ. ಇದಾದ ಬಳಿಕ ಲಭ್ಯ ಮಾಹಿತಿ, ಪುರಾವೆ ಆಧರಿಸಿ ಎಸ್ ಐಟಿ ಯೇ ಎಫ್ ಐಆರ್ ದಾಖಲಿಸಿಕೊಂಡು ಮತ್ತೊಂದು ಹಂತದ ತನಿಖೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.

    ತನಿಖೆಯ ಜವಾಬ್ದಾರಿ ಹೊತ್ತ ಎಸ್ ಐಟಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಕಾಲಮಿತಿ ನಿಗದಿಪಡಿಸಿಲ್ಲ. ಆದರೆ ಸಾಧ್ಯವಾದಷ್ಟು ಶೀಘ್ರ ವರದಿ ಸಲ್ಲಿಸಲು ಸರ್ಕಾರ ತಿಳಿಸಿದೆ ಎಂದರು.

    ರಮೇಶ್ ಜಾರಕಿಹೊಳಿ ಪ್ರತ್ಯೇಕವಾಗಿ ದೂರು ಸಲ್ಲಿಸುವುದು ಗೊತ್ತಿಲ್ಲ. ಅವರ ಮನವಿ ಮೇರೆಗೆ ಪ್ರಕರಣದ ತನಿಖೆ ನಡೆಸಲು ಎಸ್ ಐಟಿ ರಚಿಸಲಾಗಿದೆ ಎಂದು ಬೊಮ್ಮಾಯಿ ಪ್ರತಿಕ್ರಿಯಿಸಿದರು.

    ಮಹಿಳೆ ಮನೆಯಲ್ಲಿ ಹಲ್ಲಿ ಓಡಿಸಲು ಹೋದ ಇನ್ಸ್​ಪೆಕ್ಟರ್​ ದುರಂತ ಸಾವು: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ!

    ಮಮತಾ ಬ್ಯಾನರ್ಜಿಗೆ ಏಟು ಬಿದ್ದಿದ್ದು ಹೇಗೆ ? ಘಟನೆ ಒಂದು, ಕಥೆಗಳು ಹಲವು !

    ಗುಜರಾತ್​​ ಬಳಿಕ ಭಾರತದಲ್ಲಿ 2ನೇ ಬಾರಿಗೆ ಪತ್ತೆಯಾಯ್ತು ನಿಗೂಢ ಏಕಶಿಲೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts