More

    ಸಿಡಿ ಕೇಸ್​ನ ಯುವತಿ ನನ್ನ ಮನೆಗೆ ಬಂದದ್ದು ನಿಜ, ನ್ಯಾಯ ಕೊಡಿಸುವ ಮುನ್ನವೇ ಆಗಬಾರದ್ದು ಆಯ್ತು: ನರೇಶ್​ಗೌಡ

    ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಕಿಂಗ್​ಪಿನ್​ ಎನ್ನಲಾದ ನರೇಶ್​ಗೌಡ ವಿಡಿಯೋ ಬಿಡುಗಡೆ ಮಾಡಿದ್ದು, ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ.

    ‘ನಮಸ್ಕಾರ, ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸೆಕ್ಸ್​ ಪ್ರಕರಣದಲ್ಲಿ ನನ್ನ ಹೆಸರು ತಳಕುಹಾಕಿಕೊಂಡರುವ ವಷ್ಯಕೇಳಿ ನಗಬೇಕೋ ಅಥವಾ ಅಳಬೇಕೋ ಗೊತ್ತಾಗ್ತಿಲ್ಲ. ನಾನು ಏಕೆ ಇನ್ನೂ ತನಿಖಾಧಿಕಾರಿ ಮುಂದೆ ಬರ್ರ್ತಿಲ್ಲ ಅಂದ್ರೆ ಅಲ್ಲಿಗೆ ಬಂದ್ರೆ ಏನಾಗುತ್ತೆ ಅನ್ನೋ ಕ್ಲಾರಿಟಿ ನನಗಿದೆ. ಹಾಗಾಗಿ ನಾನು ಬಂದಿಲ್ಲ. ಸಿಡಿಇ ಕೇಸ್​ನ ಯುವತಿ ಯ ಪರಿಚಯ ನನಗಿದೆ. ನಾನು ಪತ್ರಕರ್ತ ಆಗಿರೋದ್ರಿಂದ ಜಾರಕಿಹೊಳಿಯಿಂದ ನನಗೆ ಅನ್ಯಾಯ ಆಗಿದೆ, ನ್ಯಾಯ ಕೊಡ್ಸಿ ಎಂದು ಕೇಳಿಕೊಂಡಿದ್ದಳು. ಆಯ್ತು ಎಂದಿದೆ. ಆ ವೇಳೆ ನನ್ನ ತಾಯಿಗೆ ಅನಾರೋಗ್ಯ ಇದ್ದ ಕಾರಣ ನಾನು ಸ್ವಲ್ಪ ಬಿಜಿ ಇದ್ದೆ. ನಾನು ಆಕೆಗೆ ನ್ಯಾಯ ಕೊಡಿಸಲೆಂದು ಯತ್ನಿಸಿದೆ. ಈ ಸಿಡಿ ರಿಲೀಸ್​ ಆಗಿರೋದ್ರಲ್ಲಿ ನನ್ನ ಪಾತ್ರ ಇಲ್ಲ. 5 ಕೋಟಿ, 100 ಕೋಟಿ ಅಂತಿದ್ದಾರೆ. ಮೂರು ವರ್ಷದ ಹಿಂದೆ ನಾನು ತಗೊಂಡಿರೋ 3 ಲಕ್ಷ ರೂ. ಸಾಲಕ್ಕೆ ಪ್ರತಿ ತಿಂಗಳು ಇಎಂಐ ಹಣ ಕಟ್ಟೋಕೂ ಆಗ್ದೆ ಎರಡು ಬಾರಿ ಚೆಕ್​ ಬೌನ್ಸ್​ ಆಗಿದೆ. ನನ್ನೂರು ತುಮಕೂರಿನ ಶಿರ ತಾಲೂಕು ಭವನಹಳ್ಳಿ ಗ್ರಾಮ. ನಾನು ಹುಟ್ಟಿದಾಗಿನಿಂದ ಅದೇ ಮನೆಯಲ್ಲೇ ಇದ್ದೇನೆ. ಆ ಮನೆ ಮಳೆ ಬಂದ್ರೆ ಸೋರುತ್ತೆ…’ ಎಂದು ನರೇಶ್​ಗೌಡ ಹೇಳಿದ್ದಾರೆ. ಇದನ್ನೂ ಓದಿರಿ ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

