More

    ಸಮಾಜದ ಒಳಿತಿಗೆ ರಾಮಾಯಣ ಮಾರ್ಗದರ್ಶಕ

    ಚಿಕ್ಕಮಗಳೂರು: ದೇಶದ ಅಭ್ಯುದಯಕ್ಕೆ, ಜಗತ್ತಿನ ಒಳಿತಿಗೆ ರಾಮ ಬೇಕು. ಒಳ್ಳೆಯ ವಿಚಾರಧಾರೆಗಳ ಅಧ್ಯಯನಕ್ಕೆ ರಾಮಾಯಣ ಪೂರಕ ಎಂದು ಸುಗಮ ಸಂಗೀತ ಗಂಗಾ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಹೇಳಿದರು.
    ಸುಗಮ ಸಂಗೀತ ಗಂಗಾ ನೇತೃತ್ವದಲ್ಲಿ ಬಸವನಹಳ್ಳಿ ರಂಗಣ್ಣನವರ ಛತ್ರದಲ್ಲಿ ಆಯೋಜಿಸಿದ್ದ ಶ್ರೀರಾಮ ಸಾಂಸ್ಕೃತಿಕ ಸಂಭ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಒಳಿತಿಗೆ ರಾಮ, ಸೀತಾಮಾತೆ, ಲಕ್ಷ್ಮಣ ಸೇರಿದಂತೆ ರಾಮಾಯಣ ಮಾರ್ಗದರ್ಶಿ. ಮಕ್ಕಳಿಗೆ ರಾಮಾಯಣ ಮತ್ತು ಮಹಾಭಾರತದಂತಹ ಆದರ್ಶ ಕೃತಿಗಳನ್ನು ಕಲಿಸುವುದು ಇಂದಿನ ಅಗತ್ಯ ಎಂದರು.
    ಆದರ್ಶ ರಾಜನಾದ ಶ್ರೀ ರಾಮಚಂದ್ರ ತಂದೆಗೆ ಆದರ್ಶ ಮಗನೂ ಹೌದು. ಹಾಗೆಯೇ ಆದರ್ಶ ಸಹೋದರನಾಗಿಯೂ ನಿಲ್ಲುತ್ತಾನೆ. ರಾಮನಿಗೂ ಕನ್ನಡನಾಡಿಗೂ ನಿಕಟ ಸಂಬಂಧವಿದೆ. ಹಿರೇಮಗಳೂರಿನಲ್ಲಿರುವ ಕೋದಂಡರಾಮನ ಬಲಭಾಗದಲ್ಲಿ ಸೀತಾಮಾತೆ ಇರುವ ವಿಗ್ರಹ ಜಗತ್ತಿನ ಬೇರೆಲ್ಲೂ ಇಲ್ಲ. ಯುಗದ ಕವಿ ಕುವೆಂಪು ರಚಿಸಿದ ರಾಮಾಯಣ ದರ್ಶನಂ ವಾಲ್ಮೀಕಿ ರಾಮಾಯಣಕ್ಕಿಂತಲೂ ಚೆನ್ನಾಗಿದೆ ಎಂದರು.
    ಐದು ವರ್ಷದ ಮಗುವಿನ ಬೆಳವಣಿಗೆ ಮತ್ತು ಭಾವಕ್ಕೆ ಅನುಗುಣವಾಗಿ ಬಾಲರಾಮನ ವಿಗ್ರಹವಿದೆ ಎಂಬುದನ್ನು ಮಕ್ಕಳ ತಜ್ಞನಾಗಿ ಗಮನಿಸಿದ್ದೇನೆ. ಮೈಸೂರಿನ ಶಿಲ್ಪಿ ಅರುಣ್ ರಾಮನ ವಿಗ್ರಹ ನಿರ್ಮಿಸಿ ಒಂದೇ ದಿನದಲ್ಲಿ ಜಗತ್ ವಿಖ್ಯಾತಿಗಳಿಸಿದರು. ಆಂಜನೇಯ ಹುಟ್ಟಿದ ನಾಡಿದು. ಜನ್ಮ ಭೂಮಿಯಲ್ಲಿ ಜ.22ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಐತಿಹಾಸಿಕ ಕ್ಷಣ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts