ಬೆಂಗಳೂರು: ನಟ-ನಿರ್ದೇಶಕ ಮತ್ತು ವಿಜಯವಾಣಿ ಅಂಕಣಕಾರ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ ಅವರ ವಿವಾಹ ಅಕ್ಷಯ್ ಅವರ ಜತೆಗೆ ಸೋಮವಾರ ಬೆಳಗ್ಗೆ ನೆರವೇರಿತು. ಬನ್ನೇರುಘಟ್ಟ ಬಳಿಯಿರುವ ಮಿರಾಯಾ ಗ್ರೀನ್ಸ್ ರೆಸಾರ್ಟ್ ನಲ್ಲಿ ಅಕ್ಷಯ್ ಮತ್ತು ನಿಹಾರಿಕಾ ಅವರ ಮದುವೆ ಎರಡೂ ಕುಟುಂಬದವರ ಮತ್ತು ಹಿತೈಷಿಗಳ ಸಮ್ಮುಖದಲ್ಲಿ ಕೋವಿಡ್ 19 ನಿಯಮಾನುಸಾರ ಜರುಗಿತು. ನಿಹಾರಿಕಾ ಮತ್ತು ಅಕ್ಷಯ್ ಇಬ್ಬರೂ ಒಂದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪರಸ್ಪರ ಪ್ರೀತಿಸಿ, ಇದೀಗ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ.
ಹಿರಿಯ ನಟ ದತ್ತಣ್ಣ, ಹಿರಿಯ ನಿರ್ದೇಶಕರಾದ ಪಿ.ಎಚ್. ವಿಶ್ವನಾಥ್, ಸುನೀಲ್ ಕುಮಾರ್ ದೇಸಾಯಿ, ಬಿ. ರಾಮಮೂರ್ತಿ, ಛಾಯಾಗ್ರಾಹಕ ಜಿ.ಎಸ್. ಭಾಸ್ಕರ್, ನಟ- ನಿರ್ದೇಶಕ ರಾಜೇಂದ್ರ ಕಾರಂತ್, ನಿರ್ವಪಕ ರಮೇಶ್ ರೆಡ್ಡಿ ಮುಂತಾದವರು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು. ಜನವರಿ ಎರಡನೇ ವಾರದಲ್ಲಿ ಚಿತ್ರರಂಗದ ಗಣ್ಯರಿಗೆಂದೇ ಆರತಕ್ಷತೆ ಆಯೋಜಿಸಿದ್ದು, ಇದರಲ್ಲಿ ಚಿತ್ರರಂಗದ ಸ್ನೇಹಿತರು ಭಾಗವಹಿಸಲಿದ್ದಾರೆ.
‘ಬನ್ನಿ ಪಾರ್ಟಿ ಮಾಡೋಣ’; ಸ್ಯಾಂಡಲ್ವುಡ್ ಗುರು ಕಡೆಯಿಂದ ಹಾಡಿನ ಆಹ್ವಾನ!
ಮೆಟ್ರೋನಲ್ಲೇ ಕಿಸ್ಸಿಂಗ್! ನಿರ್ಬಂಧಗಳನ್ನು ವಿರೋಧಿಸಿ ಸಾರ್ವಜನಿಕವಾಗಿ ಕಿಸ್ ಮಾಡಲು ಆರಂಭಿಸಿದ ಜೋಡಿಗಳು
‘ಸೆಕ್ಸ್ಪರ್ಟ್’ ಇನ್ನಿಲ್ಲ: ಇವರಿದ್ದಾಗ ಸಿಕ್ಕಿತ್ತು ಅದೆಷ್ಟೋ ಮಂದಿಗೆ ಸಾಂತ್ವನ-ಸಮಾಧಾನ…
ಈ ಧರ್ಮಗುರುವಿಗೆ 130 ಪತ್ನಿಯರು, 203 ಮಕ್ಕಳು: ಇವರ ಕುತೂಹಲದ ಸ್ಟೋರಿ ಇಲ್ಲಿದೆ…