    ‘ವಿಡಿಯೋದಲ್ಲಿನ ಯುವತಿಯ ಪರಿಚಯ ನನಗಿದೆ. ಆದ್ರೆ ಸಿಡಿಗೂ ನನಗೂ ಯಾವುದೇ ಸಂಬಂಧವಿಲ್ಲ. ನನಗೆ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಅಂತ ಬಂದಿದ್ದಳು. ಹೀಗಾಗಿ ನನಗೆ ಹಲವು ಸಲ ಕರೆ ಮಾಡಿದ್ದಾಳೆ. ಒಮ್ಮೆ ಮಾತನಾಡುತ್ತಾ ನಾನು ನಾಮಕರಣಕ್ಕೆ ಬರಬಾರದಾ ಅಂದ್ಲು. ಆಯ್ತು ಬಾರಮ್ಮ ಎಂದಿದೆ. ಆ ನಾಮಕರಣಕ್ಕೆ ಆಕೆ ಸ್ನೇಹಿತರೊಂದಿಗೆ ಬಂದಿದ್ಲು. ಜೆಡಿಎಸ್​, ಬಿಜೆಪಿ, ಕಾಂಗ್ರೆಸ್​ ನಾಯಕರೂ ನನ್ನ ಮಗು ನಾಮಕರಣಕ್ಕೆ ಬಂದಿದ್ದರು. ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲು ವ್ಯವಸ್ಥಿತ ಹುನ್ನಾರ ನಡೆದಿದೆ. ಈ ಕೇಸ್​ನಲ್ಲಿ ಒಬ್ಬ ಹೆಣ್ಣುಮಗಳಿಗೆ ಅನ್ಯಾಯ ಆಗಿದೆ. ಆಕೆಗೆ ನ್ಯಾಯ ಕೊಡ್ಸಬೇಕು. ಆಕೆಗೆ ನ್ಯಾಯ ಕೊಡಿಸಬೇಕಿದ್ದವರೇ ಆಕೆಯನ್ನು ವೇಶ್ಯೆ ಎಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ. ಸ್ವಲ್ಪ ದಿನದಲ್ಲೇ ಪೊಲೀಸರೆದುರು ಹಾಜರಾಗುತ್ತೇನೆ’ ಎಂದು ನರೇಶ್​ ಗೌಡ ಹೇಳಿದ್ದಾರೆ. ಇದನ್ನೂ ಓದಿರಿ ಒಬ್ಬನೊಂದಿಗೇ ಅಮ್ಮ-ಮಗಳ ಅಕ್ರಮ ಸಂಬಂಧ! ಪ್ರಿಯಕರನೊಟ್ಟಿಗೆ ಆ ರಾತ್ರಿ ನಡೆಯಿತು ಘೋರ ಕೃತ್ಯ

    ‘ನಾನು ಹಣ ಪಡೆದಿರುವ ಬಗ್ಗೆ ಸಾಕ್ಷ್ಯಗಳಿದ್ರೆ ತಿಳಿಸಿ. ನಾನು ಮಾಡಿರೋ ಬ್ಯಾಂಕ್‌ ಸಾಲಕ್ಕೆ ಇಎಂಐ ಕಟ್ಟುತ್ತಿದ್ದೇನೆ. ತಿಂಗಳ ಕೊನೆಗೆ ಇಎಂಐ ಕಟ್ಟಲೂ ನನ್ನ ಬಳಿ ಹಣವಿರಲ್ಲ. ಸಿಡಿ ಇಟ್ಟುಕೊಂಡು ಹಣ ಪಡೆದೆ ಎಂಬಂತೆ ಬಿಂಬಿಸುತ್ತಿದ್ದಾರೆ. ನಾನು ಐದು ರೂಪಾಯಿ ಕೂಡ ಪಡೆದಿಲ್ಲ. ಸಾಕ್ಷಿ ಇದ್ರೆ ತೋರಿಸಿ, ನೀವು ಕೊಡೊ ಶಿಕ್ಷೆ ಅನುಭವಿಸುತ್ತೇನೆ. ನಾನು ಹಣ ಪಡೆದಿದ್ದೆ ಅನ್ನೋ ಬದಲು 100 ಕೋಟಿ ರೂ. ಹಣ ಕೊಟ್ಬಿಡಿ ನಾನೇ ಕೇಸ್‌ ಒಪ್ಪಿಕೊಳ್ಳುತ್ತೇನೆ. ಸುಮ್ನೆ ಏಕೆ ಇಲ್ದೆ ಇರೋದೆಲ್ಲ ನನ್ನ ಹೆಸರನ್ನು ಏಕೆ ತರ್ತೀರಿ. ನಾನು ಅಂದು ಬಿಜಿ ಇದ್ದೆ. ನಾನು ಅವತ್ತೇ ನಾನು ಆ ಯುವತಿಗೆ ನ್ಯಾಯ ಕೊಡಿಸಬೇಕಿತ್ತು. ಹೇಗಿದ್ದರೂ ಎವಿಡೆನ್ಸ್ ಇದೆ ಎಂದು ಇದ್ದೆ. ಅಷ್ಟರಲ್ಲಿ ಏನೇನೋ ಆಗಿದೆ. ವಿಡಿಯೋ ವೈರಲ್ ಆಗಿ ನನ್ನ ಮೊಬೈಲ್‌ಗೆ ಬಂದಾಗಲೇ ಗೊತ್ತಾಗಿದ್ದು. ನಾನು ಸದ್ಯದಲ್ಲೇ ನನ್ನ ಬಳಿ ಇರುವ ಸಾಕ್ಷಿಗಳನ್ನು ತೆಗೆದುಕೊಂಡು ತನಿಖಾಧಿಕಾರಿ ಮುಂದೆ ಹಾಜರ್​ ಆಗ್ತೀನಿ. ಆಗ ನಾನು ನಿರ್ದೋಷಿ ಎಂದು ಅವರೇ ಹೇಳ್ತಾರೆ’ ಎಂದು ನರೇಶ್​ ತಿಳಿಸಿದ್ದಾರೆ.

    ಒಬ್ಬನೊಂದಿಗೇ ಅಮ್ಮ-ಮಗಳ ಅಕ್ರಮ ಸಂಬಂಧ! ಪ್ರಿಯಕರನೊಟ್ಟಿಗೆ ಆ ರಾತ್ರಿ ನಡೆಯಿತು ಘೋರ ಕೃತ್ಯ

    ಅತ್ತ ತೋಟದಲ್ಲಿ ಪೂಜೆ ನಡೆಯುತ್ತಿತ್ತು, ಇತ್ತ ಮನೆಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ!

    ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

    ಸಿಡಿ ಕೇಸ್​: ಹೆಗಲು ಮುಟ್ಟಿ ನೋಡಿಕೊಂಡದ್ದಕ್ಕೂ ಈ ಫೋಟೋಗೂ ಸಂಬಂಧವಿದೆಯಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts