More

    ರಮೇಶ್​ ಅರವಿಂದ್​​ರ ‘100’ ಈ ತಿಂಗಳೇ ರಿಲೀಸ್​… ಚಿತ್ರದ ಬಗ್ಗೆ ಅವರು ಹೇಳಿದ್ದಿದು

    ದಾವಣಗೆರೆ: ಹಿರಿಯ ನಟ ರಮೇಶ್‌ ಅರವಿಂದ್​ ನಿರ್ದೇಶನ ಹಾಗೂ ನಟನೆಯ ಕನ್ನಡ ಚಿತ್ರ ‘100’ ಇದೇ ತಿಂಗಳ 19 ರಂದು ಬಿಡುಗಡೆ ಆಗಲಿದೆ. ಈ ಬಗ್ಗೆ ದಾವಣಗೆರೆಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ರಮೇಶ್, ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದೇನೆ. ಇದು ಫ್ಯಾಮಿಲಿ ಥ್ರಿಲ್ಲರ್‌ ಚಿತ್ರ. ಕುಟುಂಬದವರೆಲ್ಲಾ ಒಟ್ಟಾಗಿ ಕುಳಿತು ನೋಡಬಹುದಾದ ಚಲನಚಿತ್ರ ಎಂದರು.

    ತಾರಾಗಣದಲ್ಲಿ ರಚಿತಾ ರಾಮ್‌, ಪೂರ್ಣ, ವಿಶ್ವಕರ್ಣ, ಮಾಲತಿ ಸುಧೀರ್‌, ಗೌರವ್‌ ಪ್ರಕಾಶ್‌, ರಾಜು ತಾಳಿಕೋಟಿ ಮುಂತಾದವರಿದ್ದಾರೆ. ಜಾಲಿ ಬಾಸ್ಟಿನ್‌ ಸಂಗೀತ ನೀಡಿದ್ದಾರೆ. ಮೊಬೈಲ್‌ನಿಂದ ಜನರ ಜೀವನ ದುಸ್ತರವಾಗುತ್ತಿದೆ; ತಂತ್ರಜ್ಞಾನದಿಂದ ಆಗುತ್ತಿರುವ ಅವಗಡಗಳ ಬಗ್ಗೆ ತಿಳಿಸುವ ಪ್ರಯತ್ನ ಈ ಚಿತ್ರದಲ್ಲಿದೆ. ಥಿಯೇಟರ್‌ನಲ್ಲಿ ಸಿನಿಮಾ ನೋಡುವ ಮೂಲಕ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.

    ಮನೆಯಲ್ಲಿರುವ ಸದಸ್ಯರೆಲ್ಲರ ಕೈಯಲ್ಲಿ ಮೊಬೈಲ್‌ ಸೇರಿದೆ. ಎಲ್ಲರೂ ಜತೆಗಿದ್ದರೂ ಸಂಭಾಷಣೆಯ ಬದಲು ಮೊಬೈಲ್‌ಗೆ ಮೊರೆ ಹೋಗುತ್ತಿದ್ದಾರೆ. ಮನೆಗೆ ಯಾರಾದ್ರು ಬಂದ್ರೂ ಗೊತ್ತಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆನ್‌ಲೈನ್‌ಗಳಲ್ಲಿ ಭಾವನೆ ಜತೆ ಆಟವಾಡುವವರೂ ಇದ್ದಾರೆ. ಕಾಮೆಂಟ್‌ಗಳ ಮೂಲಕ ಜನರ ಭಾವನೆಗಳನ್ನು ಕದಡುವ ಪ್ರಯತ್ನ ಮಾಡ್ತಾರೆ. ಕೆಟ್ಟ ಕಾಮೆಂಟ್‌ಗಳಿಂದ ಎಷ್ಟೋ ಜನ ಆತ್ಮಹತ್ಯೆಗೂ ಶರಣಾಗಿದ್ದಾರೆ. ಇದೇ ವಿಷಯಗಳನ್ನು ಆಧರಿಸಿ ಸಿನಿಮಾ ಮಾಡಿದ್ದೇವೆ ಎಂದು ರಮೇಶ್​ ಅರವಿಂದ್​​ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ರಮೇಶ್‌ ರೆಡ್ಡಿ ಉಪಸ್ಥಿತರಿದ್ದರು.

    ಪೊಲೀಸರ ಭರ್ಜರಿ ಬೇಟೆ: ಕಳವಾಗಿದ್ದ 24 ಲಕ್ಷ ರೂ. ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

    ದಾವೂದ್​​ ನಂಟು, ನಕಲಿ ನೋಟು ದಂಧೆಗೆ ಶ್ರೀರಕ್ಷೆ! ಮಾಜಿ ಸಿಎಂ ವಿರುದ್ಧ ನವಾಬ್​ ಮಲಿಕ್​ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts